ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಸಾಹಿತ್ಯೋತ್ಸವದಲ್ಲಿ...

Last Updated 26 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಲೆಕ್ಟ್ರಾನಿಕ್ ಸಿಟಿಯ ಕ್ರೌನ್‌ ಪ್ಲಾಜಾದ ವೆಲಂಗಣಿ ಪಾರ್ಕ್‌ನಲ್ಲಿ ಮೂರು ದಿನಗಳ ಸಾಹಿತ್ಯ ಹಬ್ಬ ‘ಬೆಂಗಳೂರು ಲಿಟರೇಚರ್‌ ಫೆಸ್ಟ್‌ 2013’ ಇಂದು ಆರಂಭವಾಗಲಿದೆ. ಗೋಷ್ಠಿಗಳ ವಿವರ ಇಂತಿದೆ.

ಶುಕ್ರವಾರ (ಸೆ.27)
ಬೆಳಿಗ್ಗೆ 10ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಡಾ.ಚಂದ್ರಶೇಖರ ಕಂಬಾರ, ನವನೀತ ದೇವ್‌ ಸೇನ್‌, ರಮಾಕಾಂತ್‌ ರಥ, ರಾಮಚಂದ್ರ ಗುಹಾ, ಕ್ರಿಸ್ಟೋಫ ಬೆರ್‌ಟ್ರಾಮ್ಸ್‌, ವಿಕ್ರಂ ಸಂಪತ್‌ ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ ‘ಬೆಂಟೌನ್‌’ ತ್ರೈಮಾಸಿಕ ಬಿಡುಗಡೆಯಾಗಲಿದೆ.
ಬೆಳಿಗ್ಗೆ 11.30ರಿಂದ 12.30 ಆರ್ಟ್‌ ಆಫ್‌ ಲಿವಿಂಗ್‌ನ ರವಿಶಂಕರ್‌ ಗುರೂಜಿ ಅವರಿಂದ ಉಪನ್ಯಾಸ.

12.30ರಿಂದ 1.30 ‘ಹೇಳತೇನ ಕೇಳ-ಡಾ.ಚಂದ್ರಶೇಖರ ಕಂಬಾರ ಸಾಹಿತ್ಯ ಸಲ್ಲಾಪ’ ಕಂಬಾರ ಅವರ ಜೊತೆ ಮಾತುಕತೆ ಸಿ.ನಾಗಣ್ಣ.
1.30ರಿಂದ 3 ಜೀವನಚರಿತ್ರೆಯನ್ನು ಚಲನಚಿತ್ರವಾಗಿಸುವ ಕುರಿತು ಚರ್ಚೆ. ಭಾಗ್‌ ಮಿಲ್ಖಾ ಭಾಗ್‌ ಸಿನಿಮಾ ಕುರಿತು ಸಂವಾದ. ಫರಾನ ಅಕ್ತರ್‌, ಪ್ರಸೂನ್‌ ಜೋಶಿ, ರಾಕೇಶ್‌ ಮೆಹ್ರಾ. ಸಮನ್ವಯ: ಭಾವನಾ ಸೋಮಯ್ಯ.

3ರಿಂದ 4 ಫ್ಯಾಷನ್‌ ಕುರಿತು ವೆಂಡೆಲ್ಲ್‌ ರೋಡ್ರಿಕ್ಸ್‌ ಜೊತೆ ಪ್ರಸಾದ್‌ ಬಿದಪ್ಪ ಸಂವಾದ. ಸಂಜೆ 4ರಿಂದ 5 ಅಶೋಕ್‌ ವಾಜಪೇಯಿ, ಡಾ.ಯು.ಆರ್‌. ಅನಂತಮೂರ್ತಿ ಮತ್ತು ರಮಾಕಾಂತ ರಥ ಅವರ ಜೊತೆ ಸಂವಾದ. ವಿಷಯ: ‘ಈಸ್‌ ಭಾಷಾ ಬೀಯಿಂಗ್ ಸಬ್‌ಸಮ್ಡ್‌ ಬೈ ಇಂಗ್ಲಿಷ್‌’. ಸಮನ್ವಯ: ಸಚ್ಚಿದಾನಂದನ್‌.

ಶನಿವಾರ (ಸೆ.28)
ಬೆಳಿಗ್ಗೆ 10ರಿಂದ 11‘ಆವೋ ಫಿರ್‌ ನಝಂ ಕಹೈನ್’ ಕವಿ ಗುಲ್ಜಾರ್‌ ಮತ್ತು ಪ್ರಸೂನ್‌ ಜೋಷಿ ಅವರೊಂದಿಗೆ ಸಂವಾದ. ಸಮನ್ವಯ: ನಸ್ರಿನ್‌ ಮುನ್ನಿ ಕಬೀರ್‌. ಮಧ್ಯಾಹ್ನ 12ರಿಂದ 1 ‘ಭಾರತದ ಸಿನಿಮಾ ಬರವಣಿಗೆ’ ಕುರಿತು ಭಾರದ್ವಾಜ್‌ ರಂಗನ್‌, ಸಿದ್ದಾರ್ಥ್ ಭಟಿಯಾ, ಎಂ.ಕೆ. ರಾಘವೇಂದ್ರ ಮತ್ತು ನಸ್ರೀನ್‌ ಮುನ್ನಿ ಕಬೀರ್‌ ಅವರೊಂದಿಗೆ ಸಂವಾದ. ಸಮನ್ವಯ: ಶರ್ಮಿಷ್ಟ ಗುಪ್ತಾ.

ಮಧ್ಯಾಹ್ನ 2ರಿಂದ 3 ‘ಸೊಲ್ಲ ಸೊಬಗು-ಆಡುನುಡಿಯ ಸಾಹಿತ್ಯ ಸೊಗಡು’ ಕರ್ನಾಟಕ ಉಪಭಾಷೆಗಳಾದ ತುಳು, ಕೊಡವ, ಕೊಂಕಣಿ ಮತ್ತು ಬ್ಯಾರಿ ಭಾಷೆಯ ಕುರಿತು ಗೋಷ್ಠಿ. ಭಾಗವಹಿಸುವವರು: ಬಿ.ಎಂ. ಹನೀಫ್‌, ಡಾ.ಚಿನ್ನಪ್ಪ ಗೌಡ, ಡಾ.ರೇಖಾ ವಸಂತ್‌ ಮತ್ತು ಪ್ರೊ. ಎಡ್ವಿನ್‌ ಜೆ.ಎಫ್‌. ಡಿಸೋಜಾ ಮಾತನಾಡಲಿದ್ದಾರೆ. ಸಮನ್ವಯ: ಡಾ.ಬಿ. ವಿವೇಕ ರೈ.

ಸಂಜೆ 4ರಿಂದ 5 ಶಶಿ ದೇಶಪಾಂಡೆ ಅವರ ‘ಶ್ಯಾಡೋ ಪ್ಲೇ’ ಲೋಕಾರ್ಪಣೆ. ‘ಆರ್‌ ವಿ ಬಿಕಮಿಂಗ್‌ ಎ ಬೆಸ್ಟ್‌ ಸೆಲ್ಲರ್‌ ಜನರೇಷನ್‌?’ ಕುರಿತು ಚರ್ಚೆ. ಭಾಗವಹಿಸುವವರು: ಶೋಭಾ ಡೇ, ಅಶ್ವಿನ್‌ ಸಂಘಿ, ಶಶಿ ದೇಶಪಾಂಡೆ, ಐಯಾನ್‌ ಜಾಕ್‌. ಸಮನ್ವಯ: ಕಾರ್ತಿಕ ವಿ.ಕೆ. ಸಂಜೆ 5ರಿಂದ 6 ‘ಗುಜರಾತ್‌ ಮಾದರಿ: ಆರ್ಥಿಕ ಅಭಿವೃದ್ಧಿ ಎಂಬುದು ಬಲಪಂಥೀಯ ರಾಜಕಾರಣದ ಮುಖವಾಡವೇ?’ ರಾಜಕಾರಣ ಚರ್ಚೆ.  ಮಧು ಕೇಶ್ವರ್‌, ಕಿಂಗ್ಶುಕ್‌ ನಾಗ್‌, ಹರ್ತೋಷ್‌ ಸಿಂಗ್ ಬಾಲ್‌. ಸಮನ್ವಯ ವೀರ ರಾಘವ. ಸಂಜೆ 7.30ರಿಂದ 8.45ಪಂಡಿತ್‌ ಹರಿಪ್ರಸಾದ್‌ ಚೌರಾಸಿಯಾ ಅವರ ಹಿಂದೂಸ್ತಾನಿ ಬಾನ್ಸುರಿ ಕಛೇರಿ.

ಭಾನುವಾರ (ಸೆ.29)
ಬೆಳಿಗ್ಗೆ10ರಿಂದ 11 ಕವಿತಾವಾಚನ ಅಶೋಕ್‌ ವಾಜಪೇಯಿ, ಸಚ್ಚಿದಾನಂದನ್‌, ನವನೀತ್‌ ದೇವ್‌ಸೇನ್‌ ಅವರಿಂದ. ಸಮನ್ವಯ: ಮಮತಾ ಸಾಗರ್‌. 12 ರಿಂದ1 ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಾಯೋಜಿತ ಯುವ ಸಾಹಿತ್ಯ ಕುರಿತು ಗೋಷ್ಠಿ. ಅರಿಂದಮ್‌ ಬೋರ್ಕಟಕಿ, ಧರ್ಮಕೀರ್ತಿ ಸಮಂತ್‌, ವೆಂಪಳ್ಳಿ ಗಂಗಾಧರ ಮತ್ತು ಫಾರೂಕ್‌ ಶಹೀನ್‌. ಸಮನ್ವಯ: ಜಯಂತ್‌ ಕೊಡ್ಕಣಿ. ಮಧ್ಯಾಹ್ನ 1ರಿಂದ 2 ‘ಕನ್ನಡ ಮೂಲದ ಮರುವ್ಯಾಖ್ಯಾನ: ಕನ್ನಡದ ಇತಿಹಾಸ ಮತ್ತು ಪ್ರಾಚೀನತೆ’ ಕುರಿತು ಡಾ.ವೆಂಕಟಾಚಲ ಶಾಸ್ತ್ರಿ, ಡಾ.ಎಂ.ಎಂ. ಕಲಬುರ್ಗಿ, ಡಾ.ಪಾದೇಕಲ್‌ ವಿಷ್ಣುಭಟ್‌.  ಸಮನ್ವಯ: ಡಾ.ಶ್ರೀನಿವಾಸ ಮೂರ್ತಿ.
ಸಂಜೆ 4ರಿಂದ 5 ‘ಶೇಡ್ಸ್ ಆಫ್‌ ಗ್ರೇ’ ಶೇಬ ಕರಿಂ, ಅಶೋಕ್‌ ಫೆರಿ, ಮನಿಲ್‌ ಹಜ್ರತ್‌ವಾಲಾ ಜೊತೆ ಚರ್ಚೆ. ಸಮನ್ವಯ: ಹರೀಶ್‌ ಬಿಜೂರ್‌.
ಸಂಜೆ 5ರಿಂದ 6 ಕವಿ ಗುಲ್ಜಾರ್‌ ಜೊತೆ ಸಂವಾದ ಭಾವನಾ ಸೋಮಯ್ಯ. 6ರಿಂದ 6.45 ಹಾಡು ಮತ್ತು ಕವಿತೆ ಶಬ್ನಂ ವಿರ್ಮಾನಿ ಮತ್ತು ವಿಪುಲ್‌ ರಿಕಿ.

ಮಕ್ಕಳಕೂಟದಲ್ಲಿ ಮಕ್ಕಳ ಸಾಹಿತ್ಯ
ಶುಕ್ರವಾರ (ಸೆ. 27) 3ರಿಂದ4 ಫ್ಯಾಂಟಸಿ ಕುರಿತು ಜಾನಕಿ ಮುರಳಿ ಅವರಿಂದ ಕಾರ್ಯಾಗಾರ.
ಸಂಜೆ 4.30ರಿಂದ 6 ಜಪಾನಿ ಜಾನಪದ ಕಾರ್ಯಕ್ರಮ.

ಶನಿವಾರ (ಸೆ.28)
ಬೆಳಿಗ್ಗೆ 10ರಿಂದ 1. 5ರಿಂದ10ನೇ ತರಗತಿವರೆಗೆ ಸಾಹಿತ್ಯ ರಸಪ್ರಶ್ನೆ.  ಬಹುಮಾನ ವಿತರಣೆ. ಮಧ್ಯಾಹ್ನ1ರಿಂದ 2. ಗುಲ್ಜಾರ್‌ ಮತ್ತು ಪ್ರಸೂದ್‌ ಜೋಷಿ ಜೊತೆ ಮಕ್ಕಳ ಕವಿಗೋಷ್ಠಿ. ಮಧ್ಯಾಹ್ನ 2ರಿಂದ 5 ‘ಸಕತ್‌ ಸ್ಟೋರಿ ಸಫಾರಿ ಅ್ಯಂಡ್‌ ದಿ ಮಜಾ ಫುಲ್‌ ಮಿಸ್ಟರಿ ಟೂರ್‌’.

ಭಾನುವಾರ (ಸೆ.29)
ವಿವೇಕ್‌ ಕೃಷ್ಣಮೂರ್ತಿ ಅವರಿಂದ ‘ರೈಟ್‌ ಬೆಟರ್‌’ ಮಕ್ಕಳಿಗೆ ಬರವಣಿಗೆ ಕುರಿತ ಕಾರ್ಯಾಗಾರ. 9ರಿಂದ 15 ವಯೋಮಾನದ ಮಕ್ಕಳಿಗೆ. ಬೆಳಿಗ್ಗೆ11ರಿಂದ 1 ಪ್ರಥಮ್‌ ಬುಕ್‌ ಅವರಿಂದ ಗೋಷ್ಠಿ. ಮಧ್ಯಾಹ್ನ 2ರಿಂದ 4. ‘ಅಮರ ಚಿತ್ರ ಕಥಾ’. ಕತೆ ಹೇಳುವುದು, ಪಜಲ್‌ ಬಿಡಿಸುವುದು. ಸಂಜೆ 4ರಿಂದ 6 ‘ಅ್್ಯನ್‌ ಇವಿನಿಂಗ್‌ ವಿದ್‌ ಸ್ಟೋರಿವಾಲಾ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT