ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಬಲ ಬೆಲೆಯಲ್ಲಿ ಈರುಳ್ಳಿ: ರೂ 1.44 ಕೋಟಿ ನಷ್ಟ

Last Updated 10 ಫೆಬ್ರುವರಿ 2012, 6:45 IST
ಅಕ್ಷರ ಗಾತ್ರ

ಬಾಗಲಕೋಟೆ: ಬೆಲೆ ಕುಸಿತದಿಂದ ಕಂಗಾಲಾಗಿದ್ದ ಜಿಲ್ಲೆಯ ಈರುಳ್ಳಿ ಬೆಳೆಗಾರರಿಂದ ಬೆಂಬಲ ಬೆಲೆಯಲ್ಲಿ ಈರುಳ್ಳಿ ಖರೀದಿಸಿ ಮಾರಾಟ ಮಾಡಿರುವುದರಿಂದ ರಾಜ್ಯ ಸರ್ಕಾರಕ್ಕೆ ರೂ. 1.44 ಕೋಟಿ ನಷ್ಟವಾಗಿದೆ.

ಈ ಕುರಿತು `ಪ್ರಜಾವಾಣಿ~ಗೆ ಮಾಹಿತಿ ನೀಡಿದ ಜಿಲ್ಲಾ ಕೃಷಿ ಮಾರಾಟ ಇಲಾಖೆ ಸಹಾಯಕ ನಿರ್ದೇಶಕ ಶ್ರೀಹರಿ, ಬಾಗಲಕೋಟೆ, ಹುನಗುಂದ ಮತ್ತು ಬಾದಾಮಿ ತಾಲ್ಲೂಕಿನ ಕೆರೂರ ಎಪಿಎಂಸಿ ಉಪ ಮಾರುಕಟ್ಟೆಯಲ್ಲಿ ಈರುಳ್ಳಿ ಖರೀದಿ ಕೇಂದ್ರ ತೆರೆದು ಡಿಸೆಂಬರ್ ಮತ್ತು ಜನವರಿಯಲ್ಲಿ ಬೆಂಬಲ ಬೆಲೆಯಲ್ಲಿ ಈರುಳ್ಳಿ ಖರೀದಿಸಲಾಗಿತ್ತು ಎಂದರು.

ಜಿಲ್ಲೆಯ 1038 ರೈತರಿಂದ  29,395 ಕ್ವಿಂಟಲ್ ಈರುಳ್ಳಿಯನ್ನು ಖರೀದಿಸಲಾಗಿದೆ, ಈ ಪೈಕಿ ಗ್ರೇಡ್ -1 ಈರುಳ್ಳಿಯನ್ನು ಪ್ರತಿ ಕ್ವಿಂಟಲ್‌ಗೆ ರೂ 760 ದರದಂತೆ 4,155 ಕ್ವಿಂಟಲ್, ಗ್ರೇಡ್-2 ಈರುಳ್ಳಿಯನ್ನು ಪ್ರತಿ ಕ್ವಿಂಟಲ್‌ಗೆ ರೂ 560 ನಂತೆ 18,199 ಕ್ವಿಂಟಲ್ ಹಾಗೂ  ಗ್ರೇಡ್-3 ಈರುಳ್ಳಿಯನ್ನು ಪ್ರತಿ ಕ್ವಿಂಟಲ್‌ಗೆ ರೂ 360 ರಂತೆ  7039 ಕ್ವಿಂಟಲ್ ಖರೀದಿಸಲಾಗಿತ್ತು ಎಂದು ಹೇಳಿದರು. 

ಈರುಳ್ಳಿ ಖರೀದಿಸಲು ತಗಲಿದ ವೆಚ್ಚ ರೂ. 28,03,552 ಸೇರಿದಂತೆ ಒಟ್ಟು ರೂ. 1.87 ಕೋಟಿಯಾಗಿದ್ದು,  ವಿವಿಧ ಸರ್ಕಾರಿ ಇಲಾಖೆ, ಅರೆ ಸರ್ಕಾರಿ ಸಂಸ್ಥೆಯವರಿಗೆ ಪ್ರತಿ ಕ್ವಿಂಟಲ್‌ಗೆ ರೂ.60 ರಂತೆ ಮಾರಾಟ ಮಾಡಿರುವುದರಿಂದ ರೂ. 4.26 ಲಕ್ಷ ಹಣ ಬಂದಿದೆ ಎಂದರು.

ಖರೀದಿಸಿದ ಮೊತ್ತ ಮತ್ತು ವೆಚ್ಚ ಸೇರಿ ರೂ. 1,86,87,555 ರಲ್ಲಿ ಮಾರಾಟ ಮಾಡಿರುವುದರಿಂದ ಬಂದ ಮೊತ್ತ ರೂ. 43,30,362 ಕಳೆದು, ಸರ್ಕಾರಕ್ಕೆ ರೂ. 1.44 ಕೋಟಿ ನಷ್ಟವಾಗಿದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT