ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಬೆಳಕಿಂಡಿ

Last Updated 23 ಮಾರ್ಚ್ 2011, 19:30 IST
ಅಕ್ಷರ ಗಾತ್ರ

* ಬೆಂಗಳೂರು ಪೇಟೆ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದ ಜೋಕ್ಸಿ ಅವರ ಮುಂದಾಳತ್ವದಲ್ಲಿ ಬೆಂಗಳೂರು ಮೆಡಿಕಲ್ ಸ್ಕೂಲ್ ಪ್ರಾರಂಭಗೊಂಡಿದ್ದು 1880ರ ನವೆಂಬರ್ 16 ರಂದು. ಅದೇ ಬೆಳೆದು ಬೆಂಗಳೂರು ವೈದ್ಯಕೀಯ ಕಾಲೇಜಾಯಿತು.

* ಹೈದರಾಬಾದ್ ನಿಜಾಂ ಸರ್ಕಾರದ ಅಧೀನದಲ್ಲಿದ್ದ ಡೆಕ್ಕನ್ ಏರ್‌ವೇಸ್ 1946 ರಲ್ಲಿ ಹೈದರಾಬಾದ್ - ಬೆಂಗಳೂರು ನಡುವಣ ವಿಮಾನಯಾನ ಸೇವೆ ಶುರು ಮಾಡಿತು.

* ಭಾರತೀಯ ಬಾಹ್ಯಾಕಾಶ ಸಂಸ್ಥೆಯು ಪ್ರೊ. ಯು. ಆರ್. ರಾವ್ ಅವರ ನೇತೃತ್ವದಲ್ಲಿ ಕಾರ್ಯಾರಂಭ ಮಾಡಿದ್ದು ಪೀಣ್ಯ ಕೈಗಾರಿಕಾ ಪ್ರದೇಶದ ಕೈಗಾರಿಕಾ ಷೆಡ್‌ಗಳಲ್ಲಿ. ಇಲ್ಲಿಯೇ ದೇಶದ ಮೊದಲ ಬಹೂಪಯೋಗಿ ಸಂಪರ್ಕ ಉಪಗ್ರಹ ‘ಆರ್ಯಭಟ’ ರೂಪುಗೊಂಡಿದ್ದು.

* ಬೆಂಗಳೂರಿನಲ್ಲಿ ಮೊದಲ ವಾದ್ಯಗೋಷ್ಠಿ ‘ಸರಸ್ವತಿ ಆರ್ಕೆಸ್ಟ್ರಾ’. ಇದನ್ನು ಪ್ರಾರಂಭಿಸಿದವರು ಎಂ. ಎಸ್. ನಟರಾಜ್. ಇವರ ಪತ್ನಿ ಹೆಸರಾಂತ ನೃತ್ಯಗಾತಿ ಮಾಯಾರಾವ್.

* ಕಾವೇರಿ ನದಿ ನೀರು ಬೆಂಗಳೂರಿನಲ್ಲಿ ಮೊಟ್ಟ ಮೊದಲ ಸಲ ಬಳಕೆಗೆ ಬಂದಿದ್ದು ಸೌಥ್ ಎಂಡ್ ವೃತ್ತದ ಬಳಿ (1974).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT