ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕಾಕ್‌ನಲ್ಲಿ `ವಿಶ್ವರೂಪಂ 2'

Last Updated 3 ಜೂನ್ 2013, 19:59 IST
ಅಕ್ಷರ ಗಾತ್ರ

`ವಿಶ್ವರೂಪಂ' ಸಿನಿಮಾ ಬಿಡುಗಡೆಗೂ ಮುನ್ನವೇ ಸಾಕಷ್ಟು ವಿವಾದ ಸೃಷ್ಟಿಸಿತ್ತು. ಬಿಡುಗಡೆಯಾದ ನಂತರವೂ ಅದೇ ಕಾವನ್ನು ಉಳಿಸಿಕೊಂಡಿತ್ತು. `ವಿಶ್ವರೂಪಂ' ಚಿತ್ರ ಹೇಳಿಕೊಳ್ಳುವಷ್ಟು ಹಿಟ್ ಎನಿಸಿಕೊಳ್ಳದಿದ್ದರೂ ನಟ ಕಮಲ್ ಹಾಸನ್ ಈಗ `ವಿಶ್ವರೂಪಂ 2' ಚಿತ್ರ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಮೂಲಕ ಮತ್ತೊಂದು ಸಾಹಸಕ್ಕೆ ಅಣಿಯಾಗಿದ್ದಾರೆ.

ಕಮಲ್ ಅಭಿನಯದ `ವಿಶ್ವರೂಪಂ 2' ಈಗ ಬ್ಯಾಂಕಾಕ್‌ನ ವಾಯುನೆಲೆಯಲ್ಲಿ ಬೀಡುಬಿಟ್ಟಿದೆ. ಚಿತ್ರದಲ್ಲಿನ ಕೆಲವು ಸಾಹಸ ದೃಶ್ಯಗಳನ್ನು ಅಲ್ಲಿಯೇ ಚಿತ್ರೀಕರಿಸುವುದು ಚಿತ್ರತಂಡದ ಉದ್ದೇಶ ಎಂದು ಚಿತ್ರದ ಬಗ್ಗೆ ತುಸು ಗುಟ್ಟು ಬಿಟ್ಟುಕೊಟ್ಟಿದ್ದಾರೆ ನಟ ನಿರ್ಮಾಪಕ ಶೇಖರ್ ಕಪೂರ್.

“ಚಿತ್ರೀಕರಣದ ಸಲುವಾಗಿ `ವಿಶ್ವರೂಪಂ 2' ಚಿತ್ರತಂಡ ಈಗ ಥಾಯ್ಲೆಂಡ್‌ನಲ್ಲಿ ಬೀಡುಬಿಟ್ಟಿದೆ. ಛಾಯಾಗ್ರಾಹಕರ ಕ್ಯಾಮೆರಾಗಳು ಈಗ ಚಿತ್ರದ ಸಾಹಸ ದೃಶ್ಯಗಳನ್ನು ಸೆರೆಹಿಡಿಯುವುದರಲ್ಲಿ ಬ್ಯುಸಿಯಾಗಿವೆ' ಎಂದು ಅವರು ಟ್ವೀಟ್ ಮಾಡಿದ್ದಾರೆ. ಜತೆಗೆ ಚಿತ್ರೀಕರಣ ನಡೆಸುತ್ತಿರುವ ದೃಶ್ಯದ ಒಂದು ಛಾಯಾಚಿತ್ರವನ್ನು ಅವರು ಅಪ್‌ಲೋಡ್ ಮಾಡಿದ್ದಾರೆ.

ಅಂದಹಾಗೆ, ಕಮಲ್ ಅಭಿನಯಿಸಿ ನಿರ್ಮಿಸುತ್ತಿರುವ `ವಿಶ್ವರೂಪಂ 2' ಚಿತ್ರ ದ್ವಿಭಾಷೆಯಲ್ಲಿ ತಯಾರಾಗುತ್ತಿದೆ. ಚಿತ್ರದ ಬಜೆಟ್ 95 ಕೋಟಿ ರೂಪಾಯಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT