ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂದ ಮೊಟ್ಟೆ ಯಾವುದು?

ಮಾಡಿ ನಲಿ ಸರಣಿ - 32
Last Updated 15 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಪ್ರಶ್ನೆ :1. ಯಾವ ಮೊಟ್ಟೆ ಬಹಳ ಹೊತ್ತು, ಜೋರಾಗಿ ತಿರುಗುತ್ತದೆ? ಯಾಕೆ?

2. ತಿರುಗುವ ಮೊಟ್ಟೆಗಳನ್ನು ನಿಲ್ಲಿಸಲು ಪ್ರಯತ್ನಿಸಿದರೂ ಯಾವ ಮೊಟ್ಟೆ ಮತ್ತೆ ತಿರುಗುತ್ತದೆ, ಯಾವ ಮೊಟ್ಟೆ ತಿರುಗುವುದನ್ನು ನಿಲ್ಲಿಸುತ್ತದೆ? ಯಾಕೆ?

ಉತ್ತರ:
1. ಕುದಿಸಿದ ಮೊಟ್ಟೆ ಬಹಳ ಹೊತ್ತು ಜೋರಾಗಿ ಮತ್ತು ಕುದಿಸದೆ ಇರುವ ಮೊಟ್ಟೆ ಸಾವಕಾಶವಾಗಿ ಹಾಗೂ ಸ್ವಲ್ಪ ಹೊತ್ತು ತಿರುಗುತ್ತವೆ. ಯಾಕೆಂದರೆ, ಕುದಿಸಿದ ಮೊಟ್ಟೆಯು ಒಂದೇ ಘನ ಪದಾರ್ಥದಂತೆ ವರ್ತಿಸುವುದ­ರಿಂದ ಬಹಳ ಹೊತ್ತು ಹಾಗೂ ಜೋರಾಗಿ ತಿರುಗುತ್ತದೆ. ಕುದಿಸದೆ ಇರುವ ಮೊಟ್ಟೆ­ಯನ್ನು ತಿರುಗಿಸಿದಾಗ ನೀವು ಮೊಟ್ಟೆಯ ಚಿಪ್ಪಿಗೆ ಚಲನೆಯನ್ನು ಕೊಡುತ್ತೀರಿ. ಮೊಟ್ಟೆ­ ಒಳಗಿನ ದ್ರವ ಪದಾರ್ಥವು ಓಲಾಡುವ (ತಿರುಗುವ) ಚಿಪ್ಪಿಗೆ ಪ್ರತಿರೋಧ ಒಡ್ಡುವುದರಿಂದ ಅದು ಬಹಳ ಹೊತ್ತು ಹಾಗೂ ಜೋರಾಗಿ ತಿರುಗುವುದಿಲ್ಲ.

2. ಎರಡೂ ತಿರುಗುತ್ತಿರುವ ಮೊಟ್ಟೆಗಳನ್ನು ನಿಲ್ಲಿಸಲು ಪ್ರಯತ್ನಿಸಿ ಕೈ ಬಿಟ್ಟರೆ, ಕುದಿಸದೆ ಇರುವ ಮೊಟ್ಟೆಯು ಓಲಾಡುವುದನ್ನು ಮುಂದುವರಿಸುತ್ತದೆ. ಯಾಕೆಂದರೆ ನೀವು ಮೊಟ್ಟೆಯ ಕವಚಕ್ಕೆ ಶಕ್ತಿಯನ್ನು ನೀಡಿರುತ್ತೀರಿ. ಮೊಟ್ಟೆಯಲ್ಲಿಯ ದ್ರವ ಪದಾರ್ಥ ಹಾಗೂ ಮೊಟ್ಟೆಯ ಒಳಗಿನ ಕವಚಗಳ ಮಧ್ಯೆ ಘರ್ಷಣೆ ಮುಂದುವರಿಯುತ್ತಿರುವುದರಿಂದ ಅದು ಮತ್ತೆ ಓಲಾಡಲು ಪ್ರಾರಂಭಿಸುತ್ತದೆ. ತಿರುಗುತ್ತಿರುವ ಕುದಿಸಿದ ಮೊಟ್ಟೆಯನ್ನು ನಿಲ್ಲಿಸಲು ಮುಟ್ಟಿದರೆ ಅದು ಸಾವಕಾಶವಾಗಿ ನಿಲ್ಲುತ್ತದೆ. ಯಾಕೆಂದರೆ ಮೊಟ್ಟೆಯ ಕವಚ ಹಾಗೂ ಒಳಗಿನ ದ್ರವ ಪದಾರ್ಥಗಳು ಎರಡೂ ಗಟ್ಟಿಯಾಗಿರುವುದರಿಂದ ಮೊಟ್ಟೆಯನ್ನು ನಿಲ್ಲಿಸಲು ಉಪಯೋಗಿಸಿದ ಶಕ್ತಿಯು ಒಳಗಿನ ಪದಾರ್ಥಕ್ಕೂ ತಲುಪಿ, ಮೊಟ್ಟೆ ತಿರುಗುವುದು ನಿಲ್ಲುತ್ತದೆ.

ಸಾಮಗ್ರಿ: ಒಂದು ಕುದಿಸಿದ ಹಾಗೂ ಒಂದು ಕುದಿಸದೇ ಇರುವ ಮೊಟ್ಟೆ.

ವಿಧಾನ
-1. ಎರಡು ಕೋಳಿ ಮೊಟ್ಟೆಗಳನ್ನು ತೆಗೆದುಕೊಳ್ಳಿರಿ.

2. ಒಂದು ಮೊಟ್ಟೆಯನ್ನು 5-–10 ನಿಮಿಷ ಕುದಿಸಿ.

3. ಕುದಿಸಿದ ಮೊಟ್ಟೆಯನ್ನು ಕೊಠಡಿಯ ಶಾಖ ತಲುಪುವವರೆಗೆ ಬಿಡಿ.

4. ಎರಡೂ ಮೊಟ್ಟೆಗಳನ್ನು ಒಂದು ಸಪಾಟಾದ ನೆಲದ ಮೇಲೆ ತಿರುಗಿಸಿ. ಅವು ತಿರುಗುವ ಸಮಯವನ್ನು ಬರೆದುಕೊಳ್ಳಿ.

5. ಮತ್ತೊಮ್ಮೆ ಎರಡೂ ಮೊಟ್ಟೆಗಳನ್ನು ತಿರುಗಿಸಿ. ಅವು ತಿರುಗುತ್ತಿರು­ವಾಗಲೇ ಅವುಗಳ ಮೇಲೆ ಒಮ್ಮೆ ನಿಮ್ಮ ತೋರು ಬೆರಳನ್ನು ಇಟ್ಟು ತಿರುಗುವುದನ್ನು ನಿಲ್ಲಿಸಲು ಪ್ರಯತ್ನಿಸಿ ಹಾಗೂ ನಿಮ್ಮ ಬೆರಳನ್ನು ಮೊಟ್ಟೆಯಿಂದ ಮೇಲೆತ್ತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT