ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕಾಕ್ ಚೆಸ್ ಟೂರ್ನಿಗೆ ಎಂ.ಎಸ್. ತೇಜಕುಮಾರ್

Last Updated 12 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಮೈಸೂರು: ಇಂಟರ್‌ನ್ಯಾಷನಲ್ ಮಾಸ್ಟರ್  ಎಂ.ಎಸ್. ತೇಜಕುಮಾರ್ ಅವರು ಏಪ್ರಿಲ್ 14ರಿಂದ 21ರವರೆಗೆ ಪಟ್ಟಾಯಾದಲ್ಲಿ ಬ್ಯಾಂಕಾಕ್ ಚೆಸ್ ಕ್ಲಬ್ ಮುಕ್ತ ಚೆಸ್ ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆ.

ಮೈಸೂರಿನ ನೈಋತ್ಯ ರೈಲ್ವೆ ಉದ್ಯೋಗಿಯಾಗಿರುವ ತೇಜಕುಮಾರ್ ಫಿಡೆ ರೇಟಿಂಗ್‌ನಲ್ಲಿ 2407 ಗಳಿಸಿದ್ದಾರೆ. ಈ ಟೂರ್ನಿಯಲ್ಲಿ ವಿಶ್ವದ 221 ಆಟಗಾರರು ಭಾಗವಹಿಸಲಿದ್ದಾರೆ. ಭಾರತದ ಗ್ರ್ಯಾಂಡ್ ಮಾಸ್ಟರ್ ಎಂ.ಆರ್. ವೆಂಕಟೇಶ್, ಶ್ರೀರಾಮ ಝಾ, ಇಂಟರ್‌ನ್ಯಾಷನಲ್ ಮಾಸ್ಟರ್ ಅಕ್ಷತ್ ಕಂಪಾರಿಯಾ, ಟಿ. ಪುರುಷೋತ್ತಮನ್, ರಿಶಿ ಸಾರ್ದನ್, ಭಕ್ತಿ ಕುಲಕರ್ಣಿ, ಇಮೋಚಾ ಲೈಶ್ರಮ್, ಪ್ರಣವ್ ವಿಜಯ್ ಮತ್ತು ಅಭಿಮನ್ಯು ಪುರಾಣಿಕ್ ಕೂಡ ಈ ಟೂರ್ನಿಯಲ್ಲಿ ಭಾಗವಹಿಸುವರು.

ಈ ಟೂರ್ನಿಯಲ್ಲಿ ಭಾಗವಹಿಸಲು ತೇಜಕುಮಾರ್‌ಗೆ ಅಮೆರಿಕದಲ್ಲಿರುವ ಮೆಸರ್ಸ್ ಸಾನ್ವಿ ಟೆಕ್ನಾಲಜೀಸ್ ಮತ್ತು ಮೈಸೂರು ಸ್ಪೋರ್ಟ್ಸ್ ಡಾಟ್‌ಕಾಮ್ ಪ್ರಾಯೋಜಕತ್ವ ನೀಡಿವೆ.

26ರಿಂದ ಟೆನಿಸ್ ಟೂರ್ನಿ
ಮೈಸೂರು: ಇಲ್ಲಿಯ ಮೈಸೂರು ಟೆನಿಸ್ ಕ್ಲಬ್‌ನಲ್ಲಿ ಇನ್ನರ್‌ವ್ಹೀಲ್ ಕ್ಲಬ್ ಆಶ್ರಯದಲ್ಲಿ ಏಪ್ರಿಲ್ 26ರಿಂದ ಮೇ 3ರವರೆಗೆ 16 ವರ್ಷದೊಳಗಿನವರ ರಾಷ್ಟ್ರಮಟ್ಟದ ಟ್ಯಾಲೆಂಟ್ ಸಿರೀಸ್ ಟೆನಿಸ್ ಟೂರ್ನಿ ನಡೆಯಲಿದೆ. ವಿವರಗಳಿಗೆ (ಮೊ. 9980628302) ಸಂಘಟಕರನ್ನು ಸಂಪರ್ಕಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT