ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಸ್ ಸೃಜನಾತ್ಮಕ ಕಲಿಕೆ

Last Updated 15 ಜುಲೈ 2012, 19:30 IST
ಅಕ್ಷರ ಗಾತ್ರ

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಬೆಂಗಳೂರು ಮೂಲದ `ಬೇಸ್~ ತನ್ನ ಬೆಂಗಳೂರು, ಧಾರವಾಡ, ಹುಬ್ಬಳ್ಳಿ, ಮೈಸೂರು ಹಾಗೂ ಉಡುಪಿ ಕೇಂದ್ರಗಳಲ್ಲಿ 5 ರಿಂದ 8 ನೇ ತರಗತಿ ವಿದ್ಯಾರ್ಥಿಗಳಿಗೆ ಸೃಜನಾತ್ಮಕ ಚಟುವಟಿಕೆಗಳನ್ನು ಆಧರಿಸಿದ ಡಿಸ್ಕವರ್, ಎನ್‌ಸ್ಕಿಲ್ ಎಂಬ ಕಲಿಕಾ ಕಾರ್ಯಕ್ರಮ ಆರಂಭಿಸಲಿದೆ. ಈ ತರಗತಿಗಳು ಜುಲೈ ಕೊನೆಯ ವಾರದಿಂದ ಪ್ರತೀ ವಾರಾಂತ್ಯ ನಡೆಯಲಿವೆ.

ಡಿಸ್ಕವರ್‌ನಲ್ಲಿ ವಿದ್ಯಾರ್ಥಿಗಳು ವಿಜ್ಞಾನ ಹಾಗೂ ಗಣಿತಗಳನ್ನು ಖುಷಿ, ಆಸಕ್ತಿಯಿಂದ ಕಲಿಯಲು ವಿಡಿಯೊ, ದೃಶ್ಯ-ಶ್ರಾವ್ಯ ಹಾಗೂ ಬಹುಮಾದ್ಯಮ ಮಾದರಿಗಳನ್ನು ಬಳಸಲಾಗುತ್ತದೆ.

ಎನ್-ಸ್ಕಿಲ್‌ನಲ್ಲಿ ತರಗತಿಯ ಪಾಠಗಳನ್ನು ಪಾತ್ರಾಭಿನಯ, ಮನಸ್ಸಿನ ಮ್ಯೋಪಿಂಗ್, ಬ್ರೇನ್ ಸ್ಟಾರ್ಮಿಂಗ್, ಡಿಬೇಟ್, ಗುಂಪುಚರ್ಚೆ, ಚಿತ್ರಕಲೆ, ಕುಶಲಕಲೆ ಮುಂತಾದ ವಿವಿಧ ಚಟುವಟಿಕೆ ತಂತ್ರಗಳ ಮೂಲಕ ಕಲಿಸಲಾಗುತ್ತದೆ.

ಮಕ್ಕಳಲ್ಲಿ ಹುದುಗಿರುವ ಸಾಮರ್ಥ್ಯಕ್ಕೆ ಪ್ರೋತ್ಸಾಹ ನೀಡುವಂತೆ ಇವನ್ನು ವಿನ್ಯಾಸ ಮಾಡಲಾಗಿದೆ ಎಂದು ಬೇಸ್ ನಿರ್ದೇಶಕರಾದ ವಲ್ಲಿಶ್ ಹೆರೂರ್ ಹೇಳುತ್ತಾರೆ.ಮಾಹಿತಿಗೆ: 080 4260 4600.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT