ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇರೆ ವಿ.ವಿಗೆ 435 ಭಾರತೀಯ ವಿದ್ಯಾರ್ಥಿ ಸ್ಥಳಾಂತರಕ್ಕೆ ಒಪ್ಪಿಗೆ

Last Updated 22 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ಕ್ಯಾಲಿಫೋರ್ನಿಯಾ ಮೂಲದ `ಶ್ಯಾಮ್~ ಟ್ರೈ-ವ್ಯಾಲಿ ವಿಶ್ವವಿದ್ಯಾಲಯದಲ್ಲಿ ಹೆಸರು ದಾಖಲಿಸಿರುವ ಸುಮಾರು 1,000 ಭಾರತೀಯ ವಿದ್ಯಾರ್ಥಿಗಳ ವಲಸೆ ವಂಚನೆ ಪ್ರಕರಣವನ್ನು ವೈಯಕ್ತಿಕವಾಗಿ ಪರಿಶೀಲಿಸುತ್ತಿರುವ ಅಮೆರಿಕ ಆಡಳಿತವು, ಇವರಲ್ಲಿ 435 ಮಂದಿಯನ್ನು ಬೇರೆ ವಿವಿಗೆ ಸ್ಥಳಾಂತರಿಸಲು ಒಪ್ಪಿಗೆ ನೀಡಿದೆ.

ಸಾಮೂಹಿಕ ವಲಸೆ ವಂಚನೆ ಆರೋಪದ ಮೇಲೆ ಈ ವರ್ಷಾರಂಭದಲ್ಲಿ ದಾಳಿ ನಡೆಸಿ, ವಿವಿಯನ್ನು ಮುಚ್ಚಿಸಿದ್ದ ಅಮೆರಿಕದ ಆಂತರಿಕ ಭದ್ರತಾ ಇಲಾಖೆ, ವಿದೇಶಾಂಗ ಇಲಾಖೆ, ವಲಸೆ ಮತ್ತು ಸುಂಕ ಜಾರಿ ಸೇವೆ ಹಾಗೂ ಪೌರತ್ವ ಮತ್ತು ವಲಸೆ ಸೇವೆಗಳ ಅಧಿಕಾರಿಗಳು ಶುಕ್ರವಾರ ಇಲ್ಲಿ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳನ್ನು ಭೇಟಿಯಾಗಿ ವಿವಿ ವಿದ್ಯಾರ್ಥಿಗಳ ಹಲವಾರು ಸಮಸ್ಯೆಗಳ ಬಗ್ಗೆ ಚರ್ಚಿಸಿದ ನಂತರ ಸೂಕ್ತ ಕ್ರಮದ ಭರವಸೆ ನೀಡಿದ್ದಾರೆ.

ವಿ.ವಿಯ 1000ಕ್ಕೂ ಹೆಚ್ಚಿನ ಭಾರತೀಯ ವಿದ್ಯಾರ್ಥಿಗಳ ಪೈಕಿ 435 ಮಂದಿಯನ್ನು ಬೇರೆ ವಿ.ವಿಗೆ ಸ್ಥಳಾಂತರಿಸಲು ಒಪ್ಪಿಗೆ ಸೂಚಿಸಿದ ಈ ಅಮೆರಿಕ ಅಧಿಕಾರಿಗಳು, ಉಳಿದವರಲ್ಲಿ 145 ಮಂದಿಗೆ ಅನುಮತಿ ನಿರಾಕರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT