ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೊಂಬಾಟ್ ಬಾಲಿವುಡ್

Last Updated 13 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಸಂಜಯ್‌ಗೆ ಕರಿಷ್ಮಾ ನಾಯಕಿ
ಅಂತೂ ಇಂತೂ ಸಂಜಯ್‌ದತ್ ನಿರ್ಮಾಣದ `ಸತೇ ಪೆ ಸತ್ತಾ~ ಚಿತ್ರದ ರೀಮೇಕ್‌ಗೆ ನಾಯಕಿ ಆಯ್ಕೆಯಾಗಿದ್ದಾಳೆ. ಈ ಮೊದಲು ಕಾಜೋಲ್, ವಿದ್ಯಾ ಬಾಲನ್, ರಾಣಿ ಮುಖರ್ಜಿ, ಐಶ್ವರ್ಯಾ ರೈ, ಮಾಧುರಿ ದೀಕ್ಷಿತ್ ಹೆಸರು ಕೇಳಿಬಂದರೂ ಅಂತಿಮವಾಗಿ ಯಾರೂ ಆಯ್ಕೆಯಾಗಲಿಲ್ಲ. ಇದೀಗ ಕರೀಷ್ಮಾ ಕಪೂರ್ ನಾಯಕಿಯಾಗಲು ಒಪ್ಪಿಕೊಂಡಿದ್ದಾಳೆ.

ದೀರ್ಘಕಾಲದ ನಂತರ ಬಾಲಿವುಡ್‌ಗೆ ಹಿಂತಿರುಗಿ ಬಂದಿರುವ ಕರಿಷ್ಮಾ ಕಪೂರ್ ಈಗಾಗಲೇ `ಡೇಂಜರಸ್ ಇಷ್ಕ್~ನಲ್ಲಿ ನಟಿಸುತ್ತಿದ್ದಾಳೆ. ಅದರ ಚಿತ್ರೀಕರಣ ಮುಗಿದ ನಂತರ ಸೋಹಮ್ ಷಾ ನಿರ್ದೇಶನದ `ಸತ್ತೇ ಪೆ ಸತ್ತಾ~ ಆರಂಭವಾಗಲಿದೆ. 1980ರಲ್ಲಿ ಟ್ರೆಂಡ್ ಸೆಟ್ ಮಾಡಿದ್ದ `ಸತ್ತೇ ಪೆ ಸತ್ತಾ~ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ದ್ವಿಪಾತ್ರದಲ್ಲಿ ನಟಿಸಿದ್ದರು.


ಹಿಂದಿಗೆ `ಪಿತಾಮಗನ್~
ನಿರ್ದೇಶಕ ಸತೀಶ್ ಕೌಶಿಕ್ ಐದಾರು ವರ್ಷಗಳ ಕೆಳಗೆ ಬಂದಿದ್ದ ತಮಿಳಿನ `ಪಿತಾಮಗನ್~ ಸಿನಿಮಾವನ್ನು ಹಿಂದಿಗೆ ರೀಮೇಕ್ ಮಾಡಲು ಅವರು ತುದಿಗಾಲಲ್ಲಿ ನಿಂತಿದ್ದಾರೆ. ಮೂಲ ಚಿತ್ರದಲ್ಲಿ ವಿಕ್ರಂ ಮತ್ತು ಸೂರ್ಯ ನಟಿಸಿದ್ದರು.
 
ವಿಕ್ರಂ ನಟನೆಗೆ ರಾಷ್ಟ್ರಪ್ರಶಸ್ತಿಯೂ ಸಂದಿತ್ತು. ಅದನ್ನು ಕನ್ನಡದಲ್ಲಿಯೂ `ಅನಾಥರು~ ಹೆಸರಿನಲ್ಲಿ ರೀಮೇಕ್ ಮಾಡಲಾಗಿತ್ತು. ಇದೀಗ ಸತೀಶ್ ಕೌಶಿಕ್ ಅವರು ಹೃತಿಕ್ ರೋಷನ್ ಮತ್ತು ಸೈಫ್ ಅಲಿ ಖಾನ್ ಪ್ರಧಾನ ಭೂಮಿಕೆಯಲ್ಲಿ ಚಿತ್ರ ರೂಪಿಸಲು ಚಿಂತಿಸಿದ್ದಾರೆ.

ಹೃತಿಕ್ ಮತ್ತು ಸೈಫ್ ಜೊತೆ ಮೊದಲ ಸುತ್ತಿನ ಮಾತುಕತೆ ನಡೆಸಲಾಗಿದೆ. ಸತೀಶ್ ಈ ಮೊದಲು ತಮಿಳಿನ `ಸೇತು~ ಚಿತ್ರವನ್ನು `ತೇರೆ ನಾಮ್~ ಹೆಸರಿನಲ್ಲಿ ಹಿಂದಿಗೆ ತಂದಿದ್ದರು.

ಶಾರುಖ್ ಮೆಚ್ಚಿದ ರಜನಿ

ಶಾರುಖ್ ಖಾನ್ ನಿರ್ಮಿಸಿ, ನಟಿಸಿರುವ ಬಹುನಿರೀಕ್ಷಿತ `ರಾ.ಒನ್~ ಚಿತ್ರದಲ್ಲಿ ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಅವರು ನಟಿಸಿದ ದೃಶ್ಯಗಳನ್ನು ಇತ್ತೀಚೆಗೆ ಮುಂಬೈನ ಸ್ಟುಡಿಯೋವೊಂದರಲ್ಲಿ ಚಿತ್ರೀಕರಿಸಲಾಯಿತು.

ಈ ಸಂದರ್ಭದಲ್ಲಿ ಹಾಜರಿದ್ದ ಶಾರುಖ್ `ಮೂರು ಗಂಟೆ ನಡೆದ ಚಿತ್ರೀಕರಣಕ್ಕೆ ರಜನಿಕಾಂತ್ ನೀಡಿದ ಸಹಕಾರ ಅದ್ಭುತವಾಗಿತ್ತು. ಅವರು ತೆರೆಯ ಮೇಲಷ್ಟೇ ಅಲ್ಲ ತೆರೆಯ ಹಿಂದೆಯೂ ಸೂಪರ್‌ಸ್ಟಾರ್~ ಎಂದು ಹೇಳಿ ಹೊಗಳಿಕೆಯ ಸುರಿಮಳೆ ಸುರಿಸಿದರು.

ಪಾತ್ರದ ಗುಟ್ಟು ಬಿಟ್ಟು ಕೊಡದ ರಜನಿ, ಹಿಂದಿ ಚಿತ್ರದಲ್ಲಿ ಮಿಂಚುವ ತಮ್ಮಾಸೆ ಅಂದು ಈಡೇರಿರಲಿಲ್ಲ. ಇಂದು ಬಾಲಿವುಡ್‌ನ ಸೂಪರ್‌ಸ್ಟಾರ್ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದು ಅಷ್ಟೇ ಸಂತೋಷ ನೀಡಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಪ್ರತೀಕ್ ದೇಹದಂಡನೆ
`ಮೈ ಫ್ರೆಂಡ್ ಪಿಂಟೊ~ ಬಿಡುಗಡೆಗೆ ಮುನ್ನ ಪ್ರತೀಕ್ ಬಬ್ಬರ್ `ಇಶಾಖ್~ ಹೆಸರಿನ ಸಿನಿಮಾ ಒಪ್ಪಿಕೊಂಡಿದ್ದಾನೆ. ಶೇಕ್ಸ್‌ಪಿಯರ್ ಅವರ `ರೋಮಿಯೋ ಜೂಲಿಯಟ್~ ನಾಟಕ ಆಧರಿಸಿ ಶೈಲೇಶ್ ಸಿಂಗ್ ಚಿತ್ರಕತೆ ಸಿದ್ಧಪಡಿಸಿದ್ದಾರೆ.

ಸಂಪೂರ್ಣ ಚಿತ್ರ ವಾರಾಣಾಸಿಯಲ್ಲಿ ಚಿತ್ರೀಕರಣವಾಗಲಿದೆ. ಅದಕ್ಕಾಗಿ ಪ್ರತೀಕ್, ವಾರಾಣಾಸಿ ಶೈಲಿಯಲ್ಲಿ ಹಿಂದಿ ಮಾತನಾಡುವುದನ್ನು ಕಲಿಯುತ್ತಿದ್ದಾನೆ. ಜೊತೆಗೆ ಜಿಮ್‌ನಲ್ಲಿ ದೇಹ ದಂಡಿಸಿ ಮೈಕಟ್ಟು ಕಾಯ್ದುಕೊಳ್ಳುತ್ತಿದ್ದಾನೆ.

ತಾನು ರೋಮಿಯೋ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಅದನ್ನು ಇಂದಿನ ದಿನಮಾನಕ್ಕೆ ತಕ್ಕಂತೆ ನಕ್ಸಲೈಟ್ ವಿಚಾರಗಳನ್ನು ತುರುಕಿ ಕತೆ ಸಿದ್ಧಪಡಿಸಲಾಗಿದೆ ಎಂದು ಹೇಳಿರುವ ಪ್ರತೀಕ್ ಪಾತ್ರದೊಳಗೆ ಸೇರುವ ತವಕದಲ್ಲಿದ್ದಾನೆ. ಚಿತ್ರದ ನಿರ್ದೇಶಕ ಮನೀಶ್ ತಿವಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT