ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಡಿಕೆ ಈಡೇರಿಕೆಗೆ ಆಗ್ರಹ: ದೇವದಾಸಿಯರ ಪ್ರತಿಭಟನೆ

Last Updated 13 ಡಿಸೆಂಬರ್ 2013, 7:14 IST
ಅಕ್ಷರ ಗಾತ್ರ

ಲಿಂಗಸುಗೂರು: ದೇವದಾಸಿ­ಯರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗುರುವಾರ ದೇವದಾಸಿ ಮಹಿಳೆಯರ ವಿಮೋಚನಾ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ತಹಶೀಲ್ದಾರ ಜಿ.ಎಸ್‌. ಮಹಾಜನ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ದೇವದಾಸಿ ಮಹಿಳೆಯರಿಗೆ ಕೃಷಿ ಯೋಗ್ಯ ಭೂಮಿ ನೀಡಬೇಕು. ದೇವದಾಸಿ ಮಕ್ಕಳಿಗೆ ಶಿಕ್ಷಣದಲ್ಲಿ ವಿಶೇಷ ಆದ್ಯತೆ ನೀಡಬೇಕು. ದೇವದಾಸಿ ಮಕ್ಕಳ ಮದುವೆಗೆ ವಿಶೇಷ ಪ್ರೋತ್ಸಾಹ ಧನ ಘೋಷಿಣೆ ಮಾಡ­ಬೇಕು.­ದೇವದಾಸಿ ಪುನರ್‌ ಸಮೀಕ್ಷೆ ನಡೆಸಬೇಕು.

ದೇವದಾಸಿ ಪಿಂಚಣಿ ಹಣ ₨1,500ಕ್ಕೆ ಹೆಚ್ಚಿಸಬೇಕು. ಪ್ರತ್ಯೇಕ ಕಲ್ಯಾಣ ನಿಧಿ ಸ್ಥಾಪಿಸಬೇಕು. ಈಗಾಗಲೇ ನೀಡಿರುವ ಸಾಲ ಮನ್ನಾ, ತಾಲ್ಲೂಕಿಗೊಂದು ಪುನರ್ವಸತಿ ಕೇಂದ್ರ ಕಚೇರಿ ಆರಂಭ, ನಿವೇಶನ ಸೇರಿದಂತೆ ಇತರೆ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು. ಮುಖಂಡರಾದ ಹುಲಗಮ್ಮ, ಸರೋಜಾ, ಪರಶುರಾಮ, ರತ್ನಾ, ಮುತ್ತಮ್ಮ, ಗುಂಡಮ್ಮ, ಚೆನ್ನಮ್ಮ, ರಂಗನಾಥ, ಹನುಮಂತ, ಕೆ.ಎಸ್‌. ಸರಸ್ವತಿ, ಗುರುಪಾದಪ್ಪ ನಾಯಿಕೊಡಿ, ಪ್ರಶಾಂತ, ರಮೇಶ ಮೊದಲಾವದರು ಪ್ರತಿಭಟನೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT