ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಸಾಹಿತ್ಯ ಹಬ್ಬ : `ರೋಲ್ ಆಫ್ ಹಾನರ್' ಬಿಡುಗಡೆ

Last Updated 3 ಡಿಸೆಂಬರ್ 2012, 20:05 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಸಾಹಿತ್ಯ ಹಬ್ಬದ ಅಂಗವಾಗಿ ಕಾದಂಬರಿಕಾರ ಅಮನ್‌ದೀಪ್ ಸಂಧು ಅವರ ಇತ್ತೀಚಿನ ಇಂಗ್ಲಿಷ್ ಕಾದಂಬರಿ `ರೋಲ್ ಆಫ್ ಹಾನರ್' ಪುಸ್ತಕವು ನಗರದಲ್ಲಿ ಬಿಡುಗಡೆಗೊಂಡಿತು.

ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಗ್ ಮತ್ತು ಲೇಖಕ ಡಾ.ಉದಯ್ ಬಾಲಕೃಷ್ಣನ್ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 1984ರ ಆಪರೇಷನ್ ಬ್ಲೂ ಸ್ಟಾರ್ ನಂತರ ಅಮಾಯಕ ಸಿಖ್ಖರನ್ನು ಸೆರೆಹಿಡಿದು ಕೊಂದ ಕಥಾವಸ್ತುವನ್ನು ಕಾದಂಬರಿ ಒಳಗೊಂಡಿದೆ. ಪಂಜಾಬ್‌ನ ಜೆಸ್‌ಬಾದ್‌ನ ಮಿಲಿಟರಿ ಶಾಲೆಯ ಅಪ್ಪು ಎಂಬ ವಿದ್ಯಾರ್ಥಿಯ ಕನಸಿನ ಕಥೆಯನ್ನು ಕಾದಂಬರಿಯು ಒಳಗೊಂಡಿದೆ. ಪುಸ್ತಕದ ಬೆಲೆ 275 ರೂಪಾಯಿ.

ಸದ್ಯ ದೆಹಲಿಯಲ್ಲಿರುವ ಅಮನ್‌ದೀಪ್ ಸಂಧು ಅವರು ಹೈದರಾಬಾದ್ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ ಪದವಿ ಪಡೆದಿದ್ದಾರೆ. ಇವರ ಮೊದಲ ಕಾದಂಬರಿ `ಸೆಪಿಯಾ ಲೀವ್ಸ್' 2008ರಲ್ಲಿ ಪ್ರಕಟಗೊಂಡಿದೆ.

ಬೆಂಗಳೂರು ಸಾಹಿತ್ಯ ಹಬ್ಬವು ಇದೇ 7ರಿಂದ 9ರವರೆಗೆ ಮೂರು ದಿನಗಳ ಕಾಲ ನಗರದ ಜಯಮಹಲ್ ಪ್ಯಾಲೇಸ್‌ನಲ್ಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT