ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಗನೇ ಜಯ ಸಾಧಿಸಬಹುದಿತ್ತು

Last Updated 12 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಅಡಿಲೇಡ್ (ಪಿಟಿಐ): `ಆಸ್ಟ್ರೇಲಿಯಾ ವಿರುದ್ಧದ ಕ್ರಿಕೆಟ್ ಪಂದ್ಯದಲ್ಲಿ ಗೆಲುವು ಪಡೆಯಲು 50 ಓವರ್‌ಗಳವರೆಗೆ ಕಾಯುವುದು ಬೇಕಿರಲಿಲ್ಲ. ಇನ್ನೂ ಎರಡು ಓವರ್ ಬಾಕಿ ಇದ್ದಾಗಲೇ ಗೆಲುವು ಪಡೆಯಬಹುದಿತ್ತು...~
-ಈ ಅಭಿಪ್ರಾಯ ವ್ಯಕ್ತಪಡಿಸಿದ್ದು `ಪಂದ್ಯ ಶ್ರೇಷ್ಠ~ ಗೌರವ ಪಡೆದ ಗೌತಮ್ ಗಂಭೀರ್.

`ಕೊನೆಯವರೆಗೂ ಕಾಯುವುದು ಬೇಕಿರಲಿಲ್ಲ. ಏಕೆಂದರೆ, ಕೊನೆಯ ಓವರ್‌ನಲ್ಲಿ ಬ್ಯಾಟ್ಸ್‌ಮನ್ ಹಾಗೂ ಬೌಲರ್ ಮೇಲೆ ವಿಪರೀತ ಒತ್ತಡವಿರುತ್ತದೆ. ಕೊನೆಯ ಓವರ್‌ನಲ್ಲಿ ದೋನಿ ಸಿಡಿಸಿದ ಸಿಕ್ಸರ್ ಪಂದ್ಯಕ್ಕೆ ತಿರುವು ತಂದುಕೊಟ್ಟಿತು. ಗೆಲುವನ್ನು ತಂದುಕೊಡಲು `ಮಹಿ~ ಏಕೆ ತಡ ಮಾಡಿದರು ಎನ್ನುವುದು ಗೊತ್ತಾಗಲಿಲ್ಲ ಎಂದು ನುಡಿದರು.

`ಸರದಿ ಪ್ರಕಾರ ವಿಶ್ರಾಂತಿ~ ನಿರ್ಧಾರದ ಬಗ್ಗೆ ಆಡಳಿತ ಮಂಡಳಿ ಹಾಗೂ ತಂಡದಲ್ಲಿ ಸಾಕಷ್ಟು ಚರ್ಚೆ ನಡೆದಿದೆ ಎನ್ನುವ ವಿಷಯವನ್ನು ಅವರು ಬಹಿರಂಗ ಪಡಿಸಿದರು.

ಕ್ಷೇತ್ರ ರಕ್ಷಣೆಯಲ್ಲಿ ಲೋಪ: `ಕ್ಷೇತ್ರ ರಕ್ಷಣೆಯಲ್ಲಿ ಸಾಕಷ್ಟು ತಪ್ಪುಗಳಾದವು. ಇದು ಸೋಲಿಗೆ ಕಾರಣವಾಯಿತು ಎಂದು ಆಸ್ಟ್ರೇಲಿಯಾ ತಂಡದ ನಾಯಕ ಮೈಕಲ್ ಕ್ಲಾರ್ಕ್ ಹೇಳಿದರು. ಸತತ ಗೆಲುವಿನ ಹಾದಿಯಲ್ಲಿ ಸಾಗಿದ್ದ ನಮಗೆ ಈ ಸೋಲಿನಿಂದ ಬೇಸರವಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT