ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಲೂರು: ಸಂಚಾರ ಇನ್ನಷ್ಟು ಸುಗಮ

Last Updated 29 ಜನವರಿ 2013, 6:51 IST
ಅಕ್ಷರ ಗಾತ್ರ

ಬೇಲೂರು: ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆ ಯಾದ ಪಟ್ಟಣದ ಮುಖ್ಯರಸ್ತೆಯ ಅಗಲೀಕರಣ ಮಾಡಬೇಕು ಎಂಬ ಒತ್ತಡದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖೆ ಮತ್ತು ಪುರಸಭೆ ವತಿಯಿಂದ ಮಂಗಳವಾರದಿಂದ ಮಾರ್ಕಿಂಗ್ ಕಾರ್ಯ ಆರಂಭವಾಗಲಿದೆ.

ಮಂಗಳೂರಿನಿಂದ- ತಿರುವಣ್ಣಾಮಲೈಗೆ ಸಂಪರ್ಕ ಕಲ್ಪಿಸುವ 700 ಕಿ.ಮೀ. ಉದ್ದದ ರಸ್ತೆಯನ್ನು ಕೇಂದ್ರ ಸರ್ಕಾರ 2009ರಲ್ಲಿ ರಾಷ್ಟ್ರೀಯ ಹೆದ್ದಾರಿಯಾಗಿ ಘೋಷಿಸಿದೆ. ಬೇಲೂರು ಪಟ್ಟಣದ ಜೆ.ಪಿ. ನಗರದಿಂದ ಬಾಣಾವರ ವರೆಗಿನ 46.90 ಕಿ.ಮೀ. ರಸ್ತೆ ಅಭಿವೃದ್ಧಿಗೆ 137 ಕೋಟಿ ರೂಪಾಯಿ ಹಣ ಬಿಡುಗಡೆ ಯಾಗಿದೆ. ಬಾಣಾವರ ಕಡೆಯಿಂದ ಕಾಮಗಾರಿಯೂ ಶರುವಾಗಿದೆ. ಮರ ತೆರವು, ವಿದ್ಯುತ್ ಕಂಬ ಸ್ಥಳಾಂತರ ಪ್ರಕ್ರಿಯೆ ಪೂರ್ಣಗೊಂಡಿವೆ. 31 ಮೋರಿ, 21 ಪೈಪ್‌ಲೈನ್, ಏಳು ಮಿನಿ ಸೇತುವೆ ಈ ರಸ್ತೆಯಲ್ಲಿ ಬರುತ್ತವೆ.

ಹಿಂದೆ ಬೇಲೂರಿನಲ್ಲಿ ದ್ವಿಪಥ ನಿರ್ಮಿಸಲು ರಾಷ್ಟ್ರೀಯ ಹೆದ್ದಾರಿ ಇಲಾಖೆ ನಿರ್ಧರಿಸಿತ್ತು. ಆದರೆ ಪ್ರವಾಸಿ ಕೇಂದ್ರವಾದ ಪಟ್ಟಣದ ಮುಖ್ಯರಸ್ತೆಯನ್ನು ಚತುಷ್ಪಥವಾಗಿ ಪರಿವರ್ತಿಸಬೇಕು ಎಂಬ ಕೂಗು ಕೇಳಿ ಬಂದಿತ್ತು. ರಾಷ್ಟ್ರೀಯ ಹೆದ್ದಾರಿ ಇಲಾಖೆ, ಜಿಲ್ಲಾಡ ಳಿತದ ಮೇಲೆ ಒತ್ತಡ ಹೇರಲಾಗಿತ್ತು. ಮುಖ್ಯರಸ್ತೆ ಕಿರಿದಾಗಿದೆ. ವಾಹನ ದಟ್ಟಣೆ ಹೆಚ್ಚಿದೆ. ವಾಹನ ಸವಾರರು ಪ್ರಯಾಸ ಪಡಬೇಕಾದ ಕಾರಣ ರಸ್ತೆ ವಿಸ್ತರಣೆಗೆ ಬೇಡಿಕೆ ತೀವ್ರಗೊಂಡಿತ್ತು.
ಜಿಲ್ಲಾಧಿಕಾರಿ ಸೂಚನೆ ಹಿನ್ನೆಲೆಯಲ್ಲಿ ಪುರಸಭೆ ಮತ್ತು ರಾಷ್ಟ್ರೀಯ ಹೆದ್ದಾರಿ ಇಲಾಖೆ ಜ.29ರಂದು ರಸ್ತೆಯ ಮಾರ್ಕಿಂಗ್‌ಗೆ ಮುಂದಾಗಿದೆ.

ರಸ್ತೆ ಮಧ್ಯ ದಿಂದ 13.5 ಮೀಟರ್ ರಸ್ತೆ ವಿಸ್ತರಣೆಗೆ ಉದ್ದೇಶಿ ಸಲಾಗಿದೆ (ಎರಡೂ ಬದಿ ಸೇರಿ 27 ಮೀಟರ್). ಈ ಪೈಕಿ ಒಂದು ಬದಿಯಲ್ಲಿ 7.5 ಮೀಟರ್ (ಎರಡೂ ಬದಿ 15ಮೀ.) ರಸ್ತೆ ಡಾಂಬರೀಕರಣ, 1 ಮೀಟರ್‌ನಲ್ಲಿ ಡಿವೈಡರ್, 3 ಮೀಟರ್‌ನಲ್ಲಿ ವಾಹನ ನಿಲುಗಡೆ ಮತ್ತು ಪಾದಚಾರಿ ರಸ್ತೆ ಹಾಗೂ ಚರಂಡಿ ನಿರ್ಮಾ ಣಕ್ಕೆ 2.5 ಮೀಟರ್ ಜಾಗ ಬಳಸಲು ಉದ್ದೇಶಿಸಲಾ ಗಿದೆ. ಜೆ.ಪಿ.ನಗರದ ಸೀಮೆಎಣ್ಣೆ ಬಂಕ್‌ನಿಂದ ನೆಹರು ನಗರದ ವೃತ್ತದ ವರೆಗೆ 2.8 ಕಿ.ಮೀ. ರಸ್ತೆ ಅಗಲೀಕರಣಕ್ಕೆ ಮಾರ್ಕಿಂಗ್ ನಡೆಯಲಿದೆ.

`ಮಾರ್ಕಿಂಗ್ ನಂತರ ಜನರು ಸ್ವಯಂಪ್ರೇರಿತರಾಗಿ ಕಟ್ಟಡ ತೆರವುಗೊಳಿಸಿದರೆ ಕಾಮಗಾರಿ ಮಾಡಲಾಗು ವುದು. ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರದ ಮಂಜೂರಾತಿಯೂ ಅಗತ್ಯ. ಬೇಲೂರು ಪ್ರವಾಸಿ ತಾಣವಾಗಿದ್ದರಿಂದ ಈ ಬಗ್ಗೆ ಶೀಘ್ರದಲ್ಲೇ ಅನು ಮತಿ ದೊರೆಯಲಿದೆ' ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿ ಯರ್ ಅನಂತರಾಜು `ಪ್ರಜಾವಾಣಿ'ಗೆ ತಿಳಿಸಿದರು.

ಬಿ.ಎಂ.ರವೀಶ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT