ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ವಿವಿಗೆ ಜಯ

ವಾರ್ಸಿಟಿ ಕ್ರಿಕೆಟ್: ಮಂಗಳೂರು ಮುನ್ನಡೆ, ಮೈಸೂರು ನಿರ್ಗಮನ
Last Updated 24 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಮಣಿಪಾಲ: ಯಶಸ್ಸಿನ ಅಲೆಯಲ್ಲಿರುವ ಅರ್ಜುನ್ ಹೊಯ್ಸಳ (133) ಮತ್ತೊಮ್ಮೆ ಶತಕ ಬಾರಿಸಿ,   ಬೆಂಗಳೂರು ವಿಶ್ವವಿದ್ಯಾಲಯ, ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಕ್ರಿಕೆಟ್ ಟೂರ್ನಿಯಲ್ಲಿ ಕೊಯಮತ್ತೂರಿನ ಭಾರತಿಯಾರ್ ವಿ.ವಿ. ತಂಡದ ಮೇಲೆ 210 ರನ್‌ಗಳ ಸುಲಭ ಗೆಲುವಿನಲ್ಲಿ ಗಮನ ಸೆಳೆದರು. ಬೆಂಗಳೂರು ವಿ.ವಿ. ಮೂರನೇ ಸುತ್ತಿಗೆ ಮುನ್ನಡೆಯಿತು.

ಮೊದಲ ಸುತ್ತಿನ ಪಂದ್ಯದಲ್ಲಿ ದ್ವಿಶತಕ ಬಾರಿಸಿದ್ದ ಹೆರಾನ್ಸ್ ಕ್ಲಬ್‌ನ ಆಟಗಾರ ಅರ್ಜುನ್, ಎನ್‌ಐಟಿಕೆ ಮೈದಾನದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಒಂದು ಸಿಕ್ಸರ್, 13 ಬೌಂಡರಿಗಳಿದ್ದ 133 ರನ್ (127 ಎಸೆತ) ಹೊಡೆದರು. ಬೆಂಗಳೂರು ವಿ.ವಿ. 50 ಓವರುಗಳಲ್ಲಿ 7 ವಿಕೆಟ್‌ಗೆ 328 ರನ್ ಕಲೆಹಾಕಿತು. ಉಲ್ಲಾಸ್ ಅರ್ಧಶತಕದ (60) ಕಾಣಿಕೆ ನೀಡಿದರು. ನಂತರ ನಿಶಿತ್ ಮತ್ತು ಸ್ಟಾಲಿನ್ ಹೂವರ್ ತಲಾ 3 ವಿಕೆಟ್ ಕಬಳಿಸಿ, ಭಾರತಿಯಾರ್ ವಿ.ವಿ.ಯನ್ನು 118 ರನ್ನಿಗೆ ಉರುಳಿಸಲು ನೆರವಾದರು.

ಮಂಗಳೂರು ವಿ.ವಿ., ಕಲ್ಲಿಕೋಟೆ ವಿ.ವಿ., ಅನಂತಪುರದ ಜೆಎನ್‌ಟಿಯು ವಿಶ್ವವಿದ್ಯಾಲಯ ಕೂಡ ಪ್ರಿಕ್ವಾರ್ಟರ್‌ಫೈನಲ್ ತಲುಪಿದವು.
ಮಂಗಳೂರು ವಿ.ವಿ. 4 ವಿಕೆಟ್‌ಗಳಿಂದ ಕೊಟ್ಟಾಯಮ್‌ನ ಮಹಾತ್ಮ ಗಾಂಧಿ ವಿ.ವಿ. ತಂಡವನ್ನು ಸೋಲಿಸಿದರೆ, ಕಲ್ಲಿಕೋಟೆ ವಿ.ವಿ., 83 ರನ್‌ಗಳಿಂದ ಮೈಸೂರು ವಿ.ವಿ. ಮೇಲೆ ಸುಲಭ ಜಯ ಪಡೆಯಿತು. ಜೆಎನ್‌ಟಿಯು  ಐದು ವಿಕೆಟ್‌ಗಳಿಂದ ಕೊಚ್ಚಿನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿ.ವಿ. ಮೇಲೆ ಗೆಲುವು ದಾಖಲಿಸಿತು.

ಚೆನ್ನೈನ ಭಾರತ್ ವಿ.ವಿ.ಯ ಸುರೇಂದರ್ ಎಸ್. 93 ಎಸೆತಗಳಲ್ಲಿ 121 ರನ್ ಸೂರೆಗೈದು (19 ಬೌಂ) ದಿನದ ಎರಡನೇ ಶತಕ ದಾಖಲಿಸಿದ ಶ್ರೇಯಕ್ಕೆ ಪಾತ್ರರಾದರು. ಹೀಗಾಗಿ ಅವರ ತಂಡ 129 ರನ್‌ಗಳಿಂದ ಮಧುರೈನ ಕಲಶಲಿಂಗಂ ವಿ.ವಿ. ಮೇಲೆ ಗೆಲ್ಲಲು ಅಷ್ಟೇನೂ ಕಷ್ಟಪಡಲಿಲ್ಲ.

ಸ್ಕೋರುಗಳು: ಎಂಐಟಿ ಮೈದಾನ:
ಕೊಚ್ಚಿನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿ.ವಿ, ಕೊಚ್ಚಿ: 46.4 ಓವರುಗಳಲ್ಲಿ 144 (ಶ್ರೀಹರಿ ಔಟಾಗದೇ 42; ಬಿ.ಚಕ್ರಿ 18ಕ್ಕೆ3, ಶಶಿಕಾಂತ್ 22ಕ್ಕೆ4); ಜೆಎನ್‌ಟಿಯು, ಅನಂತಪುರ: 34 ಓವರುಗಳಲ್ಲಿ 5 ವಿಕೆಟ್‌ಗೆ 145 (ಕೇಶವ ಕುಮಾರ್ ಔಟಾಗದೇ 53; ವೈಷ್ಣವ್ 32ಕ್ಕೆ3).
ಮಣಿಪಾಲ ವಿ.ವಿ. ಮೈದಾನ1:

ಕಲ್ಲಿಕೋಟೆ ವಿ.ವಿ: 44.3 ಓವರುಗಳಲ್ಲಿ 179 (ಡೇವಿಸ್ ಜೆ.ಮನವಾಳನ್ 39; ಶರ್ವಿನ್ 37ಕ್ಕೆ3, ಶಾಂತರಾಜ್ 17ಕ್ಕೆ2); ಮೈಸೂರು: 36.1 ಓವರುಗಳಲ್ಲಿ 96 (ನವೀನ್ ಎಂ. 54; ಮಹಮದ್ 27ಕ್ಕೆ4, ರಮೇಶ್ 17ಕ್ಕೆ2).

ಮಣಿಪಾಲ ವಿ.ವಿ. ಮೈದಾನ2:
ಮಹಾತ್ಮ ಗಾಂಧಿ ವಿ.ವಿ., ಕೊಟ್ಟಾಯಂ: 40.4 ಓವರುಗಳಲ್ಲಿ 132 (ರೋಹಿತ್ ರಜನೀಶ್ 58; ದರ್ಶನ್ 18ಕ್ಕೆ2, ಪವನ್ ಗೋಖಲೆ 21ಕ್ಕೆ2, ಶಮೀಕ್ 33ಕ್ಕೆ2, ರೀತೇಶ್ ಬಿ. 19ಕ್ಕೆ3); ಮಂಗಳೂರು ವಿ.ವಿ: 42 ಓವರುಗಳಲ್ಲಿ 6 ವಿಕೆಟ್‌ಗೆ 133 (ಅಶ್ರೀನ್ 34, ಎಂ.ಜಿ.ನವೀನ್ 31, ಮಹೇಶ್ ಶೆಣೈ ಔಟಾಗದೇ 22; ಮಹಮದ್ ಕಬೀರ್ 11ಕ್ಕೆ2, ವಿನು ಮನೋಹರನ್ 27ಕ್ಕೆ2).

ಎಂಜಿಎಂ ಕಾಲೇಜು ಮೈದಾನ:
ವಿಐಟಿ, ನೆಲ್ಲೂರು: 36.1 ಓವರುಗಳಲ್ಲಿ 148 (ಆಕಾಶ್ ಸುಮ್ರ 64, ಉನ್ನಿಕೃಷ್ಣನ್ 25, ಅಜೀಶ್ 30ಕ್ಕೆ2, ಅಖಿಲ್ ದಾಸ್ 28ಕ್ಕೆ2, ಬಾಲು ಡಿ. 12ಕ್ಕೆ3); ಕೇರಳ ವಿ.ವಿ.: 31.5 ಓವರುಗಳಲ್ಲಿ 5 ವಿಕೆಟ್‌ಗೆ 149 (ರಾಹುಲ್ ಪಿ. ಔಟಾಗದೇ 52, ಬಾಲು ಡಿ. ಔಟಾಗದೇ 32; ಅಂಕಿತ್ ಅಗರವಾಲ್ 30ಕ್ಕೆ2, ಆಕಾಶ್ ಸುಮ್ರ 19ಕ್ಕೆ2).

ಸುರತ್ಕಲ್‌ನ ಎನ್‌ಐಟಿಕೆ ಮೈದಾನ 1:
ಬೆಂಗಳೂರು ವಿ.ವಿ: 50 ಓವರುಗಳಲ್ಲಿ 7 ವಿಕೆಟ್‌ಗೆ 328 (ಅರ್ಜುನ್ ಹೊಯ್ಸಳ 133, ಉಲ್ಲಾಸ್ 60, ರಾಜ್ ಕುಮಾರ್ 37); ಭಾರತಿಯಾರ್ ವಿ.ವಿ., ಕೊಯಮತ್ತೂರು: 31.1 ಓವರುಗಳಲ್ಲಿ 9 ವಿಕೆಟ್‌ಗೆ 118 (ಅಭಿನವ್ 35, ಮಣಿಕಂಠನ್ 27; ಎಸ್.ಹೂವರ್ 21ಕ್ಕೆ3, ನಿಶಿತ್ 20ಕ್ಕೆ3).
ಸುರತ್ಕಲ್ ಎನ್‌ಐಟಿಕೆ ಮೈದಾನ2:

ಭಾರತ್ ವಿ.ವಿ., ಚೆನ್ನೈ: 50 ಓವರುಗಳಲ್ಲಿ 7 ವಿಕೆಟ್‌ಗೆ 292 (ಶಿವಕುಮಾರ್ 39; ಎಸ್.ಸುರೇಂದರ್ 121, ವಿಷ್ಣು ರಾಜ 54; ಜೆ.ರಾಮನಾಥನ್ 50ಕ್ಕೆ3); ಕಲಶಲಿಂಗಂ ವಿ.ವಿ., ಮಧುರೈ: 37.1 ಓವರುಗಳಲ್ಲಿ 163 (ಮುಖೇಶ್ ಕುಮಾರ್ 30, ವಿಘ್ನೇಶ್ವರನ್ 42; ಎಂ.ಕಾರ್ತಿಕೇಯನ್ 22ಕ್ಕೆ2, ವಿವೇಕ್ 31ಕ್ಕೆ2, ವಿಘ್ನೇಶಪತಿ 27ಕ್ಕೆ4).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT