ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳ್ಳಿ ಬೆಲೆ ಕೆಜಿಗೆ 60 ಸಾವಿರಕ್ಕೆ ಏರಿಕೆ

Last Updated 8 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಬೆಳ್ಳಿ ಬೆಲೆಯು ಯಾವುದೇ ನಿಯಂತ್ರಣಕ್ಕೆ ಸಿಗದೇ ದಾಖಲೆ ಪ್ರಮಾಣದ ಏರುಗತಿಯಲ್ಲಿ ಸಾಗಿದ್ದು, ಇಲ್ಲಿಯ ಮಾರುಕಟ್ಟೆಯಲ್ಲಿ ಶುಕ್ರವಾರ  ಇನ್ನೊಂದು ಹೊಸ ಮೈಲಿಗಲ್ಲು ತಲುಪಿತು.

ಊಹಾತ್ಮಕ ಖರೀದಿ ಮತ್ತು ಜಾಗತಿಕ ಮಾರುಕಟ್ಟೆಯಿಂದ ದೊರೆತ ಉತ್ತೇಜನದಿಂದ ಪ್ರತಿ ಕೆಜಿ ಬೆಲೆಯು  ರೂ 60 ಸಾವಿರದ ಗಡಿ ದಾಟಿತು. ಪ್ರತಿ ಕೆಜಿಗೆ  ರೂ 1,045ರಂತೆ ಏರಿಕೆ ಕಂಡ ಬೆಳ್ಳಿ ಬೆಲೆ ರೂ 60,125ಕ್ಕೆ ತಲುಪಿತು.

ಸಂಗ್ರಹಕಾರರ ಮತ್ತು ಹೂಡಿಕೆ ಉದ್ದೇಶದ ಖರೀದಿ ಫಲವಾಗಿ ಸ್ಟ್ಯಾಂಡರ್ಡ್ ಚಿನ್ನದ ಬೆಲೆಯೂ ಪ್ರತಿ 10 ಗ್ರಾಂಗಳಿಗೆ ರೂ 110ರಂತೆ ಹೆಚ್ಚಳಗೊಂಡು   ರೂ 21,090ಕ್ಕೆ ಏರಿಕೆ ಕಂಡಿತು. ಅಪರಂಜಿ ಚಿನ್ನವೂ ತಲಾ 10 ಗ್ರಾಂಗಳಿಗೆ     ರೂ 21,190ಕ್ಕೆ ಹೆಚ್ಚಳ ಕಂಡಿತು.ಸಾಗರೋತ್ತರ ಮಾರುಕಟ್ಟೆಯಲ್ಲಿ ಈ ಎರಡೂ ಲೋಹಗಳ ಬೆಲೆಗಳು ಪ್ರತಿ ದಿನ ಹೊಸ ಹೊಸ ಎತ್ತರಕ್ಕೆ ಏರುತ್ತಿವೆ. ಮಧ್ಯಪ್ರಾಚ್ಯದಲ್ಲಿ ಕೊನೆಗೊಳ್ಳದ ಹಿಂಸಾಚಾರ ಮತ್ತು ಯೂರೋಪ್ ದೇಶಗಳಲ್ಲಿನ ಹಣಕಾಸು  ಬಿಕ್ಕಟ್ಟಿನ ಫಲವಾಗಿ ಬೆಲೆಗಳು ಏರುಗತಿಯಲ್ಲಿಯೇ ಸಾಗಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT