ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಬೆಳಕಿಂಡಿ

Last Updated 16 ನವೆಂಬರ್ 2011, 19:30 IST
ಅಕ್ಷರ ಗಾತ್ರ

* ಬೆಂಗಳೂರಿಗೆ ಉದ್ಯಾನನಗರಿ ಎಂಬ ಹೆಸರು ಬರಲು ಕಾರಣವಾದ ಕೆಂಪುತೋಟ (ಲಾಲ್‌ಬಾಗ್)ದಲ್ಲಿ ಸುಂದರ ಗಾಜಿನ ಮನೆ ನಿರ್ಮಾಣ ಆರಂಭವಾಗಿದ್ದು 1889 ರಲ್ಲಿ.

* ನಾಡಿನ ಮಹಿಳಾ ಬದುಕನ್ನು ಪರಿಚಯ ಮಾಡಿಕೊಡುವ `ಶಾಶ್ವತಿ~ ಸಂಗ್ರಹಾಲಯವನ್ನು ನೂತನ ಕಟ್ಟಡದಲ್ಲಿ ಉದ್ಘಾಟಿಸಿದ್ದು ಕೋಲ್ಕತ್ತದ ರವೀಂದ್ರ ಭಾರತಿ ವಿಶ್ವವಿದ್ಯಾಲಯದ ಕುಲಪತಿ ಡಾ. ಲೋಮಾ ಚೌಧರಿ ಅವರು (25 ಡಿಸೆಂಬರ್ 1982).

* ಫ್ರಾನ್ಸಿಸ್ ಬುಖನನ್ ವೃತ್ತಿಯಿಂದ ವೈದ್ಯ. ಈಸ್ಟ್ ಇಂಡಿಯಾ ಕಂಪನಿಯಲ್ಲಿ ಸರ್ಜನ್. ಬೆಂಗಳೂರು ನಗರದ ಇತಿಹಾಸ ರಚನೆಯನ್ನು ಮೊದಲಿಗೆ ಶುರು ಮಾಡಿದವರು ಈ ಬುಖನನ್.

* ಹನುಮಂತನಗರದ ಗುಡ್ಡ ರಾಮ- ಹನುಮಂತರ ಆತ್ಮೀಯ ಸಂಬಂಧದ `ಆನಂದ ಮಿಲನಾದ್ರಿ~ ಎಂಬ ಹೆಸರನ್ನು ಹೊಂದಿದೆ.

* ರೇಷ್ಮೆ ಹುಳುಗಳಿಗೆ ತಗಲಿದ ರೋಗಕ್ಕೆ ಕಾರಣ ತಿಳಿಯಲು 1913 ರಲ್ಲಿ ಬೆಂಗಳೂರಿನಲ್ಲಿ ಪ್ರಯೋಗಾಲಯವನ್ನು ಶುರು ಮಾಡಲಾಯಿತು. ಅದಕ್ಕೆ ಆಗ ಕರೆದ ಹೆಸರು `ಟಾಟಾ ಸಿಲ್ಕ್ ಫಾರಂ~. ಈಗ ಫಾರಂ ಇಲ್ಲ. ಹೆಸರು ಮಾತ್ರ ಶಾಶ್ವತವಾಗಿ ಉಳಿದಿದೆ.

* ಮಹಾತ್ಮಾಗಾಂಧಿ ಅವರು ಬೆಂಗಳೂರಿನ ಬಗ್ಗೆ ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ಬೆಂಗಳೂರು ಸಿಟಿ ರೈಲ್ವೆ ಸ್ಟೇಷನ್ ಶಿಲಾಫಲಕದಲ್ಲಿ ಬರೆದು ಪ್ರತಿಷ್ಠಾಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT