ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೋರ್‌ವೆಲ್ ಕೊರೆತಕ್ಕೆ ಪಾಳುಬಿದ್ದ ಬಾವಿಗಳು

Last Updated 30 ಅಕ್ಟೋಬರ್ 2011, 10:25 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ನದಿನಾಲೆ ಇಲ್ಲದ ಕಾರಣ ಮತ್ತು ಶಾಶ್ವತ ನೀರಾವರಿ ಯೋಜನೆ ಇನ್ನೂ ಅನುಷ್ಠಾನವಾಗದ ಹಿನ್ನೆಲೆಯಲ್ಲಿ ಬಹು ತೇಕ ಮಂದಿ ಕೊಳವೆಬಾವಿಗಳಿಗೆ ಮೊರೆ ಹೋಗುತ್ತಿದ್ದು, ಪುರಾತನ ಕಾಲದ ಕಲ್ಲು ಕಟ್ಟಡದ ಬಾವಿಗಳು ಪಾಳು ಬಿದ್ದಿವೆ.

ಕೆಲವು ನಿರ್ಲಕ್ಷ್ಯಕ್ಕೆ ಒಳ ಗಾಗಿದ್ದರೆ, ಇನ್ನೂ ಕೆಲವೊಂದನ್ನು ಕೊಳವೆಬಾವಿಯ ನೀರು ಹರಿಸುವ ಮೂಲಕ ರೈತರು ಜೀವಂತವಿಟ್ಟಿದ್ದಾರೆ. ಶಿಡ್ಲಘಟ್ಟ ತಾಲ್ಲೂಕಿನ ಈ.ತಿಮ್ಮಸಂದ್ರ, ಹಳೇಹಳ್ಳಿ ಸುತ್ತಮುತ್ತಲ ಗ್ರಾಮಗಳಲ್ಲಿ ಕಲ್ಲುಕಟ್ಟಡದ ಬಾವಿಗಳು ಕಾಣಸಿಗುತ್ತವೆ.

ಸುಮಾರು ನಲವತ್ತು ವರ್ಷಗಳಿಂದ ಜಿಲ್ಲೆಯಲ್ಲಿ ಬಾವಿ ತೆಗೆಯುವುದನ್ನು ಜನರು ನಿಲ್ಲಿಸಿದ್ದಾರೆ. ಮೊದಲು ಬೇಸಿಗೆ ಆರಂಭವಾದರೆ ಸಾಕು, ಸಾಮಾನ್ಯ ವಾಗಿ ಪ್ರತಿಯೊಂದು ಹಳ್ಳಿಯಲ್ಲಿಯೂ ಬಾವಿ ತೆಗೆಯುವ ಕೆಲಸ ಪ್ರಾರಂಭ ವಾಗುತ್ತಿತ್ತು. ಇದರಿಂದ ಸುಮಾರು ಹತ್ತು ಹದಿನೈದು ಜನ ಗಂಡಸರು, ಇಪ್ಪತ್ತು ಇಪ್ಪತ್ತೈದು ಜನ ಹೆಂಗಸರಿಗೆ ಕೂಲಿ ದೊರೆಯುತ್ತಿತ್ತು. ಬೋರ್‌ವೆಲ್ ಹಾಕುವ ಯಂತ್ರಗಳು ಯಾವಾಗ ಬಂದವೋ, ಆಗ ಕ್ರಮೇಣ ಬಾವಿ ತೆಗೆಯುವುದು ಕಡಿಮೆಯಾಗತೊಡ ಗಿತು ಎಂದು ಗ್ರಾಮಸ್ಥರು ಹೇಳುತ್ತಾರೆ.

ನೀರಾವರಿ ಉದ್ದೇಶದಿಂದ ಬಾವಿ ಗಳನ್ನು ನಿರ್ಮಿಸಿದರೂ ಸುಂದರವಾದ ಕಲ್ಲು ಕಟ್ಟಡದಿಂದ ಸುಭದ್ರಗೊಳಿಸ ಲಾಗುತಿತ್ತು. ಕಟ್ಟಡ ಕಟ್ಟುವುದು, ಕಲ್ಲುಗಳನ್ನು ಜೋಡಿಸುವುದು, ಮೆಟ್ಟಿ ಲುಗಳನ್ನು ಸಿದ್ಧಪಡಿಸುವುದು ಒಂದ ರ್ಥದಲ್ಲಿ ವಿಶೇಷವಾದ ಕಲೆ ಆಗಿತ್ತು. ಹೊಲಗಳಲ್ಲಿ, ತೋಟಗಳಲ್ಲಿ ಕೆಲಸ ಮಾಡುವ ಕೃಷಿಕರು, ಕೂಲಿ ಕಾರ್ಮಿಕರು ಬಾವಿಯಲ್ಲಿಳಿದು ಕೈಕಾಲು ಮುಖ ತೊಳೆದುಕೊಳ್ಳುತ್ತಿದ್ದರು. ಬೇಸಿಗೆ ರಜೆಯಲ್ಲಂತೂ ಮಕ್ಕಳು ಬಾವಿ ಯೊಳಗೆ ದುಮುಕಿ ಆಟವಾಡುತ್ತಿದ್ದರು. ಈಜು ಕಲಿಯುತ್ತಿದ್ದರು. ಬಾವಿಯ ಪಕ್ಕದಲ್ಲೇ ತೊಟ್ಟಿಯೊಂದನ್ನು ನಿರ್ಮಿಸಿ, ದನಕರುಗಳಿಗಾಗಿ ನೀರು ಹರಿಸಲಾಗುತಿತ್ತು.

`ಬೋರುವೆಲ್‌ಗಳಿಗೆ ಮೊದಲು ಚಾಲನೆ ನೀಡಿದವರು ಹಣವಂತರು. ಬಳಿಕ ಸಾಮಾನ್ಯರೂ ಸಹ ಸಾಲ ಮಾಡಿ ಕೊಂಡು ಬೋರ್‌ವೆಲ್ ತೆಗೆಸತೊಡ ಗಿದರು. ಮೇಲೂರು ಮತ್ತು ಮಳ್ಳೂರು ಗ್ರಾಮಗಳಲ್ಲಿ ಅತಿ ಹೆಚ್ಚು ಬೋರ್‌ವೆಲ್‌ಗಳನ್ನು ಕಂಡು ಬಂದವು. ಅರ್ಧ ಎಕರೆ ಜಮೀನು ಹೊಂದಿರು ವವರು ಸಹ ಬೋರು ತೆಗೆಸಿ, ಮೋಟಾರು ಬಿಗಿಸಿ, ಆಳದ ನೀರನ್ನು ಬಳಸತೊಡಗಿದರು. ಕ್ರಮೇಣ ಬಾವಿ ಗಳಲ್ಲಿ ನೀರು ಕಡಿಮೆಯಾಗ ತೊಡ ಗಿತು~ ಎಂಧು ಶಾಸನತಜ್ಞ ಡಾ. ಶೇಷ ಶಾಸ್ತ್ರಿ `ಪ್ರಜಾವಾಣಿ~ಗೆ ತಿಳಿಸಿದರು.

 `ನಮ್ಮಲ್ಲಿ ಬಾವಿಗಳ ಮೂಲಕ ತೋಟಗಾರಿಕೆಯನ್ನು ಆರಂಭಿಸಿದಾಗ, ನೀರನ್ನು ಮೇಲೆ ಎತ್ತಲು ಏತ ಬಳಸು ತ್ತಿದ್ದೆವು.  ಕಪಿಲೆ, ಗೂಡೆ ಹಾಕುವುದು ಮಾಡುತ್ತಿದ್ದೆವು. ಆನಂತರ ಪರ್ಷಿ ಯನ್ ವೀಲ್ ಯಂತ್ರ ಬಂತು. ಪಂಪ್‌ಸೆಟ್‌ಗಳಿಗೆ ಹೋಲಿಸಿದರೆ ಈ ಎಲ್ಲಾ ಯಂತ್ರಗಳ ಮೂಲಕ ಮೇಲೆ ಬರುವ ನೀರಿನ ಪ್ರಮಾಣ ಕಡಿಮೆಯಾದರೂ ನೀರು ಪೋಲಾಗದೆ ಉಪಯೋಗ ವಾಗುತ್ತಿತ್ತು.  ಬೋರುಗಳು ಬಂದ ಮೇಲೆ ಸಬ್‌ಮರ್ಸಿಬಲ್ ಪಂಪು ಗಳಿಂದ ಭೂತಾಯಿಯ ನಾಳನಾಳ ಗಳಲ್ಲಿಯ ನೀರನ್ನು ಹೀರಿ ಹಿಪ್ಪೆ ಮಾಡ ಲಾಗಿದೆ.

ಜನ ಇದಕ್ಕಾಗಿ ವಿದ್ಯುತ್ ನಂಬಿದರು. ಅದು ಕೈಕೊಟ್ಟಾಗ ಒದ್ದಾ ಡಿದರು. ಕುಡಿಯಲು ಬೋರವೆಲ್ ನೀರನ್ನೇ ಆಶ್ರಯಿಸಿ ಫ್ಲೋರೈಡ್ ಮಿಶ್ರಿತ ನೀರನ್ನೇ ಕುಡಿದು ಅನಾರೋಗ್ಯ ಕ್ಕೀಡಾ ಗುವ ಸ್ಥಿತಿ ನಿರ್ಮಾಣವಾಗಿದೆ~ ಎಂದು ಅವರು ತಿಳಿಸಿದರು.

`ಹಳೇಹಳ್ಳಿಯ ಹೊರವಲಯದಲ್ಲಿ ರುವ ಕಲ್ಲುಕಟ್ಟಡದ ಬಾವಿ ಸುಮಾರು 60 ವರ್ಷಗಳ ಹಿಂದೆ ನಮ್ಮೂರಿನ ಕುಡಿಯುವ ನೀರಿನ ಅಗತ್ಯತೆಯನ್ನು ಪೂರೈಸುತ್ತಿತ್ತು. ಈ ಬಾವಿಯ ನೀರನ್ನು ಯಾರೂ ಸಹ ಇತರೆ ಬಳಕೆಗೆ ಬಳಸ ದಂತೆ ನಿರ್ಬಂಧ ಸಹ ವಿಧಿಸಲಾಗಿತ್ತು. ಕಾಲಕ್ರಮೇಣ ಅಂತರ್ಜಲ ಕುಸಿದು ಬಾವಿಯಲ್ಲಿ ನೀರು ಕಡಿಮೆಯಾಯಿತು. ಅದೇ ಕಾಲಕ್ಕೆ ಒತ್ತುವ ಬೋರ್‌ವೆಲ್ ಬಂತು. ಅದರಿಂದ ಈ ಬಾವಿಯನ್ನು ಕಡೆಗಣಿಸಲಾಯಿತು. ನಂತರ ಕೈ ಪಂಪು ಗಳೂ ಸಹ ನೀರನ್ನು ಕೊಡಲಿಲ್ಲ. ಈಗ ಕೊಳವೆ ಬಾವಿಗಳ ನೀರಿಗೆ ಶರಣಾ ಗಿದ್ದೇವೆ.

ಈ ನೀರಿನಲ್ಲಿ ಫ್ಲೋರೈಡ್ ಅಂಶವಿದೆ. ಈ ನೀರನ್ನು ಪಾತ್ರೆಯಲ್ಲಿ ಸ್ವಲ್ಪ ಹೊತ್ತು ಇಟ್ಟರೆ ತಳದಲ್ಲಿ ಉಪ್ಪಿನ ರೀತಿಯ ಶೇಖರಣೆ ಕಂಡು ಬರುತ್ತದೆ. ಹಲವರಿಗೆ ಈಗಾಗಲೇ ಮೂಳೆ ನೋವು ಕಾಣಿಸಿಕೊಂಡಿದೆ. ಹಲ್ಲುಗಳೂ ಸವೆಯುವ ಲಕ್ಷಣಗಳು ಕಾಣುತ್ತಿವೆ. ಗ್ರಾಮ ಪಂಚಾಯಿತಿ ಯವರಿಗೆ ಹಲವು ಬಾರಿ ತಿಳಿಸಿದರೂ ಉತ್ತಮ ಮತ್ತು ಶುದ್ಧ ನೀರು ಪೂರೈಸಲು ಕ್ರಮ ಕೈಗೊಳ್ಳುತ್ತಿಲ್ಲ~ ಎಂದು ಹಳೇಹಳ್ಳಿಯ ಚೌಡರೆಡ್ಡಿ ತಿಳಿಸಿದರು.
-ಡಿ.ಜಿ.ಮಲ್ಲಿಕಾರ್ಜುನ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT