ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇನಾಮಿ ಹೆಸರಲ್ಲಿ ಕರಪತ್ರ ಮುದ್ರಣ–ಆರೋಪ

Last Updated 16 ಸೆಪ್ಟೆಂಬರ್ 2013, 9:46 IST
ಅಕ್ಷರ ಗಾತ್ರ

ಮಾಗಡಿ: ‘ಪುರಸಭೆ ಹೆಸರಿನಲ್ಲಿ  ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕು ಸ್ಥಾಪನಾ ಕರಪತ್ರವನ್ನು ಅಕ್ರಮವಾಗಿ ಮುದ್ರಿಸಿ ಹಂಚಿರುವವರನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಬೇಕು’ ಎಂದು ಕೆ.ಪಿ. ಸಿ.ಸಿ ಸದಸ್ಯ ಎ.ಮಂಜುನಾಥ ಒತ್ತಾ ಯಿಸಿದರು.

ಕಾಂಗ್ರೆಸ್‌ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭಿವೃದ್ಧಿ ಕಾಮಗಾರಿಗಳಿಗೆ ನಾವು ಅಡ್ಡಿಪಡಿಸುವುದಿಲ್ಲ. ಆದರೆ ಪುರಸಭಾ ಸದಸ್ಯರ ಗಮನಕ್ಕೆ ತಾರದೆ ಅಭಿ ವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರ ವೇರಿ ಸಿರುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದರು.

ಕರಪತ್ರಗಳಲ್ಲಿ ಸೆ.16ರಂದು ಕೆಲವು ವಾರ್ಡ್ಗಳಲ್ಲಿ ಅಭಿವೃದ್ಧಿ ಕಾಮ ಗಾರಿ ಗಳಿಗೆ ಶಾಸಕ ಎಚ್‌.ಸಿ ಬಾಲಕೃಷ್ಣ ಅವರ ಅಧ್ಯಕ್ಷತೆಯಲ್ಲಿ ಶಂಕುಸ್ಥಾಪನೆ ನೆರವೇರಿಸುವುದಾಗಿ ತಿಳಿಸಲಾಗಿದೆ. ಈ ಕರಪತ್ರಗಳಲ್ಲಿ ನೂತನ ಪುರಸಭಾ ಸದಸ್ಯರ ಹೆಸರಾಗಲೀ ಅಥವಾ ಪತ್ರಿಕೆ ಮಾಡಿಸಿರುವವರ ಹೆಸರಾಗಲಿ ಇಲ್ಲ.

ಸೆ.16ರಂದು ಅಭಿವೃದ್ಧಿ ಕಾಮ ಗಾರಿಗಳ ಶಂಕುಸ್ಥಾಪನೆ ನೆರವೇರಿ ಸಿದರೆ ಪ್ರತಿಭಟನೆ ನಡೆಸುವುದಾಗಿ  ಯೂ  ಅವರು ತಿಳಿಸಿದರು. 
ನಾಲ್ಕು ಬಾರಿ ಶಾಸಕರಾಗಿರುವ ಎಚ್.ಸಿ.ಬಾಲಕೃಷ್ಣ ಅವರ ಗಮನಕ್ಕೆ ತರದೆ ಕರಪತ್ರ ಮುದ್ರಿಸಲಾಗಿದೆಯೋ ಅಥವಾ ಶಾಸಕರ ಹಿಂಬಾಲಕರು ಸಂವಿ ಧಾನಾತ್ಮಕ ಆಶಯಗಳನ್ನು ಗಾಳಿಗೆ ತೂರಿ ಅಕ್ರಮವಾಗಿ  ಕರಪತ್ರ ಮುದ್ರಿ ಸಿದ್ದಾರೆಯೇ ಎಂಬುದರ ಬಗ್ಗೆ ಜಿಲ್ಲಾ ಧಿಕಾರಿ ತನಿಖೆ ನಡೆಸಬೇಕು ಎಂದು ಮಂಜುನಾಥ ಆಗ್ರಹಿಸಿದರು.

ಜಿ.ಪಂ ಮಾಜಿ ಅಧ್ಯಕ್ಷ ನರಸಿಂಹ ಮೂರ್ತಿ, ಪುರಸಭಾ ಸದಸ್ಯರಾದ ನಿರ್ಮಲಾ, ಪಿ.ವಿ.ಸೀತಾರಾಂ, ಎಂ.ಎನ್. ಮಂಜುನಾಥ್, ಕೆ.ವಿ. ಬಾಲು, ಎಸ್. ಮಹದೇವ್, ಮಹೇ ಶ್, ಶಿವ ಕುಮಾರ್, ನರಸಿಂಹ ಮೂರ್ತಿ, ನಯಾಜ್ ಅಹ್ಮದ್ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT