ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್ ಚುನಾವಣೆ: 24 ಜನ ಕಣದಲ್ಲಿ

Last Updated 4 ಸೆಪ್ಟೆಂಬರ್ 2013, 6:16 IST
ಅಕ್ಷರ ಗಾತ್ರ

ಸಿಂದಗಿ: ನಗರದ ಪ್ರತಿಷ್ಠಿತ 49 ವರ್ಷ ಗಳ ಇತಿಹಾಸ ಹೊಂದಿದ ದಿ ಸಿಂದಗಿ ಪಟ್ಟಣ ಸಹಕಾರಿ ಬ್ಯಾಂಕ್ ನಿಯ ಮಿತದ 13 ಸ್ಥಾನಗಳಿಗಾಗಿ ಇದೇ  8 ರಂದು ಚುನಾವಣೆ ನಡೆಯಲಿದ್ದು, ಸೋಮವಾರ ನಾಮಪತ್ರ ಹಿಂದಕ್ಕೆ ಪಡೆಯುವ ದಿನವಾಗಿತ್ತು.
13 ಸ್ಥಾನಗಳಿಗಾಗಿ 24 ಅಭ್ಯರ್ಥಿ ಗಳು ಸ್ಪರ್ಧಾ ಕಣದಲ್ಲಿ ಉಳಿದಿದ್ದಾರೆ.

ಕಣದಲ್ಲಿ ಉಳಿದವರ ವಿವರ: ಸಾಮಾನ್ಯ ವರ್ಗದ ಒಂಬತ್ತು ಸ್ಥಾನಗಳಿ ಗಾಗಿ 15 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ- ಅಲ್ಲಾಪಟೇಲ್ ಬಿರಾ ದಾರ, ಗುರುಬಸಪ್ಪ ದೇಸಾಯಿ, ಗುರುಲಿಂಗಪ್ಪ ವಡ್ಡೋಡಗಿ, ಚಂದ್ರಶೇಖರ ಜೋಗೂರ, ದುಂಡಪ್ಪ ಮಲ್ಲಪ್ಪ ಸೊನ್ನದ, ನಿಹಾಲಚಂದ ಪೋರವಾಲ, ಪ್ರಕಾಶ ಉಪ್ಪಿನ, ಪ್ರಕಾಶ ಕೋರಿ, ಬಸವರಾಜ ಶಹಾಪುರ, ಮಹಾಂತೇಶ ಹಿರೇಮಠ, ರವಿ ನಾಗೂರ, ಶರಣಪ್ಪ ವಾರದ, ಷಣ್ಮುಖಪ್ಪ ಸಂಗಮ, ಸುರೇಶಬಾಬು ಜೋಗೂರ, ವಿಜಯ ಕುಮಾರ ವಾರದ.

ಹಿಂದುಳಿದ ವರ್ಗ ಮೀಸಲು: ಒಂದು ಸ್ಥಾನಕ್ಕಾಗಿ ಇಬ್ಬರು ಕಣದಲ್ಲಿ ಉಳಿದಿದ್ದಾರೆ-ಪ್ರಶಾಂತ ದಸ್ಮಾ, ಮಹಾದೇವಪ್ಪ ಸಿಂದಗಿ.
ಮಹಿಳೆ ಮೀಸಲು: ಎರಡು ಸ್ಥಾನ ಗಳಿಗಾಗಿ ನಾಲ್ವರು ಕಣದಲ್ಲಿ ಉಳಿ ದಿದ್ದಾರೆ- ಮಹಾದೇವಿ ಬಮ್ಮಣ್ಣಿ, ಮಹಾದೇವಿ ಪಟ್ಟಣಶೆಟ್ಟಿ, ಮಂಗಲಾ ಲೋಣಿ, ಶಿಲ್ಪಾ ದೇಸಾಯಿ.

ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಮೀಸಲು: ಒಂದು ಸ್ಥಾನಕ್ಕಾಗಿ ಮೂವರು ಕಣದಲ್ಲಿದ್ದಾರೆ-ಅಂಬಪ್ಪ ಸರ್ವಂದಿ, ಲಕ್ಷ್ಮಣ ದೊಡ್ಡಮನಿ, ಶಿವಾನಂದ ಕಾಲೇಬಾಗ.

ಚುನಾವಣೆ ತುಂಬಾ ತುರುಸಿನದ್ದಾಗಿದೆ. ಕಳೆದ 49 ವರ್ಷಗಳ ಕಾಲ ಈ ಬ್ಯಾಂಕ್‌ನ್ನು ತಮ್ಮ ಕೈಯಲ್ಲೇ ಹಿಡಿದಿಟ್ಟುಕೊಂಡಿದ್ದ ನಗರದ ವಾರದ ಮನೆತದನಲ್ಲಿ ಬ್ಯಾಂಕ್ ಸಂಸ್ಥಾಪಕ ಗುರುಸಂಗಪ್ಪ ವಾರದ ಅವರ ಪುತ್ರ ಡಾ.ವಿಜಯಕುಮಾರ ವಾರದ ಮತ್ತು ಸುಮಾರು ವರ್ಷಗಳಿಂದ ಅಧ್ಯಕ್ಷರಾಗಿಯೇ ಮುಂದುವರೆದುಕೊಂಡು ಬಂದಿರುವ ಶರಣಪ್ಪ ವಾರದ ಇವರ ಮಧ್ಯೆ ಎರಡು ಬಣಗಳಾಗಿವೆ.

ಜೋಗೂರ ಮನೆತನದಲ್ಲಿ ಚಂದ್ರ ಶೇಖರ ಜೋಗೂರ ಮತ್ತು ಸುರೇಶ ಬಾಬು ಜೋಗೂರ ಅಣ್ಣ- ತಮ್ಮಂದಿರು ವಿರೋಧಿ ಬಣದಲ್ಲಿದ್ದಾರೆ.
ದುಂಡಪ್ಪ ಮಲ್ಲಪ್ಪ ಸೊನ್ನದ ಏಕಾಂಗಿಯಾಗಿ ಸಾಮಾನ್ಯ ಕ್ಷೇತ್ರದಲ್ಲಿ ಪ್ರಭಲ ಸ್ಪರ್ಧೆ ಒಡ್ಡಿದ್ದಾರೆ.

ಕಬ್ಬು ಬೆಳೆಗಾರರ ಸಭೆ
ಸಿಂದಗಿ:
ಕರ್ನಾಟಕ ರಾಜ್ಯ ರೈತ ಸಂಘ ತಾಲ್ಲೂಕು ಘಟಕದ ಆಶ್ರಯ ದಲ್ಲಿ ಇದೇ 6ರಂದು ಮಧ್ಯಾಹ್ನ 12 ಗಂಟೆಗೆ ನಗರದ ಎ.ಪಿ.ಎಂ.ಸಿ ರೈತ ಭವನದಲ್ಲಿ ಕಬ್ಬು ಬೆಳೆಗಾರರ ಸಭೆ ಕರೆಯಲಾಗಿದೆ.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ರಾಮಪ್ಪ ರಂಜಣಗಿ ಅಧ್ಯ ಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ   ಕಬ್ಬು ಬೆಳೆಗಾರರ ಸಮಸ್ಯೆಗಳ ಕುರಿತಾಗಿ ಚರ್ಚೆ ನಡೆಯಲಿದೆ.

ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಕಬ್ಬು ಬೆಳೆಗಾರರು ಆಗಮಿಸಬೇಕು ಎಂದು ರೈತ ಸಂಘದ ಮುಖಂಡರಾದ ಬಸನ ಗೌಡ ಧರ್ಮಗೊಂಡ ಮತ್ತು ಪರುಶುರಾಮ ಹುಡೇದ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT