ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೋಸ್ ಸ್ಫೂರ್ತಿಯ ಸಂಕೇತ

Last Updated 24 ಜನವರಿ 2012, 5:05 IST
ಅಕ್ಷರ ಗಾತ್ರ

ರಾಯಚೂರು:  ಎಂದು ಎಐಎಂಎಸ್‌ಎಸ್ ಸಂಘಟನೆ ರಾಜ್ಯ ಕಾರ್ಯದರ್ಶಿ ಅಪರ್ಣಾ ಬಿ.ಆರ್ ಹೇಳಿದರು.
ಇಲ್ಲಿ ಸೋಮವಾರ ಎಐಡಿಎಸ್‌ಓ, ಎಐಡಿವೈಓ ಹಾಗೂ ಎಐಎಂಎಸ್‌ಎಸ್ ಸಂಘಟನೆ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ನೇತಾಜಿ ಸುಭಾಷಚಂದ್ರ ಬೋಸ್ ಅವರ 115ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಸಿನಿಮಾ ನಟರು, ಕ್ರೀಡಾಪಟುಗಳೇ ಸದ್ಯದ ಸ್ಥಿತಿಯಲ್ಲಿ ಈ ದೇಶದ ಯುವಕರಿಗೆ ಸ್ಪೂರ್ತಿ. ಮಾದರಿ ಎಂಬುವ ರೀತಿ ಬಿಂಬಿಸಲಾಗುತ್ತಿದೆ. ಈ ದೇಶದ ಇತಿಹಾಸದ ಪುಟ, ಹೋರಾಟಗಾರರ, ಕ್ರಾಂತಿಕಾರರ, ಸಮಾಜ ಸುಧಾರಕರ ನಿಸ್ವಾರ್ಥ ಸೇವೆ ಅರಿಯುವ ಪ್ರಯತ್ನ ಯುವ ಸಮುದಾಯದಿಂದ ಆಗಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಐಸಿಎಸ್ ಅಧಿಕಾರಿಯಾಗಿದ್ದ ನೇತಾಜಿ ಬೋಸ್ ಬ್ರಿಟಿಷರ ಗುಲಾಮ ಅಧಿಕಾರಿಯಾಗದೇ ಹೋರಾಟಕ್ಕೆ ಧುಮುಕಿದರು. ಅವರಿಗೆ ಸಿಂಹ ಸ್ವಪ್ನವಾಗಿದ್ದರು. ಮಹಾತ್ಮಾ ಗಾಂಧೀಜಿ ಅವರೊಂದಿಗೆ ವೈಚಾರಿಕ ಭಿನ್ನಾಭಿಪ್ರಾಯ ಹೊಂದಿದ್ದರು. ರಾಜೀರಹಿತ ಹೋರಾಟ ಒಂದೇ  ಪರಿಹಾರ ಎಂದು ನಂಬಿ ಹೋರಾಟ ನಡೆಸಿದ್ದರು ಎಂದು ಹೇಳಿದರು.

ಬ್ರಿಟಿಷರು ಈ ದೇಶ ಬಿಟ್ಟು ಹೋದರಷ್ಟೇ ಸ್ವಾತಂತ್ರ್ಯಗೊಂಡು ಈ ದೇಶ ಅಭಿವೃದ್ಧಿ ಹೊಂದುತ್ತದೆ ಎಂಬ ನಂಬಿಕೆ ಅವರಿಗೆ ಇರಲಿಲ್ಲ. ಶಿಕ್ಷಣ, ಆರೋಗ್ಯ, ಮೂಲಭೂತ ಸೌಕರ್ಯ, ಕೈಗಾರಿಕೆ, ತಾಂತ್ರಿಕ ಕ್ಷೇತ್ರದಲ್ಲಿ ಏಳ್ಗೆ ಹೊಂದುವ ಹಂಬಲವನ್ನು ಹೊಂದಿದ್ದರು ಎಂದು ನುಡಿದರು.

ಅಂಥ ಮಹಾನ್ ಚೇತನದ ಕನಸು ನನಸನ್ನು ಈ ದೇಶದ ಯುವ ಸಮುದಾಯ ಮಾಡಬೇಕಿದೆ ಎಂದು ಹೇಳಿದರು.

ಅಧ್ಯಕ್ಷತೆಯನ್ನು ಎಐಡಿಎಸ್‌ಓ ಜಿಲ್ಲಾಧ್ಯಕ್ಷ ಮಹೇಶ ಸಿ ವಹಿಸಿದ್ದರು. ಎಆಯ್‌ಡಿವಾಯ್‌ಓ ಜಿಲ್ಲಾ ಕಾರ್ಯದರ್ಶಿ ಚನ್ನಬಸವ ಜಾನೇಕಲ್ ಪ್ರಾಸ್ತಾವಿಕ ಮಾತನಾಡಿದರು. ಎಆಯ್‌ಎಂಎಸ್‌ಎಸ್ ಜಿಲ್ಲಾ ಘಟಕದ ಅಧ್ಯಕ್ಷೆ ಚೇತನಾ ಬನಾರೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT