ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಲ್ಲ ಕ್ರಾಸ್‌ನಲ್ಲಿ ನೀರಿನ ಸಮಸ್ಯೆ

Last Updated 14 ಡಿಸೆಂಬರ್ 2012, 11:09 IST
ಅಕ್ಷರ ಗಾತ್ರ

ಕೂಡಲಸಂಗಮ:  ಇಲ್ಲಿಗೆ ಸಮೀಪದ ಬೆಳಗಲ್ ಕ್ರಾಸ್‌ನಲ್ಲಿ ಪ್ರಯಾಣಿಕರು ಕುಡಿಯುವ ನೀರಿಗೆ ಪರದಾಡುವಂತಾಗಿದೆ. ಕುಡಿಯಲು ನೀರಿಲ್ಲ. ವಿಶ್ರಾಂತಿ ವ್ಯವಸ್ಥೆಯೂ ಇಲ್ಲದೆ, ಬಿರು ಬಿಸಿಲಿನಲ್ಲಿ ಬಸ್‌ಗಾಗಿ ಕಾಯುವಂತಾಗಿದೆ.

ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಕೂಡಲ ಸಂಗಮ ಕ್ರಾಸ್ ಹಾಗೂ ಹುನಗುಂದದ ಮಧ್ಯ ಬೆಳಗಲ್ ಕ್ರಾಸ್ ಇದೆ. ಅಡವಿಹಾಳ, ಇದ್ದಲಗಿ, ಕಮದತ್ತ, ಬಿಸನಾಳಕೊಪ್ಪ, ಬೆಳಗಲ್, ಚಿತ್ತರಗಿ, ಹಡಗಲಿ, ಗಂಗೂರ ಮತ್ತಿತರ ಗ್ರಾಮಗಳ ಜನರು ಬೇರೆಡೆ ಪ್ರಯಾಣಿಸಲು ಬೆಳಗಲ್ ಕ್ರಾಸ್ ಮೂಲಕವೇ ತೆರಳಬೇಕು.  ರಾಷ್ಟ್ರೀಯ ಹೆದ್ದಾರಿ 50ರ ಅಗಲೀಕರಣ ಮಾಡುವಾಗ ಬೆಳಗಲ್ ಕ್ರಾಸ್‌ನಲ್ಲಿ ಇದ್ದ ಕೊಳವೆ ಬಾವಿ ರಸ್ತೆಯ ಬದಿಯಲ್ಲಿ ಇದೆ. ರಸ್ತೆಯ ಬಳಿ ಹಾಕಿದ ಮಣ್ಣಿ ನಲ್ಲಿ ಇರುವುದರಿಂದ ನೀರು ಕುಡಿಯಲು ಆಗು ತ್ತಿಲ್ಲ. ಬೆಳಗಲ್ಲ ಕ್ರಾಸ್ ಬಳಿ ಪ್ರಾರಂಭದಲ್ಲಿದ್ದ ಕೊಳವೆ ಬಾವಿಗೆ ಗೋಡೆ ನಿರ್ಮಿಸಿ ನೀರು ಕುಡಿಯಲು ಅವಕಾಶ ಮಾಡಿಕೊಡಬೇಕು ಎಂದು ಇದ್ದಲಗಿಯ ಎಸ್.ಎಸ್. ಅಂಗಡಿ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT