ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಸಿಗೆಯಲ್ಲಿ ಅಂದ ಚೆಂದ...

Last Updated 22 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ಬೇಸಿಗೆಯಲ್ಲಿ ಬೆವರು ಸುರಿಸುವುದು ಬಿಟ್ಟರೆ ಬೇರೆ ಯಾವ ಆರೈಕೆಯೂ ಸಾಧ್ಯವಿಲ್ಲ. ಲೀಟರುಗಟ್ಟಲೆ ನೀರು ಕುಡಿದರೂ ಪ್ರಯೋಜನವಿಲ್ಲ. ದುಬಾರಿ ಬೆಲೆಯ ಕಾಸ್ಮೆಟಿಕ್ಸ್ ಉಪಯೋಗಿಸಿದರೂ ಲಾಭವಿಲ್ಲ. ದಿನಕ್ಕೆ ನಾಲ್ಕೈದು ಬಾರಿ ಮುಖ ತೊಳೆಯುತ್ತಲೇ ಇರುತ್ತೇನೆ, ಹೀಗೆ ನಿರಾಶಳಾಗಿ ನುಡಿಯುತ್ತಾಳೆ ನಿಶಾ. ಹಾಗಾದರೆ ಬೇಸಿಗೆಯಲ್ಲಿ

ಸೌಂದರ್ಯ ರಕ್ಷಣೆ ಹೇಗೆ?:

ಬೇಸಿಗೆಯಲ್ಲಿ ಚರ್ಮದ ಬಣ್ಣ ಕಪ್ಪಾಗುವ ಸಂಭವ ಇರುವುದರಿಂದ 35 ಎಸ್ಪಿಎಫ್ ಇರುವ ವಾಟರ್ ಪ್ರೂಫ್ ಸನ್ ಸ್ಕ್ರೀನ್ ಉಪಯೋಗಿಸಿ.  ಹಗಲು ಹೊತ್ತು ಹೊರ ಹೋಗುವಾಗ  ಲೋಶನ್ ಹಚ್ಚಿಕೊಳ್ಳಿ.

ಮನೆಯಲ್ಲಿಯೇ ಹಣ್ಣು, ತರಕಾರಿ ಸಿಪ್ಪೆ ಉಪಯೋಗಿಸಿಯೂ ಫೇಶಿಯಲ್ ಮಾಡಿಕೊಳ್ಳಬಹುದು. ವೈಟನಿಂಗ್ ಫೇಶಿಯಲ್ ಎಲ್ಲ ಚರ್ಮಕ್ಕೂ ಸೂಕ್ತ.

ಈ ಸಮಯದಲ್ಲಿ ಹಸಿವೆ ಹೆಚ್ಚಾಗಿ ಕಾಡುವುದಿಲ್ಲ. ಆಹಾರ ಸೇವನೆಯಲ್ಲಿ ಪೌಷ್ಟಿಕಾಂಶದ ಕೊರತೆ ಆಗದಂತೆ ಎಚ್ಚರವಹಿಸಿ. ಕೆನೆರಹಿತ ಹಾಲು, ನೀರು ಮಜ್ಜಿಗೆ ನಿಮ್ಮ ಆಹಾರದ ಪಟ್ಟಿಯಲ್ಲಿ ಇರಲಿ. ಎಳನೀರು, ಹಣ್ಣಿನ ರಸಗಳ ಸೇವನೆ ದಿನಕ್ಕೆ ಎರಡು ಬಾರಿ ಆದರೂ ಇರಲಿ. ಜಂಕ್ ಫುಡ್, ಕರಿದ ತಿಂಡಿಗಳು, ಐಸ್ ಕ್ರೀಂ ವರ್ಜಿಸಿ.

ಬೇಸಿಗೆಯಲ್ಲಿ ಸುಲಭವಾಗಿ ಬೊಜ್ಜು ಕರಗಿಸಬಹುದು. ವಾಕಿಂಗ್, ಜಾಗಿಂಗ್ ಏರೋಬಿಕ್ಸ್ ಮೊರೆ ಹೋದರೆ ತಿಂಗಳಿಗೆ ಹತ್ತು ಕೆಜಿ ತೂಕ ಇಳಿಸಿಕೊಳ್ಳಬಹುದು. ಜೇನುತುಪ್ಪ ಹಾಕಿದ ನಿಂಬೆರಸಕ್ಕೆ ನೀರು ಸೇರಿಸಿ ದಿನಕ್ಕೆ ಮೂರು ಬಾರಿ ಕುಡಿಯಿರಿ.

ಕೂದಲ ಆರೈಕೆ ಕೂಡ ಅತ್ಯಗತ್ಯ. ಹೊಟ್ಟು, ಸೀಳು ಕೂದಲಿಂದ ಮುಕ್ತಿ ಪಡೆಯಲು ಬಿಸಿ ಮಾಡಿದ ಎಣ್ಣೆಯನ್ನು ತಲೆ ಬುರುಡೆಗೆ ಹಚ್ಚಿ ಸಣ್ಣ ಹಲ್ಲಿನ ಬಾಚಣಿಕೆಯಿಂದ ಕೂದಲು ಬಾಚಿಕೊಳ್ಳಿ. ಮೈಲ್ಡ್ ಶಾಂಪೂಗೆ ನೀರು ಸೇರಿಸಿ ಹಚ್ಚಿಕೊಂಡು ತೊಳೆಯಿರಿ. ಉತ್ತಮ ಕಂಡೀಶನರ್ ಹಚ್ಚಿಕೊಳ್ಳಿ.

ಸಡಿಲವಾದ ಹತ್ತಿ ಉಡುಗೆ ಉತ್ತಮ. ಹೀಗೆ ಕೆಲವು ಸರಳ ವಿಧಾನಗಳನ್ನು ಅನುಕರಿಸಿದಲ್ಲಿ  ಬೇಸಿಗೆಯನ್ನು ಸುಂದರವಾಗಿ ಕಳೆಯಬಹುದು ಅಲ್ಲವೇ?
  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT