ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಡಿ ಕುರಿತ ಪುಸ್ತಕ ಇಂದು ಬಿಡುಗಡೆ

Last Updated 28 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಬಿಷನ್ ಸಿಂಗ್ ಬೇಡಿ ಕುರಿತು ಸುರೇಶ್ ಮೆನನ್ ಬರೆದಿರುವ `ಬಿಷನ್- ಪೋರ್‌ಟ್ರೇಟ್ ಆಫ್ ಎ ಕ್ರಿಕೆಟರ್~ ಪುಸ್ತಕದ ಬಿಡುಗಡೆ ಶನಿವಾರ ನಡೆಯಲಿದೆ. ಸಮಾರಂಭದಲ್ಲಿ ಇ.ಎ.ಎಸ್. ಪ್ರಸನ್ನ ಅವರು ಬೇಡಿ ಕುರಿತು ಮಾತನಾಡಲಿದ್ದಾರೆ.

ಜಾಗತಿಕ ಕ್ರಿಕೆಟ್ ಕಂಡಂತಹ ಶ್ರೇಷ್ಠ ಸ್ಪಿನ್ನರ್‌ಗಳಲ್ಲಿ ಒಬ್ಬರೆನಿಸಿದ್ದ ಬೇಡಿ ಜೀವನದ ಸಮಗ್ರ ಚಿತ್ರಣವನ್ನು ಮೆನನ್ ಈ ಪುಸ್ತಕದಲ್ಲಿ ತೆರೆದಿಟ್ಟಿದ್ದಾರೆ. ಅವರು ಬೆಳೆದುಬಂದ ಹಾದಿ, ಆಟಗಾರನಾಗಿ ಹೇಗಿದ್ದರು, ಭಾರತ ತಂಡದ ನಾಯಕನಾಗಿದ್ದ ಸಂದರ್ಭ ಸಹ ಆಟಗಾರರೊಂದಿಗೆ ಹೇಗೆ ವ್ಯವಹರಿಸುತ್ತಿದ್ದರು- ಮುಂತಾದ ವಿಷಯಗಳನ್ನು ಬರೆದಿದ್ದಾರೆ.

ಕ್ರಿಕೆಟ್ ಜೀವನದಲ್ಲಿ ಅನುಭವಿಸಿದ್ದ ಕಷ್ಟದ, ಸೋಜಿಗದ ಸಂಗತಿಗಳನ್ನು ಇದು ಒಳಗೊಂಡಿದೆ. ಬೇಡಿ ಅವರನ್ನು ಹತ್ತಿರದಿಂದ ಬಲ್ಲವರು ನೀಡಿದ ಕುತೂಹಲಕರ ಮಾಹಿತಿಯೂ ಪುಸ್ತಕದಲ್ಲಿದೆ. ಅನಿಲ್ ಕುಂಬ್ಳೆ ಇದರ ಮುನ್ನುಡಿ ಬರೆದಿದ್ದಾರೆ.

ಸ್ಥಳ: ಬೆಂಗಳೂರು ಇಂಟರ್‌ನ್ಯಾಷನಲ್ ಸೆಂಟರ್, ಟೆರಿ ಕಾಂಪ್ಲೆಕ್ಸ್, 4ನೇ ಮುಖ್ಯರಸ್ತೆ, 2ನೇ ಕ್ರಾಸ್, ದೊಮ್ಮಲೂರು 2ನೇ ಹಂತ, ಬೆಂಗಳೂರು. ಸಮಯ: ಬೆಳಿಗ್ಗೆ 11.00

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT