ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕಿನಲ್ಲಿ ಅವಮಾನ...

Last Updated 17 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಸಂಗತ (ಪ್ರ. ವಾ. ಡಿ. 12) ದಲ್ಲಿ ಡಿ. ಎನ್‌. ಶ್ರೀನಾಥ್‌ ಅವರು ಬರೆದ ಅನುಭವ ಓದಿದಾಗ ನನಗೂ ಒಂದು ಕಹಿ ಅನುಭವದ ನೆನಪು ಬಂತು.

ನಾನಿನ್ನೂ ಆಗ ವಿದ್ಯಾರ್ಥಿ, ಮನೆಯಲ್ಲಿ ಹಣ ತರಲು ರಾಷ್ಟ್ರೀಕೃತ ಬ್ಯಾಂಕೊಂದಕ್ಕೆ  ಕಳುಹಿಸಿದ್ದರು. ಟೋಕನ್‌ ತೆಗೆದುಕೊಂಡು ಸರತಿ ಸಾಲಿನಲ್ಲಿ ನಿಂತಿದ್ದೆ.

ನನ್ನ ಸರತಿ ಬಂದಾಗ  ಕ್ಯಾಷಿಯರ್‌ಗೆ ಟೋಕನ್‌ ಕೊಟ್ಟೆ. ಅಷ್ಟರಲ್ಲಿ ಇನ್ನೊಬ್ಬ ಮಹಿಳಾ ಸಿಬ್ಬಂದಿ ಕ್ಯಾಷಿಯರ್‌ ಹಿಂದಿನಿಂದ ಬಂದು ಎಷ್ಟು ಹಣ ಎಂದು ಕೇಳಿ, ಹಣವನ್ನು ಎಣಿಸಿ ನನ್ನತ್ತ ಎಸೆದಳು. ಅವಮಾನವಾದರೂ ಪ್ರತಿಭಟಿಸುವ ಧೈರ್ಯವಿಲ್ಲದೆ ಬಂದು ಬಿಟ್ಟೆ. ಇದಾಗಿ 19 ವರ್ಷ ಕಳೆದಿದೆ.

ಈ ಘಟನೆ ನೆನಪಾದಾಗಲೆಲ್ಲಾ ನೋವಾಗುತ್ತದೆ. ಇಂತಹ ದುರಹಂಕಾರದ, ದರ್ಪದ ಸಿಬ್ಬಂದಿಗೆ ಖಂಡಿತಾ ಶಿಕ್ಷೆಯಾಗಬೇಕು. ಆದರೆ ಶಿಕ್ಷಿಸುವವರು ಯಾರು? ಸೂಕ್ಷ್ಮ ಮನಸಿನವರಿಗೆ ನ್ಯಾಯ ಸಿಗುವುದು ಎಂದು?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT