ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬ್ರಿಟಿಷ್ ಸ್ಟ್ಯಾಂಡರ್ಡ್ ಗರಿ

Last Updated 10 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು:  ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (ಬಿಐಎಎಲ್)ಕ್ಕೆ  ಬ್ರಿಟಿಷ್ ಸ್ಟ್ಯಾಂಡರ್ಡ್ ಇನ್ಸ್‌ಟಿಟ್ಯೂಷನ್ (ಬಿಎಸ್‌ಐ) ನ ಬಿಎಸ್ ಪ್ರಮಾಣಪತ್ರ ಪುರಸ್ಕಾರ ದೊರಕಿದೆ ಎಂದು ಬಿಐಎಎಲ್‌ನ ಅಧಿಕಾರಿಗಳು ತಿಳಿಸಿದ್ದಾರೆ.

ಈ ಮೂಲಕ ಬಿಐಎಎಲ್ ಏಷ್ಯಾ-ಪೆಸಿಫಿಕ್ ವಲಯದಲ್ಲೇ ಮೊದಲ  ಬಿಎಸ್(25999-2007) ಪ್ರಮಾಣಪತ್ರ ಪಡೆದ ಹೆಗ್ಗಳಿಕೆಗೆ ಪಾತ್ರವಾಗಿದೆ. ಹತ್ತು ತಿಂಗಳಲ್ಲಿ ಪ್ರಯಾಣಿಕರಿಗೆ ಅತ್ಯುತ್ತಮ ಸೇವೆ ನೀಡಿರುವುದು ಮಾತ್ರವಲ್ಲದೆ, ದೇಶದ ವಿವಿಧ ನಿಲ್ದಾಣಗಳ ಪೈಕಿ ಉತ್ತಮ ನಿರ್ವಹಣೆ ತೋರಿದ್ದರಿಂದ ಬಿಎಸ್‌ಐ ನ ಪ್ರಮಾಣಪತ್ರ ಪಡೆಯಲು ಸಾಧ್ಯವಾಗಿದೆ ಎಂದು ಬಿಎಸ್‌ಐ ಗುಂಪಿನ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ವೆಂಕಟರಾಂ ಅರಬೋಲು ತಿಳಿಸಿದ್ದಾರೆ.

ಬಿಎಸ್‌ಐ 2011ರ ಜನವರಿಯಿಂದಲೂ ನಿಲ್ದಾಣದ ಬಗೆಗೆ ನಿರಂತರ ಅಧ್ಯಯನ ನಡೆಸಿ, ವಿವಿಧ ಮಾನದಂಡಗಳಿಂದ ಪರೀಕ್ಷಿಸಿ ಮತ್ತು ಅಂತರಿಕ ಲೆಕ್ಕಪರಿಶೋಧನೆ ನಡೆಸಿದ ಬಳಿಕವೇ ಈ ಗೌರವ ನೀಡಲಾಗಿದೆ  ಎಂದು ಬಿಎಸ್‌ಐನ ನಿರ್ದೇಶಕರು ತಿಳಿಸಿದ್ದಾರೆ.

`ಪ್ರಯಾಣಿಕರ ಸುರಕ್ಷತೆ ಮತ್ತು ಗ್ರಾಹಕರಿಗೆ ಉತ್ತಮ ಸೇವಾ ಸೌಲಭ್ಯ ಕಲ್ಪಿಸುವುದಕ್ಕಾಗಿ  ಬಿಐಎಎಲ್‌ನ ಸಿಬ್ಬಂದಿ ವರ್ಗ ಅವಿರತವಾಗಿ ಶ್ರಮಿಸಿದ್ದರ ಫಲವೇ ಈ ಗೌರವ~ ಎಂದು ಬಿಐಎಎಲ್‌ನ ವ್ಯವಸ್ಥಾಪಕ ನಿರ್ದೇಶಕ ಸಂಜಯ್ ರೆಡ್ಡಿ ಪ್ರತಿಕ್ರಿಯಿಸಿದ್ದಾರೆ.

ಬ್ರಿಟಿಷ್ ಸ್ಟ್ಯಾಂಡರ್ಡ್ ಇನ್ಸ್‌ಟಿಟ್ಯೂಷನ್ ಲಾಭರಹಿತ ಸ್ವಯಂ ಸೇವಾ ಸಂಸ್ಥೆಯಾಗಿದ್ದು ವಿಶ್ವದ 150 ದೇಶಗಳಲ್ಲಿ ಸಕ್ರಿಯವಾಗಿದೆ. ಇದು 1901 ರಿಂದಲೂ ಎಂಜಿನಿಯರಿಂಗ್, ವಾಣಿಜ್ಯ, ತಂತ್ರಜ್ಞಾನಗಳ ಗುಣಮಟ್ಟವನ್ನು ಮಾಪನ ಮಾಡಿ  ಪ್ರಮಾಣ ಪತ್ರ  ನೀಡುತ್ತ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT