ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಬೊಫಾ'ಗೆ 280 ಬಲಿ

ಫಿಲಿಪ್ಪೀನ್ಸ್: ಭೀಕರ ಚಂಡಮಾರುತ, ನೂರಾರು ಮಂದಿ ನಾಪತ್ತೆ
Last Updated 5 ಡಿಸೆಂಬರ್ 2012, 19:50 IST
ಅಕ್ಷರ ಗಾತ್ರ

ನ್ಯೂ ಬಾತಾನ್, ಫಿಲಿಪ್ಪೀನ್ಸ್ (ಎಎಫ್‌ಪಿ):  ಇಲ್ಲಿನ ದಕ್ಷಿಣ ದ್ವೀಪದಲ್ಲಿ ಮಂಗಳವಾರದಿಂದ ಎದ್ದಿರುವ ಭೀಕರ ಚಂಡಮಾರುತಕ್ಕೆ ಇದುವರೆಗೆ 280 ಜನರು ಬಲಿಯಾಗಿದ್ದು, ನೂರಾರು ಜನರು ಕಾಣೆಯಾಗಿದ್ದಾರೆ.ಬೊಫಾ ಚಂಡಮಾರುತದಿಂದ ಉಂಟಾದ ಪ್ರವಾಹ ಮತ್ತು ಭೂ ಕುಸಿತದಿಂದಾಗಿ ರಕ್ಷಣಾ ತಂಡವು ತೊಂದರೆಗೆ ಒಳಗಾದ ಪ್ರದೇಶಗಳನ್ನು ತಲುಪುವುದು ಕಷ್ಟವಾಗಿದೆ.

ಬಿರುಗಾಳಿಯ ಪರಿಣಾಮದಿಂದ ಉಂಟಾದ ಭೂಕುಸಿತ ಹಾಗೂ ಪ್ರವಾಹದಿಂದಾಗಿ ಮಿಂದನೊ ದ್ವೀಪದಲ್ಲಿ 142 ಜನ ಸತ್ತಿದ್ದು, 241 ಮಂದಿ ನಾಪತ್ತೆಯಾಗಿದ್ದಾರೆ.ದಾವೊ ಓರಿಯಂಟಲ್ ಪ್ರಾಂತ್ಯದಲ್ಲಿ 81 ಜನರು ಮತ್ತು ಇತರ ಪ್ರದೇಶಗಳಲ್ಲಿ 15 ನಾಗರಿಕರು ಸತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಂಟೆಗೆ 210 ಕಿ. ಮೀ. ವೇಗದಲ್ಲಿ  ಗಾಳಿ ಬೀಸಿದ ರಭಸಕ್ಕೆ ನೂರಾರು ಮನೆಗಳು ಮತ್ತು ಮರಗಳು ನೆಲಸಮವಾಗಿವೆ. ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ಒಬ್ಬ ಸೈನಿಕ ಮೃತಪಟ್ಟಿದ್ದು, ಆರು ಯೋಧರು ಕಣ್ಮರೆಯಾಗಿದ್ದಾರೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.

ಚಂಡಮಾರುತದ ರಭಸದಿಂದ ಅನೇಕ ಹಳ್ಳಿಗಳಲ್ಲಿ ಮನೆಗಳಿಗೆ ಭಾರಿ ಪ್ರಮಾಣದ ಹಾನಿ ಉಂಟಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಕೊರಾಜೊನ್ ಸೊಲಿಮನ್ ತಿಳಿಸಿದ್ದಾರೆ. ಕರಾವಳಿ ತೀರದ  ಪಟ್ಟಣದಲ್ಲಿ ಬಹುತೇಕ ಮನೆಗಳು ನೆಲಸಮವಾಗಿ ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ. ತೊಂದರೆಗೆ ಒಳಗಾದ ಪ್ರದೇಶಗಳಿಗೆ  ಔಷಧ, ಆಹಾರ ಮತ್ತು ಇನ್ನಿತರ ಪರಿಹಾರ ಸಾಮಗ್ರಿಗಳನ್ನು ರವಾನಿಸಲಾಗಿದೆ.ಮಂಗಳವಾರ ಮಧ್ಯರಾತ್ರಿಯ ನಂತರ ಚಂಡಮಾರುತವು ದಕ್ಷಿಣ ಚೀನಾ ಸಮುದ್ರದತ್ತ ಸಾಗಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT