ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆನಜೀರ್ ಹತ್ಯೆ ಪ್ರಕರಣ: ಮುಷರಫ್ ವಿರುದ್ಧ ಜಾಮೀನು ರಹಿತ ವಾರಂಟ್

Last Updated 12 ಫೆಬ್ರುವರಿ 2011, 8:30 IST
ಅಕ್ಷರ ಗಾತ್ರ

ಇಸ್ಲಾಮಾಬಾದ್ (ಪಿಟಿಐ): ಬೆನಜೀರ್ ಭುಟ್ಟೋ ಹತ್ಯೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ಪಾಕಿಸ್ತಾನದ ಭಯೋತ್ಪಾದನೆ ನಿಗ್ರಹ ನ್ಯಾಯಾಲಯವು ವಿಚಾರಣೆ ಕಾಲದಲ್ಲಿ ತನ್ನ ಮುಂದೆ ಪರ್ವೇಜ್ ಮುಷರಫ್ ಅವರನ್ನು ಹಾಜರು ಪಡಿಸಲು ಅನುಕೂಲವಾಗುವಂತೆ ಅವರ ವಿರುದ್ಧ ಶನಿವಾರ ಜಾಮೀನು ರಹಿತ ಬಂಧನ ವಾರಂಟ್  ಜಾರಿ ಮಾಡಿತು.

ರಾವಲ್ಪಿಂಡಿಯಲ್ಲಿನ ನ್ಯಾಯಾಲಯವು ಪ್ರಾಸೆಕ್ಯೂಷನ್ ವಕೀಲರ ಅಹವಾಲು ಆಲಿಕೆಯ ಬಳಿಕ ಮುಷರಫ್ ವಿರುದ್ಧ  ಜಾಮೀನುರಹಿತ ಬಂಧನ ವಾರಂಟ್  ಜಾರಿಗೊಳಿಸಿತು.

ಫೆಡರಲ್ ತನಿಖಾ ಸಂಸ್ಥೆ (ಎಫ್ ಐ ಎ) ಕೂಡಾ ತಾನು ಸಲ್ಲಿಸಿದ ವಿಸ್ಥೃತ ದೋಷಾರೋಪ ಪಟ್ಟಿಯಲ್ಲಿ ಮುಷರಫ್ ಅವರನ್ನು ಆರೋಪಿಯನ್ನಾಗಿ ಹೆಸರಿಸಿತ್ತು.
ಬಂಧನ ವಾರಂಟ್ ಹೊರಡಿಸಿದ ಬಳಿಕ ನ್ಯಾಯಾಧೀಶರು ನ್ಯಾಯಾಲಯದ ಕಲಾಪವನ್ನು ಫೆಬ್ರುವರಿ 19ರವರೆಗೆ ಮುಂದೂಡಿದರು.

ಬೆನಜೀರ್ ಹತ್ಯ ಪ್ರಕರಣದ ತನಿಖೆಯಲ್ಲಿ ಸಹಕರಿಸಲು ವಿಫಲರಾಗಿರುವ ಮುಷರಫ್ ಅವರನ್ನು ~ತಲೆತಪ್ಪಿಸಿಕೊಂಡವರು~ ಎಂಬುದಾಗಿ ಈ ವಾರಾರಂಭದಲ್ಲಿ ಎಫ್ ಐ ಎ  ಹೆಸರಿಸಿತ್ತು.

ಮುಷರಫ್ ಅವರು ಪ್ರಸ್ತುತ ಬ್ರಿಟನ್ನಿನಲ್ಲಿ ಸ್ವಘೋಷಿತ ವಿದೇಶವಾಸ ನಡೆಸುತ್ತಿದ್ದು ತನಿಖಾಧಿಕಾರಿಗಳ ಜೊತೆಗೆ ಸಹಕರಿಸಲು ಅಥವಾ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದ್ದಾರೆ ಎಂದು ಪ್ರಾಸೆಕ್ಯೂಟರ್ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT