ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆಗಾರರ ಪ್ರಯತ್ನಕ್ಕೆ ಜಯ

Last Updated 15 ಫೆಬ್ರುವರಿ 2011, 9:15 IST
ಅಕ್ಷರ ಗಾತ್ರ

ಭದ್ರಾವತಿ: ಎಂಪಿಎಂ ಕಾರ್ಖಾನೆ ಕಬ್ಬು ಬೆಳಗಾರರಿಗೆ ಸರ್ಕಾರ ಕಳೆದ ಸಾಲಿನ ಬಾಕಿ ಹಣ ಪಾವತಿಗೆ ಮಂಜೂರು ಮಾಡಿರುವುದು ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಹೋರಾಟದ ಫಲವಾಗಿ ಎಂದು ಮುಖಂಡರು ಹೇಳಿದರು.ಈ ವಿಚಾರದಲ್ಲಿ ಪರಿಸ್ಥಿತಿ ಲಾಭ ಪಡೆಯಲು ಶಾಸಕರು ಪ್ರಯತ್ನ ನಡೆಸಿರುವುದು ಖಂಡನೀಯ ಎಂದು ಬೆಳೆಗಾರರ ಸಂಘದ ಪದಾಧಿಕಾರಿಗಳು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ನಮ್ಮ ಬೇಡಿಕೆಗೆ ಸ್ಪಂದಿಸಿದ ಕಾರ್ಖಾನೆ ಅಧ್ಯಕ್ಷ ಆರಗ ಜ್ಞಾನೇಂದ್ರ ಈ ಕುರಿತು ಸರ್ಕಾರದ ಮಟ್ಟದಲ್ಲಿ ಮಾತುಕತೆಗೆ ಬೆಂಗಳೂರಿಗೆ ನಿಯೋಗ ಕರೆದುಕೊಂಡು ಹೋದರು. ಅಲ್ಲಿ ಮುಖ್ಯಮಂತ್ರಿ, ಸಂಸದ ಬಿ.ವೈ. ರಾಘವೇಂದ್ರ ಸೇರಿದಂತೆ ಇನ್ನಿತರ ಅಧಿಕಾರಿಗಳು ಹಾಜರಿದ್ದು, ಬಾಕಿ ಹಣ ಪಾವತಿಗೆ ಆದೇಶ ನೀಡಿದರು. ಅದಕ್ಕೆ ನಮ್ಮ ಸಂಘ ಅವರನ್ನು ಅಭಿನಂದಿಸುತ್ತದೆ ಎಂದರು.ಹಾಲಿ ಸರಬರಾಜು ಮಾಡಿದ ಕಬ್ಬಿಗೆ ಹಣ ಪಾವತಿಯಲ್ಲಿ ವಿಳಂಬ ಇದೆ. ಇದನ್ನು ಆಡಳಿತ ಮಂಡಳಿ ಕೂಡಲೇ, ಸರಿಪಡಿಸುವಂತೆ ಇದೇ ಸಂದರ್ಭದಲ್ಲಿ ಮುಖಂಡರು ಮನವಿ ಮಾಡಿದರು.ಕೆ. ಈರಣ್ಣ, ಬಿ. ನಿಂಗಪ್ಪ, ರಮೇಶ್, ಕೃಷ್ಣೇಗೌಡ, ಕೆ. ಶಿವಾಜಿರಾವ್, ಪುಟ್ಟೇಗೌಡ, ಎಸ್.ಬಿ. ನಾಗರಾಜ, ಶಫೀವುಲ್ಲಾ, ಎಸ್.ಕೆ. ಶ್ರೀಮಂತಪ್ಪ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT