ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳ್ಳಿಹೆಜ್ಜೆಯಲ್ಲಿ ಜಾನಕೀರಾಮ್

Last Updated 27 ಜನವರಿ 2012, 19:30 IST
ಅಕ್ಷರ ಗಾತ್ರ

ಕರ್ನಾಟಕ ಚಲನಚಿತ್ರ ಅಕಾಡೆಮಿ: ಶನಿವಾರ ಬೆಳ್ಳಿಹೆಜ್ಜೆಯಲ್ಲಿ ಹಿರಿಯ ಛಾಯಾಗ್ರಾಹಕ, ನಿರ್ದೇಶಕ ಕೆ.ಜಾನಕೀರಾಮ್ ಅವರೊಂದಿಗೆ ಸಂವಾದ.
ಛಾಯಾಗ್ರಾಹಕರಾಗಿ ಚಿತ್ರರಂಗ ಪ್ರವೇಶಿಸಿ ಚಿತ್ರೋದ್ಯಮದ ನಾಲ್ಕಾರು ವಿಭಾಗಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವ ಹಿರಿಯ ನಿರ್ದೇಶಕ ಕೆ.ಜಾನಕೀರಾಮ್.

ಮದ್ರಾಸ್‌ನ ರೋಹಿಣಿ ಸ್ಟುಡಿಯೋದಲ್ಲಿ ಛಾಯಾಗ್ರಹಣ ವಿಭಾಗದ ಅಪ್ರೆಂಟಿಸ್ ಆಗಿ ಕೆಲಸಕ್ಕೆ ಸೇರಿದ ಜಾನಕೀರಾಮ್ ಹಿರಿಯ ಛಾಯಾಗ್ರಾಹಕರೊಂದಿಗೆ ಪರಿಣತಿ ಪಡೆದು `ಸೋದರಿ~ ಚಿತ್ರದ ಮೂಲಕ ಸ್ವತಂತ್ರ ಛಾಯಾಗ್ರಾಹಕರಾದರು. 1950 ಹಾಗೂ 60ರ ದಶಕದಲ್ಲಿ ಕನ್ನಡದ ಪ್ರಮುಖ ಚಿತ್ರಗಳಾದ `ಭಕ್ತ ವಿಜಯ~, `ಓಹಿಲೇಶ್ವರ~, `ಶ್ರೀಶೈಲ ಮಹಾತ್ಮೆ~, `ಭಕ್ತ ಕಬೀರ್~, `ಸರ್ವಜ್ಞ ಮೂರ್ತಿ~ ಮೊದಲಾದ ಚಿತ್ರಗಳಿಗೆ ಛಾಯಾಗ್ರಹಣ ನೀಡಿದ ಅವರು ಪುಣ್ಯ ಪುರುಷ ಚಿತ್ರವನ್ನು ನಿರ್ದೇಶಿಸಿದರು.

ಕಾಸಿದ್ರೆ ಕೈಲಾಸ, ಸಂಶಯ ಫಲ, ಚಿನ್ನಾ ನಿನ್ನ ಮುದ್ದಾಡುವೆ, ಬಲು ಅಪರೂಪ ನಮ್ ಜೋಡಿ ಮೊದಲಾದ ಯಶಸ್ವಿ ಚಿತ್ರಗಳನ್ನು ನಿರ್ಮಿಸಿದ ಕೆ.ಜಾನಕೀರಾಮ್, ನಿರ್ಮಾಪಕ- ನಿರ್ದೇಶಕರ ಸಂಘಗಳ ಬೆಳವಣಿಗೆಯಲ್ಲಿ ಸಕ್ರಿಯ ಪಾತ್ರವಹಿಸಿದರು. ಅಲ್ಲದೆ ವಾಣಿಜ್ಯ ಮಂಡಳಿ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು.

ಡಾ.ರಾಜ್‌ಕುಮಾರ್ ಪ್ರಶಸ್ತಿಯೂ ಸೇರಿದಂತೆ ಹಲವು ಗೌರವಗಳಿಗೆ ಪಾತ್ರರಾದ ಜಾನಕೀರಾಮ್ ಛಾಯಾಗ್ರಹಣ, ನಿರ್ದೇಶನ, ನಿರ್ಮಾಣ ಹಂಚಿಕೆ ವಲಯಗಳಲ್ಲಿ ಸಕ್ರಿಯರಾಗಿದ್ದರು. ಈ ತಿಂಗಳ  ಬೆಳ್ಳಿಹೆಜ್ಜೆಯಲ್ಲಿ ಅವರೊಂದಿಗೆ ಮುಖಾಮುಖಿಯಾಗುವ ಅವಕಾಶ.
ಸ್ಥಳ:ಪ್ರಿಯದರ್ಶಿನಿ ಚಿತ್ರಮಂದಿರ, ಬಾದಾಮಿ
ಹೌಸ್. ಸಂಜೆ 4.30.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT