ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೋಧನೆಯಲ್ಲಿ ಗಮನಾರ್ಹ ಬದಲಾವಣೆ ಬೇಕು

Last Updated 17 ಮಾರ್ಚ್ 2011, 8:25 IST
ಅಕ್ಷರ ಗಾತ್ರ

ಮಂಡ್ಯ: ಉನ್ನತ ಶಿಕ್ಷಣದತ್ತ ವಿದ್ಯಾರ್ಥಿ ಸಮೂಹದ ಪಾಲ್ಗೊಳ್ಳುವಿಕೆ ಪ್ರಸ್ತುತ ಸವಾಲಿನ ವಿಷಯವಾಗಿದ್ದು, ಇದಕ್ಕೆ ಪೂರಕ ವಾಗಿ ಒಟ್ಟಾರೆ ಬೋಧನಾ ಶೈಲಿಯಲ್ಲಿಯೂ ಗಮನಾರ್ಹ ಬದಲಾವಣೆ ಆಗಬೇಕಿದೆ ಎಂಬ ಅಭಿಪ್ರಾಯ  ಬುಧವಾರ ನಗರದಲ್ಲಿ ನಡೆದ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ವ್ಯಕ್ತವಾಯಿತು.ನಗರದ ಪಿಇಟಿ ಪ್ಲೇಸ್‌ಮೆಂಟ್ ಸಭಾಂಗಣದಲ್ಲಿ ಶಂಕರಗೌಡ ಶಿಕ್ಷಣ ಮಹಾ ವಿದ್ಯಾಲಯ ಯುಜಿಸಿ ಸಹಭಾಗಿತ್ವದಲ್ಲಿ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಮಾತ ನಾಡಿದ ಮಾಜಿ ಶಾಸಕ ಕೆ.ಟಿ.ಶ್ರೀಕಂಠೇಗೌಡ,  ವಿಶ್ರಾಂತ ಪ್ರಾಚಾರ್ಯ ಡಾ. ಎಸ್.ಎನ್. ಪ್ರಸಾದ್ ಈ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿದರು.

‘ಪ್ರತ್ಯುತ್ಪನ್ನ ಮತಿತ್ವ’ ವಿಚಾರ ಸಂಕಿರಣದ ಕಿರು ಹೊತ್ತಿಗೆ ಬಿಡುಗಡೆ ಮಾಡಿದ ಮಾಜಿ ಶಾಸಕ ಕೆ.ಟಿ.ಶ್ರೀಕಂಠೇಗೌಡ ಅವರು, ಪ್ರಾಥ ಮಿಕ ಮತ್ತು ಪ್ರೌಢಶಿಕ್ಷಣಕ್ಕೆ ನೀಡುವಷ್ಟೇ ಆದ್ಯತೆಯನ್ನು ಇಂದು ಉನ್ನತ ಶಿಕ್ಷಣಕ್ಕೆ ನೀಡುತ್ತಿಲ್ಲ. ಬೋಧಕರನ್ನು ಪರಿಣಾಮಕಾರಿ ಯಾಗಿ ಸಜ್ಜುಗೊಳಿಸುವ ಕೆಲಸ ಆಗುತ್ತಿಲ್ಲ ಎಂದರು.ಒಂದು ಹಂತದಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಕಡೆಗಣಿಸಲಾಗಿತ್ತು.ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ (ನ್ಯಾಕ್) ಪರಿಶೀಲನೆ ಆರಂಭವಾದ ಬಳಿಕ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಸುಧಾರಿಸಿದ್ದರೂ, ವಿದ್ಯಾರ್ಥಿಗಳನ್ನು ಆಕರ್ಷಿಸುವ ಸವಾಲು ಉಳಿದುಕೊಂಡಿದೆ ಎಂದರು.

ಉನ್ನತ ಶಿಕ್ಷಣದ ಆಕರ್ಷಣೆ ಹೆಚ್ಚಿಸಲು ಬೋಧನಾ ಮಟ್ಟ ಉತ್ತಮ ಪಡಿಸುವುದು, ಹೊಸ ಕಾರ್ಯ ತಂತ್ರಗಳ ಅಳವಡಿಕೆ ಸೇರಿದಂತೆ ದೊಡ್ಡ ಪ್ರಮಾಣದ ಕಸರತ್ತು ಅನಿವಾರ್ಯ ವಾಗಿದೆ ಎಂದು ಅಭಿಪ್ರಾಯಪಟ್ಟರು.ದೂರ ಶಿಕ್ಷಣ ಕೂಡಾ ಈಗ ಹೆಚ್ಚಿನ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿರುವ ಕಾರಣ ಉನ್ನತ ಶಿಕ್ಷಣದ ತರಗತಿಗಳಲ್ಲಿ ಕೇವಲ ಬೋಧನಾ ಶೈಲಿಗೆ ಸಿಮಿತಗೊಂಡರೆ ಪ್ರಯೋ ಜನವಿಲ್ಲ. ಪ್ರಾತ್ಯಕ್ಷಿಕೆ ಸೇರಿದಂತೆ ನವೀನ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ವಿಶ್ರಾಂತ ಪ್ರಾಚಾರ್ಯ ಡಾ. ಎಸ್.ಎನ್. ಪ್ರಸಾದ್ ಅವರು, ಉನ್ನತ ಶಿಕ್ಷಣದಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳುವಂತೆ ಮಾಡು ವುದು ಈಗಿನ ಪ್ರಾಥಮಿಕ ಕಾಳಜಿಯೇ ಆಗಿದೆ. ಈಗಿನ ಬೋಧನಾ ಕ್ರಮ ನಿರೀಕ್ಷೆ ಮತ್ತು ಅಗತ್ಯಗಳಿಗಿಂತ ತುಂಬಾ ದೂರವೇ ಉಳಿದಿದೆ ಎಂದರು.

ಮುಖ್ಯ ಅತಿಥಿಯಾಗಿದ್ದ ಜಿಲ್ಲಾಧಿಕಾರಿ ಡಾ. ಪಿ.ಸಿ.ಜಾಫರ್ ಅವರು, ಉನ್ನತ ಶಿಕ್ಷಣದಲ್ಲಿ ಬೋಧನಾ ಶೈಲಿಯಲ್ಲಿಯೇ ಆಮೂಲಾಗ್ರ ಬದಾವಣೆ ಆಗಬೇಕಾಗಿದೆ. ಪಠ್ಯ ಬೋಧನೆ, ನೋಟ್ಸ್ ನೀಡುವುದಕ್ಕೇ ಬೋಧನೆ ಸೀಮಿತ ವಾಗಿದೆ ಎಂದು ಅಭಿಪ್ರಾಯ ಪಟ್ಟರು.ಇಂದು ವಿದ್ಯಾರ್ಥಿಗಳ ಚಿಂತನಾ ಶೈಲಿ ಬದಲಾಗಿದೆ. ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ ಯಷ್ಟೇ ಪ್ರಾಮುಖ್ಯತೆಯನ್ನು ಬೋಧಕರ ಪಾಲ್ಗೊಳ್ಳು ವಿಕೆಗೂ ನೀಡ ಬೇಕಾಗಿದೆ. ಬಹುತೇಕ ಬೋಧಕರು ಹಿಂದಿನ ವರ್ಷ ನೀಡಿದ್ದ ನೋಟ್ಸ್ ನೀಡುವುದು, ಬೋಧನೆಗೆ ಹೊರತಾಗಿ ಅಪ್‌ಡೇಟ್ ಆಗುವುದಿಲ್ಲ ಎಂದರು.

ಶಾಸಕ ಸಿ.ಎಸ್.ಪುಟ್ಟರಾಜು ಉದ್ಘಾ ಟಿಸಿದರು. ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಂ.ಆರ್. ಜಯಪ್ರಕಾಶ್,  ಪಿಇಟಿ ಅಧ್ಯಕ್ಷ ಎಚ್.ಡಿ.ಚೌಡಯ್ಯ, ಸಂಚಾಲಕರಾದ ಪ್ರೊ. ಕೆ.ಎಸ್.ಚಂದ್ರು, ಎಸ್.ಬಿ.ಶಂಕರೇಗೌಡ ಅವರು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT