ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್‌ ಆಫ್‌ ಇಂಗ್ಲೆಂಡ್‌ ಪ್ಲಾಸ್ಟಿಕ್‌ ನೋಟು ಶೀಘ್ರ

Last Updated 12 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಲಂಡನ್‌(ಐಎಎನ್‌ಎಸ್‌): ಬ್ಯಾಂಕ್‌ ಆಫ್‌ ಇಂಗ್ಲೆಂಡ್‌ ಸದ್ಯದಲ್ಲೇ ಗುಣ ಮಟ್ಟದ ಪ್ಲಾಸ್ಟಿಕ್‌ ನೋಟುಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿದೆ. ಸಾರ್ವಜನಿಕರು ಯಾವುದೇ ಕಿರಿಕಿರಿ ಇಲ್ಲದೆ, ಪೂರ್ಣ ವಿಶ್ವಾಸದೊಂದಿಗೆ ಇವನ್ನು ಬಳಸಬಹುದಾಗಿದೆ ಎಂದಿದೆ. 3 ವರ್ಷಗಳಿಂದ ಪ್ಲಾಸ್ಟಿಕ್‌ ನೋಟು ತಯಾರಿಕೆಗೆ ವಿವಿಧ ಸಾಮಗ್ರಿಗಳನ್ನು ಬಳಸಿ ಪರಿಶೀಲಿಸಲಾಗಿದೆ.

ಸದ್ಯ ಚಾಲ್ತಿ ಯಲ್ಲಿರುವ ಕಾಗದದ ನೋಟುಗಳಿಗಿಂತ ಪಾಲಿಮರ್‌ನಿಂದ ಸಿದ್ಧಪಡಿಸಿದ ನೋಟು ಚಲಾವಣೆಗೆ ಉತ್ತಮ ಎಂಬುದು ಖಚಿತವಾಗಿದೆ. 5 ಪೌಂಡ್‌ ನೋಟಿನಲ್ಲಿ ಸರ್‌ ವಿನ್‌ಸ್ಟನ್‌ ಚರ್ಚಿಲ್‌ ಅವರ ಚಿತ್ರ ಮುದಿ್ರಿಸಲಾಗುವುದು ಎಂದೂ ಬ್ಯಾಂಕ್‌ ತಿಳಿಸಿದೆ. ಹೊಸ ನೋಟು ಚಲಾವಣೆಗೂ ಮುನ್ನ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲು ಆಲೋಚಿಸುತ್ತಿರು ವುದಾಗಿಯೂ ಬ್ಯಾಂಕ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT