ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಂದ್ರೆ ಲೇಖನ ಸ್ಪರ್ಧೆಗೆ ಅರ್ಜಿ ಆಹ್ವಾನ

Last Updated 11 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: `ದ.ರಾ. ಬೇಂದ್ರೆ ಕಾವ್ಯ ಕೂಟ~ವು ಬೇಂದ್ರೆಯವರ ಹೆಸರಿನಲ್ಲಿ ನಡೆಸುವ `ಸ್ಮೃತಿ ಲೇಖನ ಸ್ಪರ್ಧೆ~ಗೆ ಸ್ನಾತಕೋತ್ತರ ವಿದ್ಯಾರ್ಥಿಗಳಿಂದ ಲೇಖನ ಆಹ್ವಾನಿಸಿದೆ. `ಬೇಂದ್ರೆ ಸಾಹಿತ್ಯದಲ್ಲಿ ಶೋಷಿತ ಪರವಾದ ದನಿ~ ಎಂಬುದು ಈ ಬಾರಿಯ ವಿಷಯ.

ಈ ವಿಷಯ ಕುರಿತು 2,500 ಪದಗಳಿಗೆ ಮೀರದಂತೆ ಲೇಖನ ಬರೆಯಬೇಕು. ಸ್ಪರ್ಧೆಗೆ ಕಳುಹಿಸಿದ ಲೇಖನವನ್ನು ಯಾವುದೇ ಕಾರಣಕ್ಕೂ ಹಿಂದಿರುಗಿಸಲಾಗುವುದಿಲ್ಲ. ಲೇಖನದ ಕೊನೆಯಲ್ಲಿ ಆಕರ ಗ್ರಂಥಗಳ ಪಟ್ಟಿ ನೀಡಬೇಕು ಎಂದು ಕಾವ್ಯಕೂಟದ ಅಧ್ಯಕ್ಷ ಡಾ.ಜಿ. ಕೃಷ್ಣಪ್ಪ ತಿಳಿಸಿದ್ದಾರೆ.

ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದವರಿಗೆ 4,000 ರೂಪಾಯಿ ಬಹುಮಾನ ನೀಡಲಾಗುವುದು. ಎರಡು ಮತ್ತು ಮೂರನೆಯ ಸ್ಥಾನ ಪಡೆದವರಿಗೆ ಕ್ರಮವಾಗಿ 3,000 ಮತ್ತು 2,000 ರೂಪಾಯಿ ನಗದು ಬಹುಮಾನ ಇದೆ.
ಯಾವುದೇ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು.

ಪ್ರತಿ ವಿದ್ಯಾಸಂಸ್ಥೆಯಿಂದ ಭಾಗವಹಿಸಬಹುದಾದ ವಿದ್ಯಾರ್ಥಿಗಳ ಸಂಖ್ಯೆಗೆ ಮಿತಿ ಇಲ್ಲ. ಆದರೆ ವಿದ್ಯಾರ್ಥಿಗಳು ತಮ್ಮ ಲೇಖನದ ಜೊತೆಗೆ ಕಾಲೇಜು/ವಿ.ವಿ.ಯ ಅಧ್ಯಾಪಕರಿಂದ ಪಡೆದ ಪರಿಚಯ ಪತ್ರವನ್ನೂ ಕಳುಹಿಸಬೇಕು. ತಮ್ಮ ಹೆಸರು, ಮೊಬೈಲ್ ಸಂಖ್ಯೆಯ ಜೊತೆಗೆ ಕಾಲೇಜು ಮತ್ತು ಮನೆಯ ವಿಳಾಸವನ್ನು ನಮೂದಿಸಬೇಕು.

ಲೇಖನಗಳನ್ನು ಕಳುಹಿಸಬೇಕಾದ ವಿಳಾಸ: ಡಾ.ಜಿ. ಕೃಷ್ಣಪ್ಪ, ಅಧ್ಯಕ್ಷರು, ದ.ರಾ. ಬೇಂದ್ರೆ ಕಾವ್ಯಕೂಟ, ನಂ. 22, `ಶ್ರೀಗುರುದತ್ತ ನಿಲಯ~, 1ನೇ ತಿರುವು, ನೇತಾಜಿ ನಗರ, ಮತ್ತಿಕೆರೆ, ಬೆಂಗಳೂರು - 560054. ದೂರವಾಣಿ ಸಂಖ್ಯೆ: 080-23603402 ಮತ್ತು 99721 09209. ಲೇಖನ ತಲುಪಲು ನವೆಂಬರ್ 21 ಕಡೆಯ ದಿನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT