ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಕಲಾ ಉತ್ಸವ

Last Updated 14 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಸಂಗೀತ, ನೃತ್ಯ ಹಾಗೂ ನಾಟಕ ಪ್ರಿಯರಿಗೆ ಭರಪೂರ ಮನರಂಜನೆ ನೀಡುವ ಬೆಂಗಳೂರು ಇಂಟರ್‌ನ್ಯಾಷನಲ್ ಆರ್ಟ್ಸ್ ಫೆಸ್ಟಿವಲ್ (ಬಿಐಎಎಫ್) ಗುರುವಾರದಿಂದ ಸೆ. 25ರವರೆಗೆ ನಡೆಯಲಿದೆ.

ಈ ಉತ್ಸವದಲ್ಲಿ ಸಂಗೀತ, ನೃತ್ಯ ಹಾಗೂ ರಂಗಭೂಮಿಯ ಖ್ಯಾತನಾಮರು, ವಿದೇಶಿ ಕಲಾವಿದರು ಪಾಲ್ಗೊಂಡು ತಮ್ಮ ಪ್ರತಿಭೆ ಪ್ರದರ್ಶಿಸಲಿದ್ದಾರೆ. ತಮ್ಮ ಕಲಾ ಚಮತ್ಕಾರದ ಮೂಲಕ ಅಭಿಮಾನಿಗಳಲ್ಲಿ ಮಿಂಚಿನ ಸಂಚಾರ ಉಂಟುಮಾಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಐಎಎಫ್ (ಆರ್ಟಿಸ್ಟ್ಸ್ ಇಂಟ್ರೊಸ್ಪೆಕ್ಟಿವ್ ಮೂವ್‌ಮೆಂಟ್) ಸಹಯೋಗವಿದೆ.

8 ದಿನ 9 ವಿವಿಧ ಸ್ಥಳಗಳಲ್ಲಿ ವಿವಿಧ ಕಲಾವಿದರು ಕಲಾ ಪ್ರದರ್ಶನಕ್ಕೆ ವೇದಿಕೆ ಒದಗಿಸುತ್ತಿರುವುದು ಇದರ ವೈಶಿಷ್ಟ್ಯಗಳಲ್ಲಿ ಒಂದು. ಸುಮಾರು 175 ಕಲಾವಿದರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.

ನಾರ್ವೆ, ಜಪಾನ್, ಮೆಕ್ಸಿಕೊ, ಅಮೆರಿಕದ ತಂಡಗಳ ಪಾಶ್ಚಾತ್ಯ ಗಾಯನ, ವಾದನ, ಜಾಜ್, ಹಿಪ್‌ಹಾಪ್ ಸಂಗೀತಗಳ ಜತೆ ಭಾರತೀಯ ಸಾಂಪ್ರದಾಯಿಕ ಸಂಗೀತ, ನೃತ್ಯಗಳನ್ನು ಇಲ್ಲಿ ಆಸ್ವಾದಿಸಬಹುದು.

ಬಿಐಎಎಫ್ ವರ್ಷಕ್ಕೆ ಸುಮಾರು 10 ಕಲಾ ಉತ್ಸವವನ್ನು ಆಯೋಜಿಸುತ್ತಾ ಬರುತ್ತಿದೆ. ಕಲೆ, ಸಂಗೀತ, ನಾಟಕ ಮೊದಲಾದ ಕಲೆಗಳ ಪೋಷಣೆಯಲ್ಲಿ ತೊಡಗಿಸಿಕೊಂಡಿದೆ. ಕೇಂದ್ರ ಸರ್ಕಾರದ ಸಂಸ್ಕೃತಿ ಇಲಾಖೆಯಿಂದ ಮೆಚ್ಚುಗೆ ಹಾಗೂ ಮಾನ್ಯತೆ ಪಡೆದುಕೊಂಡಿದೆ.

ಗುರುವಾರ ಸಂಜೆ 6.30ಕ್ಕೆ ಚೌಡಯ್ಯ ಸ್ಮಾರಕ ಸಭಾಂಗಣದಲ್ಲಿ ಖ್ಯಾತ ಜಾಜ್ ಗಾಯಕ ಸೋನಂ ಕಾರ್ಲಾ ಅವರ ಕಲ್ಪನೆಯ ಕೂಸು ಸೂಫಿ  ಗಾಸ್ಪೆಲ್ ಪ್ರಾಜೆಕ್ಟ್‌ನ ಪ್ರಾರ್ಥನೆಯೊಂದಿಗೆ ಉತ್ಸವ ಪ್ರಾರಂಭ.

ನಂತರ ಆನೂರು ಅನಂತಕೃಷ್ಣ ಶರ್ಮಾ ಮತ್ತು ತಂಡದಿಂದ `ಲಯ ಲಾವಣ್ಯ~ ವಾದ್ಯಗೋಷ್ಠಿ, ಜೈ ಹೋ ಖ್ಯಾತಿಯ ಮೈಸೂರು ಗಾಯಕ `ವಿಜಯ್ ಪ್ರಕಾಶ್~ ಸಂಗೀತ ಗೋಷ್ಠಿ. 

ಶುಕ್ರವಾರ ಸಂಜೆ 7ಕ್ಕೆ ವಿಠಲ ಮಲ್ಯ ರಸ್ತೆ ಯುಬಿ ಸಿಟಿಯ ಆ್ಯಂಫಿ ಥಿಯೇಟರ್‌ನಲ್ಲಿ ಅಮೆರಿಕಾ ಮತ್ತು ಭಾರತದ ಕಲಾವಿದರಿಂದ `ಸಿಂಗಿಂಗ್ ಸ್ಲೈಡ್ಸ್ ಅಂಡ್ ಸ್ಲೈಡಿಂಗ್ ಸಾಂಗ್ಸ್~ ಸಂಗೀತ ಕಾರ್ಯಕ್ರಮ. ಭಾಗವಹಿಸುವ ಕಲಾವಿದರು: ಚಿತ್ರವೀಣಾ ಎನ್. ರವಿಕಿರಣ್, ಅಮೆರಿಕದ ಬಿಲ್ಲಿ ಕಾರ್ಡಿನ್ ಅವರಿಂದ ಸ್ಲೈಡ್ ಗಿಟಾರ್. ಅತಿಥಿ ಕಲಾವಿದೆ: ಸುಧಾ ರಘುನಾಥನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT