ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಅತ್ಯುತ್ತಮ ವಾಸಯೋಗ್ಯ ನಗರ!

Last Updated 4 ಡಿಸೆಂಬರ್ 2012, 11:24 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ಬೆಂಗಳೂರು ಸಿಟಿ ಇದೀಗ ಭಾರತದಲ್ಲಿಯೇ ವಾಸಕ್ಕೆ ಉತ್ತಮ ನಗರವಾಗಿ ಹೊರಹೊಮ್ಮಿದೆ.

ಮೆರ್ಸರ್ ಸಂಸ್ಥೆಯೊಂದು ಜಾಗತಿಕ ಮಟ್ಟದಲ್ಲಿ ಇತ್ತೀಚಿಗೆ ವಿಶ್ವದಾದ್ಯಂತ ನಡೆಸಿದ ಸಮೀಕ್ಷೆಯಲ್ಲಿ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

ಸಮೀಕ್ಷೆಯ ಪ್ರಕಾರ ಬೆಂಗಳೂರು ನಗರ ದೇಶದಲ್ಲಿನ ಪ್ರಮುಖ ಮೆಟ್ರೊ ನಗರಗಳಾದ ನವದೆಹಲಿ, ಮುಂಬೈ ಮತ್ತು ಕೋಲ್ಕತ್ತ ನಗರಗಳಿಗಿಂತ ಉತ್ತಮ ವಾಸಯೋಗ್ಯ ನಗರವಾಗಿ ಹೊರಹೊಮ್ಮಿದೆ.

ಮೆರ್ಸರ್ ಸಮೀಕ್ಷೆ ( 2012) ಪ್ರಕಾರ ಉತ್ತಮ, ಗುಣಮಟ್ಟದ ಜೀವನ ಸೂಚ್ಯಾಂಕದ ಅನ್ವಯ ಭಾರತೀಯ ನಗರಗಳ ಪೈಕಿ ಬೆಂಗಳೂರು 139 ಸೂಚ್ಯಾಂಕದೊಂದಿಗೆ ಮೊದಲ ಸ್ಥಾನದಲ್ಲಿದೆ.  ನವದೆಹಲಿ (143), ಮುಂಬೈ (146), ಚೆನ್ನೈ (150) ಮತ್ತು ಕೋಲ್ಕತ್ತ (151) ನಂತರದ ಸ್ಥಾನದಲ್ಲಿವೆ.

ಬೆಂಗಳೂರು ದೇಶದಲ್ಲಿ ಉತ್ತಮ ವಾಸಯೋಗ್ಯ ನಗರವಾಗಿ ಹೊರಹೊಮ್ಮಲು ಇಲ್ಲಿನ ಅಂತರರಾಷ್ಟ್ರೀಯ ಗುಣಮಟ್ಟದ ಶಾಲೆಗಳ ಪಾತ್ರ ಕೂಡ ಪ್ರಮುಖವಾಗಿದೆ.

ಇನ್ನು ನಗರ ಮೂಲಸೌಕರ್ಯ ವಿಷಯದಲ್ಲಿ ಮುಂಬೈ (134), ಕೋಲ್ಕತ್ತ (141), ನವದೆಹಲಿ (153), ಚೆನ್ನೈ (168) ನಂತರ ಬೆಂಗಳೂರು 170ರ ಶ್ರೇಣಿಯೊಂದಿಗೆ ಉನ್ನತ ಸ್ಥಾನದಲ್ಲಿದೆ ಎಂದು ಸಮೀಕ್ಷೆಯ ವರದಿಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT