ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ತಂಡಕ್ಕೆ ಚಾಂಪಿಯನ್ ಪಟ್ಟ

Last Updated 4 ಸೆಪ್ಟೆಂಬರ್ 2013, 9:44 IST
ಅಕ್ಷರ ಗಾತ್ರ

ರಾಮನಗರ: `ಸಮರ್ಥನಂ' ಅಂಗವಿಕಲರ ಸಂಸ್ಥೆ ಮತ್ತು ಭಾರತ ಅಂಧರ ಕ್ರಿಕೆಟ್ ಸಂಸ್ಥೆ ಜಂಟಿಯಾಗಿ ರಾಮನಗರದಲ್ಲಿ ನಡೆಸಿದ ರಾಜ್ಯಮಟ್ಟದ ಅಂಧರ `ಟ್ವೆಂಟಿ-20' ಕ್ರಿಕೆಟ್ ಟೂರ್ನಿಯಲ್ಲಿ ಬೆಂಗಳೂರು ತಂಡ ಚಾಂಪಿಯನ್ ಆಗಿದೆ.

ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ `ಫೈನಲ್' ಪಂದ್ಯದಲ್ಲಿ ಬೆಂಗಳೂರು ತಂಡವು ಚಿಕ್ಕಮಗಳೂರು ತಂಡವನ್ನು ಸೋಲಿಸಿ ಚಾಂಪಿಯನ್ ಪಟ್ಟ ಪಡೆಯಿತು. ಪಂದ್ಯಗಳನ್ನು 15 ಓವರ್‌ಗಳಿಗೆ ಮೊಟಕುಗೊಳಿಸಲಾಗಿತ್ತು.

ಮೊದಲು ಬ್ಯಾಟ್ ಮಾಡಿದ ಚಿಕ್ಕಮಗಳೂರು ತಂಡ 14.5 ಓವರ್‌ಗಳಲ್ಲಿ 10 ವಿಕೆಟ್ ಕಳೆದುಕೊಂಡು 110 ರನ್ ಪೇರಿಸಿತು. ಆಟಗಾರ ಸುನಿಲ್ 39, ಸುರೇಶ್ 23 ರನ್ ಸಿಡಿಸಿದರು. ಬೆಂಗಳೂರು ತಂಡದ ಬೌಲರ್ ಮಾರುತಿ ಐದು ವಿಕೆಟ್ ಕಬಳಿಸಿದರು.

ಗುರಿ ಬೆನ್ನತ್ತಿದ ಬೆಂಗಳೂರು ತಂಡ ಕೇವಲ 11.1 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ112 ರನ್ ಕಲೆಹಾಕಿ ವಿಜಯ ಪತಾಕೆ ಹಾರಿಸಿತು. ಬೆಂಗಳೂರು ತಂಡದ ಆಟಗಾರ ಮಹೇಶ್ 34, ಭಾಸ್ಕರ್ 27 ರನ್ ಹೊಡೆದರು. ಮಾರುತಿ ಪಂದ್ಯ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದರು.

ಸೆಮಿಫೈನಲ್‌ನಲ್ಲಿ ಎಡವಿದ ರಾಮನಗರ:
ಇದಕ್ಕೂ ಮೊದಲು ನಡೆದ ಸೆಮಿಫೈನಲ್ ಪಂದ್ಯದಲ್ಲಿ ಆತಿಥೇಯ ರಾಮನಗರ ತಂಡವು ಬೆಂಗಳೂರು ತಂಡದ ವಿರುದ್ಧ ಸೋಲನುಭವಿಸಿತು.

ಮೊದಲು ಬ್ಯಾಟ್‌ಮಾಡಿದ ರಾಮನಗರ ತಂಡ 13.4 ಓವರ್‌ಗಳಲ್ಲಿ 10 ವಿಕೆಟ್ ಕಳೆದುಕೊಂಡ 83 ರನ್ ಸೇರಿಸಿತು. ಮಹದೇವ್ 22 ರನ್ ಗಳಿಸಿದರು. ಈ ಗುರಿಯನ್ನು ಬೆನ್ನತ್ತಿದ ಬೆಂಗಳೂರು ತಂಡ 9.3 ಓವರ್‌ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು 84 ರನ್‌ಗಳಿಸಿ ವಿಜಯ ಸಾಧಿಸಿತು.

ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಬೆಳಗಾವಿ ತಂಡವು ಚಿಕ್ಕಮಗಳೂರು ತಂಡದ ಎದುರು ಸೋಲನುಭವಿಸಿತು. 15 ಓವರ್‌ಗಳಲ್ಲಿ ಬೆಳಗಾವಿ ತಂಡವು 6 ವಿಕೆಟ್ ಕಳೆದುಕೊಂಡು 132 ರನ್ ಕಲೆ ಹಾಕಿದರೆ, ಈ ಗುರಿಯನ್ನು ಚಿಕ್ಕಮಗಳೂರು ತಂಡ 12.2 ಓವರ್‌ನಲ್ಲಿ ಮೂರು ವಿಕೆಟ್ ಕಳೆದುಕೊಂಡು ತಲುಪುವ ಮೂಲಕ ಫೈನಲ್ ಪ್ರವೇಶ ಪಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT