ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಡರ್ಬಿ ರೇಸ್ : ಫಾರೆವರ್ ಗ್ಲೋರಿ ಗೆಲ್ಲುವ ನಿರೀಕ್ಷೆ

Last Updated 26 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿದ್ದ `ಬೆಂಗಳೂರು ಡರ್ಬಿ~ ಶುಕ್ರವಾರ ನಡೆಯಲಿದೆ. `ಫೀಲ್ಡ್ ಮಾರ್ಶಲ್~, `ಇನ್‌ದಿ ಸ್ಪಾಟ್‌ಲೈಟ್~ `ಸ್ಟಾರ್ ಮಾರ್ಕ್ಯೂಸ್~ ಮತ್ತು `ಸದರ್ನ್ ಬೇ~ ಅಂತಹ ಉತ್ತಮ ದರ್ಜೆಯ ಕುದುರೆಗಳ ಅನುಪಸ್ಥಿತಿಯಿಂದ ಮತ್ತು ಪ್ರಾಯೋಜಕರಿಲ್ಲದ ಕಾರಣ ಈ ಬಾರಿಯ ಡರ್ಬಿ ತನ್ನ ಆಕರ್ಷಣೆ ಯನ್ನು ಕಳೆದುಕೊಂಡಿದೆ.

ಎರಡನೇ ದರ್ಜೆ ಸಾಲಿನ ಹನ್ನೊಂದು ಕುದುರೆಗಳು ಡರ್ಬಿಯಲ್ಲಿ ಭಾಗವಹಿಸುತ್ತಿವೆ. ಅವುಗಳಲ್ಲಿ, ಹೈದರಾಬಾದ್‌ನಲ್ಲಿ ಓಕ್ಸ್ ಗೆದ್ದು ಬಂದಿರುವ `ಸದರ್ನ್ ಬೇ~ ಮತ್ತು ಅದೇ ರೇಸ್‌ನಲ್ಲಿ ಸೋತಿರುವ        `ಪ್ರಾಕ್ಟಿಕಲಿ ಪರ್ಫೆಕ್ಟ್~ ಹಾಗೂ `ಬೆಂಗಳೂರು 2000 ಗಿನ್ನಿಸ್~ನಲ್ಲಿ 2ನೇಯದಾಗಿರುವ `ಮ್ಯಾಡೊಕ್ಸ್~ ಪ್ರಮುಖ ಸ್ಪರ್ಧಿಗಳು. 

`ಸದರ್ನ್ ಬೇ~ ಮತ್ತು `ಪ್ರಾಕ್ಟಿಕಲಿ ಪರ್ಫೆಕ್ಟ್~ ಡರ್ಬಿ ದೂರವನ್ನು ಓಡಿ ಗೆಲ್ಲುವ ತಮ್ಮ ಶಕ್ತಿಯನ್ನು ಈಗಾಗಲೇ ಸಾಬೀತುಪಡಿಸಿವೆ. ಅದೇ ರೀತಿ `ಮ್ಯಾಡೊಕ್ಸ್~ ಸಹ ಈ ಡರ್ಬಿ ದೂರಕ್ರಮಿಸುವ ಸಾಮರ್ಥ್ಯಹೊಂದಿದೆ. ಆದ್ದರಿಂದ ಈ 3 ಕುದುರೆಗಳ ನಡುವೆ ನೇರ ಸ್ಪರ್ಧೆ ನಡೆಯುವುದು ಖಚಿತ.  

ಈ ಮೂರು ಕುದುರೆಗಳಲ್ಲಿ,  `ಸದರ್ನ್ ಬೇ~ ತುಸು ಮುಂಚೂಣಿಯಲ್ಲಿದ್ದು, ಈ ಪ್ರತಿಷ್ಠಿತ ಡರ್ಬಿ ರೇಸ್ ಗೆಲ್ಲಬಹುದೆಂಬುದು ನಮ್ಮ ಅನಿಸಿಕೆ. ಮಧ್ಯಾಹ್ನ 1-15ರಿಂದ ಪ್ರಾರಂಭವಾಗಲಿರುವ ದಿನದ ಒಂಬತ್ತು ರೇಸ್‌ಗಳಿಗೆ ನಮ್ಮ ಆಯ್ಕೆ ಈ ಕೆಳಕಂಡಂತಿವೆ :

1. ನೇತ್ರಾವತಿ ಟ್ರೋಫಿ-ಡಿ.2; 1400 ಮೀ.
ಯಂಗ್ ಅಚೀವರ್ 1, ಯೂನಿಕ್ ಶೋ 2, ಮ್ಯಾಜಿಕ್ ವೇವ್ 3
2. ಇಂಡಿಯನ್ ರಿಪಬ್ಲಿಕ್ ಟ್ರೋಫಿ; 1400 ಮೀ.
ಹಿಲ್ ಡಿಯೊರೊ 1, ಏಸ್ ಬ್ಲಡ್ 2, ಮ್ಯಾಗ್ನಿಟ್ಯೂಡ್ ಸ್ಟಾರ್ 3
3. ಎನ್.ಆರ್.ಸಿ.ಇ. ಕಪ್; 1400 ಮೀ.
ಬೊರ‌್ಸಾಲಿನೊ 1, ಸ್ಯಾಂಡ್‌ಸ್ಟಾರ್ಮ್ 2, ಆಬರ್ನ್ ಬ್ಯೂಟಿ 3
4. ಭರಚುಕ್ಕಿ ಕಪ್; 1200 ಮೀ.
ಸಾಮರ್‌ಸೆಟ್ ರೋಸ್1, ಫ್ಲೈಯಿಂಗ್ ಸ್ನೋ 2, ರೈಟ್ ಆನ್ ಟೈಮ್ 3
5. ನೇತ್ರಾವತಿ ಟ್ರೋಫಿ-ಡಿ.1; 1400 ಮೀ.
ಐಬಿಲೀವ್‌ಇನ್‌ಮಿರಾಕಲ್ಸ್ 1, ರಪ್ಪಡನ್ ಗ್ಲೋರಿ 2, ಇಂಡಿಯನ್ ಪ್ರೈಡ್ 3
7. ವಿಧಾನ ಸೌಧ ಕಪ್-ಡಿ.1; 1400 ಮೀ.
ಕೃಪಾ 1, ಇಂದ್ರಾವತಿ 2, ಕ್ರಾನಿಕಲ್ 3
8. ಮೈಸೂರ್ ರೇಸ್ ಕ್ಲಬ್ ಟ್ರೊಫಿ; 1600 ಮೀ.
ಇಮ್ಮೆನ್ಸ್ 1, ಸ್ಪಿಯರ್‌ಹೆಡ್ 2, ಒನ್ ಲೈಫ್ ಟು ಲವ್ 3
9. ವಿಧಾನ ಸೌಧ ಕಪ್-ಡಿ.2; 1600 ಮೀ.
ಸನ್‌ಸೆಟ್ ಗ್ರಿಲ್ 1, ಎಮಿರಾಲ್ಡ್ 2, ಸೂಪರ್ ಸ್ಪೆಕ್ಟಾಕಲ್ 3
ಉತ್ತಮ ಬೆಟ್: ಬೊರ‌್ಸಾಲಿನೊ
ಬೆಂಗಳೂರು ಮತ್ತು ಮೈಸೂರಿನಲ್ಲಿ ಜಾಕ್‌ಪಾಟ್‌ಗೆ 5, 6, 7, 8 ಮತ್ತು 9; ಮಿನಿ ಜಾಕ್‌ಪಾಟ್‌ಗೆ 2, 4, 6 ಮತ್ತು 7; ಮೊದಲನೇ ಟ್ರಿಬಲ್‌ಗೆ 3, 4 ಮತ್ತು 5; ಎರಡನೇ ಟ್ರಿಬಲ್‌ಗೆ 6, 8 ಮತ್ತು 9; ಎಕ್ಸಾಕ್ಟ ಪೂಲ್ಸ್ 4, 6, 7 ಮತ್ತು 9.

6. ಬೆಂಗಳೂರು ಡರ್ಬಿ; 2400 ಮೀ.
ಫಾರೆವರ್ ಗ್ಲೋರಿ 1, ಮ್ಯಾಡೊಕ್ಸ್ 2, ಪ್ರಾಕ್ಟಿಕಲಿ ಪರ್ಫೆಕ್ಟ್ 3


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT