ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ ಜಿಲ್ಲಾ ತಂಡಗಳ ಪಾರುಪತ್ಯ

Last Updated 13 ಅಕ್ಟೋಬರ್ 2012, 9:10 IST
ಅಕ್ಷರ ಗಾತ್ರ

ಹಾವೇರಿ: ಇಲ್ಲಿನ ಗೆಳೆಯರ ಬಳಗದ ಚನ್ನಬಸಪ್ಪ ಮಾಗಾವಿ ಪ್ರೌಢಶಾಲೆ ಮೈದಾನದಲ್ಲಿ ಗುರುವಾರ ನಡೆದ ಬೆಳಗಾವಿ ವಿಭಾಗದ ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿಭಾಗಗಳ ಹ್ಯಾಂಡ್‌ಬಾಲ್ ಪಂದ್ಯಾವಳಿಯಲ್ಲಿ ಬೆಳಗಾವಿ ಜಿಲ್ಲೆ ಚಾಂಪಿಯನ್ ಆಗಿ ಹೊರ ಹೊಮ್ಮಿದೆ.

14 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಅಂತಿಮ ಹಂತಕ್ಕೆ ತಲುಪಿದ ಬೆಳಗಾವಿ ಜಿಲ್ಲೆ ತಂಡ ಪ್ರಶಸ್ತಿ ಗಳಿಸುವಲ್ಲಿ ಯಶಸ್ವಿಯಾದರೆ, ಬಾಲಕಿಯರ ವಿಭಾಗದಲ್ಲಿ ಧಾರವಾಡ ತಂಡ ಪ್ರಶಸ್ತಿ ಪಡೆದುಕೊಂಡಿತು.
ಅದೇ ರೀತಿ 17 ವರ್ಷದೊಳಗಿನ ಬಾಲಕ, ಬಾಲಕಿಯರ ವಿಭಾಗದಲ್ಲಿ ಅಂತಿಮ ಹಂತಕ್ಕೆ ತಲುಪಿದ್ದ ಬೆಳಗಾವಿ ತಂಡಗಳು ಎರಡು ವಿಭಾಗದಲ್ಲಿ ಪ್ರಶಸ್ತಿ ಗಳಿಸುವಲ್ಲಿ ಯಶಸ್ವಿಯಾದವು.

14 ವಯೋಮಿತಿಯೊಳಗಿನ ಬಾಲಕರ ವಿಭಾಗದಲ್ಲಿ ಬೆಳಗಾವಿ ತಂಡವು 17-4 ಅಂಕಗಳ ಅಂತರದಿಂದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯನ್ನು ಸೋಲಿಸಿದರೆ, ಬಾಲಕಿಯರ ವಿಭಾಗದಲ್ಲಿ ಧಾರವಾಡ ತಂಡವು 6-3 ಅಂಕಗಳಿಂದ ಬಾಗಲಕೋಟ ಜ್ಲ್ಲಿಲಾ ತಂಡವನ್ನು ಸೋಲಿಸಿ ಪ್ರಶಸ್ತಿ ಗಳಿಸಿತು.

17 ವಯೋಮಿತಿಯೊಳಗಿನ ಬಾಲಕರ ವಿಭಾಗದಲ್ಲಿ ಬೆಳಗಾವಿ ತಂಡವು 17-14 ಅಂಕ ಗಳೊಂದಿಗೆ ಚಿಕ್ಕೋಡಿ ತಂಡವನ್ನು ಪರಾ ಭವಗೊಳಿಸಿ ಪ್ರಶಸ್ತಿ ತನ್ನದಾಗಿಸಿ ಕೊಂಡಿತು.

ಪಂದ್ಯ ಟೈ: ಬಿಸಿಲಿನ ಪ್ರಖರತೆ ಮಧ್ಯೆ 17 ವರ್ಷದೊಳಗಿನ ಬಾಲಕರ ವಿಭಾಗ ದಲ್ಲಿ ಬೆಳಗಾವಿ ಹಾಗೂ ಚಿಕ್ಕೋಡಿ ತಂಡಗಳು ಆಟದುದ್ದಕ್ಕೂ ಸಮಬಲ ಹೋರಾಟ ಪ್ರದರ್ಶಿಸಿದವು. ಪಂದ್ಯದ ಸಮಯ ಮುಕ್ತಾಯಗೊಂಡಾಗ ಎರಡೂ ತಂಡಗಳು ತಲಾ 14-14 ಅಂಕಗಳೊಂದಿಗೆ ಪಂದ್ಯವನ್ನು ಟೈ ಮಾಡಿಕೊಂಡವು.

ನಂತರ ನಿರ್ಣಾಯಕರ ಎರಡೂ ತಂಡಗಳಿಗೆ ತಲಾ ಐದು ನಿಮಿಷ ಹೆಚ್ಚಿನ ಕಾಲಾವಕಾಶ ನೀಡಿದಾಗ ಬೆಳಗಾವಿ ತಂಡದ ಹುಡುಗರು ಚುರುಕಿನ ಆಟ ಪ್ರದರ್ಶಿಸಿ 3 ಗೋಲುಗಳನ್ನು ಗಳಿಸಿ ದರಲ್ಲದೇ, ಅಂಕಗಳನ್ನು 17ಕ್ಕೆ ಹೆಚ್ಚಿಸಿಕೊಂಡರು.

ಈ ಸಮಯದಲ್ಲಿ ಹೆಚ್ಚಿನ ಪ್ರತಿರೋಧ ಒಡ್ಡದ ಕಾರಣ ಚಿಕ್ಕೋಡಿ ತಂಡವು ಯಾವುದೇ ಗೋಲು ಗಳಿಸದೇ ನಿರಾಯಸವಾಗಿ ಸೋಲೊಪ್ಪಿ ಕೊಂಡರು. ಬೆಳಗಾವಿ ತಂಡದ ಬಾಲಕರು ಗೆಲುವಿನ ನಗೆ ಬೀರಿದರು.

ಅದೇ ವಿಭಾಗದಲ್ಲಿ ಬೆಳಗಾವಿ ಬಾಲ ಕಿಯರ ತಂಡವು 6-4 ಅಂಕಗಳೊಂದಿಗೆ ಧಾರವಾಡ ಬಾಲಕಿಯರ ತಂಡವನ್ನು ಸೋಲಿಸಿತು. ಈ ಪಂದ್ಯ ಕೂಡಾ ತೀವ್ರ ಪೈಪೋಟಿಯಿಂದ ಕೂಡಿತ್ತು ಎರಡೂ ತಂಡಗಳ ಆಟಕಾಗಾರರು ಪಂದ್ಯ ದು ದ್ದಕ್ಕೂ ಚುರುಕಿನ ಆಟ ಪ್ರದರ್ಶಿಸಿದವು.

ಪಂದ್ಯದ ಮೊದಲ ಅವಧಿ ಮುಗಿದಾಗ 4-3 ಅಂಕದಿಂದ ಮುಂದೆ ಇದ್ದ ಬೆಳಗಾವಿ ತಂಡದ ಬಾಲೆಯರು, ಎರಡನೇ ಅವಧಿಯಲ್ಲಿ ಎದುರಾಳಿ ತಂಡದ ಮೇಲೆ ಆಕ್ರಮಣಕಾರಿ ದಾಳಿ ನಡೆಸಿದರು.

ಈ ಸಮಯದಲ್ಲಿ ಧಾರವಾಡ ಬಾಲೆಯರ ಆಟ ಮಸಕಾಗಿ ಹೋಯಿತು. ಈ ಅವಧಿಯಲ್ಲಿ ಬೆಳಗಾವಿ ತಂಡ ಎರಡು ಗೋಲು ಗಳಿಸಿದರೆ, ಧಾರವಾಡ ತಂಡ ಕೇವಲ ಒಂದು ಗೋಲು ಗಳಿಸಲು ಮಾತ್ರ ಸಾಧ್ಯವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT