ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೌದ್ಧ ದೇಗುಲಗಳಿಗೆ ಭದ್ರತೆ

Last Updated 8 ಜುಲೈ 2013, 19:59 IST
ಅಕ್ಷರ ಗಾತ್ರ

ಕಠ್ಮಂಡು (ಐಎಎನ್‌ಎಸ್): ಭಾರತದ ಬೋಧಗಯಾ ದೇವಾಲಯದ ಮೇಲೆ ನಡೆದ ಬಾಂಬ್ ದಾಳಿ ಹಿನ್ನೆಲೆಯಲ್ಲಿ ನೇಪಾಳದ ಪ್ರಸಿದ್ಧ ಬೌದ್ಧ ದೇವಾಲಯಗಳಿಗೆ ಹೆಚ್ಚಿನ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ.

ಭಗವಾನ್ ಬುದ್ಧನ ಜನ್ಮಸ್ಥಳ ಲುಂಬಿನಿ ಮತ್ತು ಕಪಿಲ್‌ವಾಸ್ತು ಸ್ಥಳಗಳಲ್ಲೂ ನೇಪಾಳ ಸರ್ಕಾರ ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚಿನ ಭದ್ರತೆ ಕಲ್ಪಿಸಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಪ್ರಮುಖ ಬೌದ್ಧ ಯಾತ್ರಾ ಸ್ಥಳಗಳಾದ ಲುಂಬಿನಿ, ಬೌದ್ಧ (ಬೋಧನಾಥ್) ಮತ್ತು ಸೈಂಭೂ (ಸ್ವಯಂಭೂನಾಥ್) ನಲ್ಲಿ ಹೆಚ್ಚಿನ ಭದ್ರತೆ ಕಲ್ಪಿಸಲು ನಿರ್ಧರಿಸಲಾಗಿದೆ ಎಂದು ನೇಪಾಳ ಪೊಲೀಸ್ ವಕ್ತಾರ ನವ್‌ರಾಜ್ ಸಿಲ್ವಲ್ ಸುದ್ದಿಸಂಸ್ಥೆಗೆ ಮಾಹಿತಿ ನೀಡಿದ್ದಾರೆ.

ಸ್ಫೋಟ: ಶ್ರೀಲಂಕಾ ಖಂಡನೆ

ಕೊಲಂಬೊ(ಪಿಟಿಐ):  ಬಿಹಾರದ ಮಹಾಬೋಧಿ ದೇವಾಲಯದ ಮೇಲಿನ ದಾಳಿಯನ್ನು ಶ್ರೀಲಂಕಾ ಅಧ್ಯಕ್ಷ ಮಹೀಂದ್ರಾ ರಾಜಪಕ್ಸೆ ಖಂಡಿಸಿದ್ದಾರೆ.
`ಬಿಹಾರದ ಬೋಧ ಗಯಾದಂತಹ ಪವಿತ್ರ ಧಾರ್ಮಿಕ ಸ್ಥಳದಲ್ಲಿ  ಬಾಂಬ್‌ಸ್ಫೋಟಿಸಿ ಅಲ್ಲಿನ ಪರಿಸರವನ್ನು ಹಾಳುಗೆಡುವಿರುವುದು ಬಹಳ   ದುಃಖ ಉಂಟುಮಾಡಿದೆ.

ಕೆಲವು ವರ್ಷಗಳ ಹಿಂದೆ ಇದೇ ರೀತಿಯಲ್ಲಿ ಉಗ್ರರು ಶ್ರೀಲಂಕಾದ ಮಹಾಬೋಧಿ ದೇವಾಲಯದ ಮೇಲೆ ದಾಳಿ ಮಾಡಿದ್ದರು. ಇವೆರಡು ದುರಂತಗಳು ಒಂದೇ ರೀತಿಯದ್ದಾಗಿವೆ ಆದ್ದರಿಂದ ಇದನ್ನು ಕಟುವಾಗಿ ಖಂಡಿಸುತ್ತೇನೆ' ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.`ದುರಂತಕ್ಕೆ ಒಳಗಾಗಿರುವ ಭಾರತಕ್ಕೆ ಮತ್ತು ಅಲ್ಲಿನ ಜನತೆಗೆ ಶ್ರೀಲಂಕಾ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ. ದೇಶದ ಬೌದ್ಧ ದೇಗುಲಗಳಿಗೆ ಭದ್ರತೆ ಒದಗಿಸಲಾಗಿದೆ' ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT