ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ ಈಜುಪಟುಗಳಿಗೆ 3 ಚಿನ್ನ, 4 ಬೆಳ್ಳಿ

ನ್ಯಾಶನಲ್‌ ಸ್ಕೂಲ್‌ ಗೇಮ್ಸ್‌
Last Updated 20 ಡಿಸೆಂಬರ್ 2013, 6:08 IST
ಅಕ್ಷರ ಗಾತ್ರ

ಬೆಳಗಾವಿ: ಬೆಳಗಾವಿ ಸ್ಮಿಮ್ಮರ್ಸ್‌ ಕ್ಲಬ್‌ ಮತ್ತು ಅಕ್ವೇರಿಯಸ್‌ ಸ್ವಿಮ್‌ ಕ್ಲಬ್‌ನ ಈಜುಪಟುಗಳು ಪುಣೆಯಲ್ಲಿ ನಡೆದ ನ್ಯಾಶನಲ್‌ ಸ್ಕೂಲ್‌ ಗೇಮ್ಸ್‌–2013ರಲ್ಲಿ 3 ಚಿನ್ನದ ಪದಕ, 4 ಬೆಳ್ಳಿ ಹಾಗೂ 1 ಕಂಚಿನ ಪದಕವನ್ನು ಗೆದ್ದುಕೊಂಡಿದ್ದಾರೆ.

ಸುಮಾರು 1,500 ಈಜುಪಟುಗಳು ಪಾಲ್ಗೊಂ­ಡಿದ್ದ ಈ ಕ್ರೀಡಾಕೂಟದಲ್ಲಿ ಬೆಳಗಾವಿಯ ಈಜುಪಟುಗಳು ಅತ್ಯುತ್ತಮ ಪ್ರದರ್ಶನ ನೀಡಿ­ದ್ದಾರೆ. 4x100 ಮೆಡ್ಲೆ ರಿಲೆ ಹಾಗೂ 4x100 ಫ್ರೀ ಸ್ಟೈಲ್‌ ರಿಲೆ ವಿಭಾಗದಲ್ಲಿ ಎರಡು ರಾಷ್ಟ್ರೀಯ ದಾಖಲೆಯನ್ನೂ ನಿರ್ಮಿಸಿ ಗಮನ ಸೆಳೆದಿದ್ದಾರೆ.

ಸೇಂಟ್‌ ಪೌಲ್‌ ಹೈಸ್ಕೂಲ್‌ ವಿದ್ಯಾರ್ಥಿ ರೋಶನ್‌ ಉದಯ್‌ ಅವರು 14 ವರ್ಷ­ದೊಳಗಿನ ಬಾಲಕರ ವಿಭಾಗದ 4x100 ಮೆಡ್ಲೆ ರಿಲೆ ಹಾಗೂ 4x100 ಫ್ರೀ ಸ್ಟೈಲ್‌ ರಿಲೆಯಲ್ಲಿ ಚಿನ್ನದ ಪದಕ, 50 ಮೀ. ಬಟರ್‌ಫ್ಲೈ ಹಾಗೂ 50 ಮೀ. ಫ್ರೀ ಸ್ಟೈಲ್‌ನಲ್ಲಿ ಬೆಳ್ಳಿ ಪದಕ ಮತ್ತು 50 ಮೀ. ಬ್ರೆಸ್ಟ್‌ ಸ್ಟ್ರೋಕ್‌ನಲ್ಲಿ ಕಂಚಿನ ಪದಕವನ್ನು ಗೆದ್ದುಕೊಂಡಿದ್ದಾರೆ.

ಸೇಂಟ್‌ ಮೇರಿ ಹೈಸ್ಕೂಲ್‌ನ ಯಶ್‌ ಕುಸಾನೆ, 4x100 ಮೆಡ್ಲೆ ರಿಲೆಯಲ್ಲಿ ಚಿನ್ನದ ಪದಕ ಗಳಿಸಿದ್ದಾರೆ.  ಸೇಂಟ್‌ ಝೇವಿಯರ್‌ ಹೈಸ್ಕೂಲ್‌ನ ವಿದ್ಯಾರ್ಥಿನಿ ಅಕ್ಷತಾ ದೇಸಾಯಿ 4x100 ಮೀ. ಫ್ರೀ ಸ್ಟೈಲ್‌ ರಿಲೆಯಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ. 50 ಮೀ. ಬಟರ್‌ಫ್ಲೈನಲ್ಲಿ 7ನೇ ಸ್ಥಾನ ಗಳಿಸಿದ್ದಾರೆ.

17 ವರ್ಷದೊಳಗಿನ ವಿಭಾಗದಲ್ಲಿ ಡಿವೈನ್‌ ಪ್ರೊವಿಡೆನ್ಸ್‌ನ ವಿದ್ಯಾರ್ಥಿನಿ ಸಮೀಕ್ಷಾ ಸಾತಪುತೆ, 4x100 ಫ್ರೀ ಸ್ಟೈಲ್‌ ರಿಲೆಯಲ್ಲಿ ಬೆಳ್ಳಿ ಪದಕ ಹಾಗೂ 50 ಮೀ. ಬ್ಯಾಕ್‌ ಸ್ಟ್ರೋಕ್‌ನಲ್ಲಿ 5ನೇ ಸ್ಥಾನ ಪಡೆದಿದ್ದಾರೆ.

14 ವರ್ಷದೊಳಗಿನ ವಿಭಾಗದಲ್ಲಿ ಸೇಂಟ್‌ ಜೋಸೆಫ್‌ ಹೈಸ್ಕೂಲ್‌ ವಿದ್ಯಾರ್ಥಿನಿ ಋತು ಮುರಗೋಡ 200 ಮೀ. ವೈಯಕ್ತಿಕ ಮೆಡ್ಲೆಯಲ್ಲಿ 6ನೇ ಸ್ಥಾನ ಹಾಗೂ ಸೇಂಟ್‌ ಜೋಸೆಫ್‌ ಹೈಸ್ಕೂಲ್‌ ವಿದ್ಯಾರ್ಥಿನಿ ಪ್ರಿಶಿತಾ ಪರಮಾರ್‌ 50 ಮೀ. ಬ್ಯಾಕ್‌ ಸ್ಟ್ರೋಕ್‌ನಲ್ಲಿ 6ನೇ ಸ್ಥಾನ ಗಳಿಸಿದ್ದಾರೆ.

ಈ ಈಜುಪಟುಗಳು ರೋಟರಿ ಕಾರ್ಪೊರೇಶನ್‌ ಸ್ಪೋರ್ಟ್ಸ್‌ ಅಕಾಡೆಮಿಯ ಈಜುಗೊಳದಲ್ಲಿ ಅಜಿಂಕ್ಯಾ ಮೆಂಡಕೆ, ಅಕ್ಷಯ ಶೆರೆಗಾರ, ಗುರು­ಪ್ರಸಾದ ತಂಗಣಕರ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದುಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT