ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಡಿಂಗ್ ಮೊಮೆಂಟ್ ಕ್ವಿಜ್

Last Updated 28 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಇಥೋಸ್ ಪ್ರಾಯೋಜಕತ್ವದ ಅರ್ಕುಮೆನ್ ಮತ್ತು ಬೆಂಡಿಂಗ್ ಮೊಮೆಂಟ್‌ನ ದಕ್ಷಿಣ ವಲಯ ರಸಪ್ರಶ್ನೆ ಸ್ಪರ್ಧೆ ಸೋಮವಾರ ನಗರದಲ್ಲಿ ನಡೆಯಲಿದೆ.

ಇದು ವಾಸ್ತು ವಿನ್ಯಾಸ (ಆರ್ಕಿಟೆಕ್ಚರ್) ಮತ್ತು ಸಿವಿಲ್ ಎಂಜಿನಿಯರಿಂಗ್‌ನ ಪ್ರತಿಷ್ಠಿತ ಸ್ಪರ್ಧೆ. ಕ್ವಿಜ್ ಮಾಸ್ಟರ್ ಗಿರಿ ಬಾಲಸುಬ್ರಹ್ಮಣ್ಯಂ ಕ್ವಿಜ್ ನಡೆಸಿಕೊಡುತ್ತಾರೆ. ಈ ಸುತ್ತಿನಲ್ಲಿ ಗೆದ್ದವರು ರಾಷ್ಟ್ರೀಯ ಸುತ್ತಿಗೆ ಆಯ್ಕೆಯಾಗಲಿದ್ದಾರೆ. ಅಲ್ಲಿ ಮೊದಲ ಮೂರು ವಿಜೇತರು ಕ್ರಮವಾಗಿ 25 ಸಾವಿರ, 15 ಸಾವಿರ ಮತ್ತು 10 ಸಾವಿರ ರೂ ಬಹುಮಾನ ಪಡೆಯಲಿದ್ದಾರೆ.

ರೋಕ್ಕಾ, ಆಕ್ಜೊ ನೊಬೆಲ್, ಟಾಟಾ ಟಿಸ್ಕಾನ್, ಬೆಲ್ ಸಿರಾಮಿಕ್ಸ್ ಮತ್ತು ಗ್ರಂಡ್‌ಫೋರ್ಸ್ ಪಂಪ್ಸ್‌ಗಳು ಸ್ಪರ್ಧೆಗೆ ಸಹಯೋಗ ನೀಡಿದ್ದು, ವಿವಿಧ ರಾಜ್ಯಗಳ 150 ಕಾಲೇಜು ತಂಡಗಳು ಭಾಗವಹಿಸುವ ನಿರೀಕ್ಷೆಯಿದೆ.

ಕೋಲ್ಕತ್ತ ಮೂಲದ ಆರ್ಕಿಟೆಕ್ಟ್ ಗೀತಾ ಬಾಲಕೃಷ್ಣನ್ ಅವರು ಸ್ಥಾಪಿಸಿ ರುವ ಇಥೋಸ್, ಎಂಜಿನಿಯರಿಂಗ್ ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿದೆ.

ಸ್ಥಳ: ಎಂ.ಎಸ್. ರಾಮಯ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಪೆಕ್ಸ್ ಆಡಿಟೋರಿಯಂ, ಗೋಕುಲ ಬಡಾವಣೆ. ಮಾಹಿತಿಗೆ: www.ethosindia.in or  email gita@ethosindia.in,  098311 75272.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT