ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್ ಅಸ್ತಿತ್ವಕ್ಕೆ

Last Updated 15 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಳಗಾವಿ: ಆಧುನಿಕ ಕನ್ನಡ ಸಾಹಿತ್ಯಕ್ಕೆ ಭದ್ರ ಬುನಾದಿ ಹಾಕಿದವರಲ್ಲಿ ಡಾ.ಬೆಟಗೇರಿ ಕೃಷ್ಣಶರ್ಮ ಅವರೂ ಒಬ್ಬರಾಗಿದ್ದಾರೆ ಎಂದು ನಾಡೋಜ ಚೆನ್ನವೀರ ಕಣವಿ ಅಭಿಪ್ರಾಯಪಟ್ಟರು.

ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಡಾ.ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್ ಉದ್ಘಾಟನಾ ಸಮಾರಂಭದಲ್ಲಿ ಶರ್ಮ ಅವರ `ಸಮಗ್ರ ಕಾವ್ಯ~ ಬಿಡುಗಡೆ ಮಾಡಿ ಅವರು ಮಾತನಾಡಿದರು.

`ನವೋದಯದ ಗಣ್ಯ ಸಾಹಿತಿಗಳಾಗಿದ್ದು, ನಾಡು, ನುಡಿಯ ಬಗೆಗೆ ಜಾಗೃತಿ ಮೂಡಿಸುವ ಕೆಲಸವನ್ನು ಅವರು `ಆನಂದಕಂದ~ ಕಾವ್ಯನಾಮದ ಮೂಲಕ ಮಾಡಿದ್ದಾರೆ~ ಎಂದು ಅವರು ಅವರೊಂದಿಗಿನ ಒಡನಾಟದ ಕ್ಷಣಗಳನ್ನು ಮೆಲುಕು ಹಾಕಿದರು.

ಟ್ರಸ್ಟ್ ಉದ್ಘಾಟಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತ ಮನು ಬಳಿಗಾರ ಮಾತನಾಡಿ, ಶರ್ಮಾ ಅವರ ಸಾಹಿತ್ಯವನ್ನು ನಾಡಿನೆಲ್ಲೆಡೆ ಪಸರಿಸುವ ಕೆಲಸವನ್ನು ಟ್ರಸ್ಟ್ ಮಾಡಬೇಕು. ಹಿಂದೆ ಹಣವಿರುತ್ತಿರಲಿಲ್ಲ. ಈಗ ಹಣವಿದೆ, ಯೋಜನೆಗಳು ಇಲ್ಲ. ಅನುಷ್ಠಾನಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ನಾಡೋಜ ಡಾ.ದೇ. ಜವರೇಗೌಡ ಮಾತನಾಡಿ, ಪ್ರಗತಿಪರ ಕಾದಂಬರಿಕಾರ
ಬಸವರಾಜ ಕಟ್ಟಿಮನಿ, ಸಾಂಸ್ಕೃತಿಕ ಸಂಶೋಧಕ ಶಂಬಾ ಜೋಶಿ ಅವರ ಹೆಸರಿನಲ್ಲಿಯೂ ಟ್ರಸ್ಟ್ ಆರಂಭಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.

`ಕಂಬಾರ ಅವರ ಸಾಹಿತ್ಯದ ಮೇಲೆ ಬೆಟಗೇರಿ ಕೃಷ್ಣಶರ್ಮ ಅವರ ಪ್ರಭಾವ ಇದೆ. ಜನಪದ ಅಧ್ಯಯನಕ್ಕೆ ಶರ್ಮಾ ಹೆಚ್ಚಿನ ಒತ್ತು ನೀಡಿದ್ದರು. ಜನಪದದಿಂದ ನಮ್ಮತನ ಉಳಿಸಿಕೊಳ್ಳಲು ಸಾಧ್ಯ ಎಂಬುದನ್ನು ಅವರು ಕಂಡುಕೊಂಡಿದ್ದರು~ ಎಂದರು.

ಡಾ.ಗಿರಡ್ಡಿ ಗೋವಿಂದರಾಜು, ಜಿನದತ್ತ ದೇಸಾಯಿ, ಸುರೇಶ ಬೆಟಗೇರಿ, ಟ್ರಸ್ಟ್ ಅಧ್ಯಕ್ಷ ಪ್ರೊ.ರಾಘವೇಂದ್ರ ಪಾಟೀಲ ಇತರರು ಪಾಲ್ಗೊಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT