ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ವಿವಿ ಹಂಗಾಮಿ ಕುಲಪತಿಯಾಗಿ ಡಾ. ಎನ್. ರಂಗಸ್ವಾಮಿ

Last Updated 17 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಬೆಂಗಳೂರು ವಿಶ್ವವಿದ್ಯಾಲಯದ ವಿವಿಧ ವಿಭಾಗಗಳಿಗೆ ಮುಖ್ಯಸ್ಥರನ್ನು ಕೂಡಲೇ ನೇಮಕ ಮಾಡಲಾಗುವುದು~ ಎಂದು ಹಂಗಾಮಿ ಕುಲಪತಿ ಡಾ.ಎನ್. ರಂಗಸ್ವಾಮಿ ಪ್ರಕಟಿಸಿದರು.

ವಿವಿ ಹಂಗಾಮಿ ಕುಲಪತಿಯಾಗಿ ಬುಧವಾರ ಅಧಿಕಾರ ಸ್ವೀಕರಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿ, `ಮುಖ್ಯಸ್ಥರ ನೇಮಕ ವಿಳಂಬದಿಂದಾಗಿ ವಿಭಾಗಗಳ ಕಾರ್ಯಚಟುವಟಿಕೆಯಲ್ಲಿ ಹಿನ್ನಡೆ ಉಂಟಾಗಿದೆ. ಹೀಗಾಗಿ, ಮುಖ್ಯಸ್ಥರ ನೇಮಕಕ್ಕೆ ಮೊದಲ ಆದ್ಯತೆ ನೀಡಲಾಗುವುದು~ ಎಂದರು.

`ಅಂತರರಾಷ್ಟ್ರೀಯ ಜರ್ನಲ್‌ಗಳಿಗೆ ವಿವಿಯ ಪ್ರಾಧ್ಯಾಪಕರ ಕೊಡುಗೆ ಹೆಚ್ಚಬೇಕು. ಈ ನಿಟ್ಟಿನಲ್ಲಿ ಅವರಿಗೆ ಪ್ರೋತ್ಸಾಹ ನೀಡಲಾಗುವುದು ಹಾಗೂ ಸಂಶೋಧನಾ ಚಟುವಟಿಕೆಗಳಿಗೆ ಹೆಚ್ಚು ಒತ್ತು ನೀಡಲಾಗುವುದು~ ಎಂದರು.

`ನಾನು ವ್ಯವಸ್ಥೆಯಲ್ಲಿ ನಂಬಿಕೆ ಹೊಂದಿರುವವನು. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇನೆ. ಡಾ.ಎನ್. ಪ್ರಭುದೇವ್ ಆರಂಭಿಸಿದ ಸುಧಾರಣಾ ಪ್ರಕ್ರಿಯೆಗಳನ್ನು ಮುಂದುವರಿಸಲಾಗುವುದು~ ಎಂದರು.

ನಾನೂ ಸ್ಪರ್ಧೆಯಲ್ಲಿ: `ಕುಲಪತಿ ಹುದ್ದೆಗೆ ನಾನೂ ಸ್ಪರ್ಧೆಯಲ್ಲಿದ್ದೇನೆ. ಈ ಹುದ್ದೆಯನ್ನು ಅಲಂಕರಿಸಲು ನನ್ನ ಸಾಧನೆಗಳು ಪೂರಕವಾಗಲಿವೆ. ಆದರೆ, ಆಯ್ಕೆ ಸಂದರ್ಭ ಪ್ರಭಾವ ಬೀರುವ ಅಂಶಗಳ ಬಗ್ಗೆ ಈಗಲೇ ಏನೂ ಹೇಳಲು ಸಾಧ್ಯವಿಲ್ಲ~ ಎಂದು ಅವರು ತಿಳಿಸಿದರು.

ಪ್ರಭುದೇವ್ ಆಕ್ರೋಶ:  `ಕಳೆದ 10 ತಿಂಗಳಲ್ಲಿ ಕುಲಪತಿಯಾಗಿ ಸಾಕಷ್ಟು ಹಿಂದೆ ಅನುಭವಿಸಿದ್ದೇನೆ. ಇಂತಹ ನೋವಿನ ದಿನಗಳು ಮತ್ತೆಂದು ಬರಲು ಸಾಧ್ಯವಿಲ್ಲ. ಭಾರವಾದ ಹೃದಯದಿಂದ ಹಾಗೂ ನೋವಿನಿಂದ ನಿರ್ಗಮಿಸುತ್ತಿದ್ದೇನೆ~ ಎಂದು ನಿಕಟಪೂರ್ವ ಕುಲಪತಿ ಡಾ.ಎನ್.ಪ್ರಭುದೇವ್ ತಿಳಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, `ತಾವು ಆರಂಭಿಸಿದ ಸುಧಾರಣಾ ಪ್ರಕ್ರಿಯೆಗಳ ಬಗ್ಗೆ ಮಾಧ್ಯಮಗಳು ಬೆಳಕು ಚೆಲ್ಲಲಿಲ್ಲ. ಮಾಧ್ಯಮಗಳು ನಿರಂತರವಾಗಿ ಅಸಹಕಾರ ನೀಡಿದವು. ಇದು ಮಾಧ್ಯಮಗಳ ಪ್ರವೃತ್ತಿ~ ಎಂದು ಕಿಡಿಕಾರಿದ್ದಾರೆ.

ಅಣಕು ಶ್ರಾದ್ಧ: ನಗರದ ಸೆಂಟ್ರಲ್ ಕಾಲೇಜು ಆವರಣದಲ್ಲಿ ವಿಶ್ವವಿದ್ಯಾಲಯದ ಕೆಲ ಸಂಘಟನೆಗಳ ಕಾರ್ಯಕರ್ತರು ಬುಧವಾರ ನಿಕಟಪೂರ್ವ ಕುಲಪತಿ ಡಾ.ಎನ್.ಪ್ರಭುದೇವ್ ಅವರ `ಅಣಕು ಶ್ರಾದ್ಧ~ ನಡೆಸಿದರು. 
`ಅಣಕು ಶ್ರಾದ್ಧ~ಕ್ಕೆ ವಿದ್ಯಾರ್ಥಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, `ಈ ಕಾರ್ಯಾಚರಣೆಯ ಹಿಂದೆ ಸ್ಥಾಪಿತ ಹಿತಾಸಕ್ತಿಗಳು ಕೆಲಸ ಮಾಡಿವೆ~ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT