ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್‌ಗಳಿಗೆ ಪ್ರೋತ್ಸಾಹ ಧನ

ಜನ ಧನ ಯೋಜನೆ ಗುರಿ ಸಾಧನೆಗೆ ಉತ್ತೇಜನ: ಚಿಂತನೆ
Last Updated 11 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ದೇಶದ ಪ್ರತಿ ಕುಟುಂಬವನ್ನೂ ಬ್ಯಾಂಕಿಂಗ್‌ ಸೇವೆಗಳ ವ್ಯಾಪ್ತಿ ತರುವ ಮಹತ್ವ ಜನ ಧನ ಯೋಜನೆ ಜಾರಿಯಲ್ಲಿ ಹಾಕಿಕೊಂಡಿ ರುವ ಗುರಿ ಸಾಧನೆಗಾಗಿ ಕೇಂದ್ರ ಸರ್ಕಾರ ಹೊಸ ಕಾರ್ಯತಂತ್ರ ರೂಪಿಸಲು ಮುಂದಾಗಿದೆ.

ಬ್ಯಾಂಕ್‌ ಸೇವಾ ವ್ಯಾಪ್ತಿಗೆ ಹೆಚ್ಚು ಜನರನ್ನು ಒಳಪಡಿಸಿಕೊಳ್ಳುವ ಸಲು ವಾಗಿ ಜನ ಧನ ಖಾತೆಗಳನ್ನು ಅಧಿಕ ಪ್ರಮಾಣದಲ್ಲಿ ತೆರೆಯುವ ಬ್ಯಾಂಕ್‌ ಗಳಿಗೆ ಪ್ರೋತ್ಸಾಹ ಧನ ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಪ್ರೋತ್ಸಾಹ ಧನ ಕಾರ್ಯತಂತ್ರ ಕುರಿತು ರೂಪುರೇಷೆ ಸಿದ್ಧಪಡಿಸಲಾ ಗುತ್ತಿದೆ. ಸದ್ಯದಲ್ಲೇ ಅದು ಪ್ರಕಟ ಗೊಳ್ಳಲಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯದ ಮೂಲಗಳು ಗುರುವಾರ ತಿಳಿಸಿವೆ.

ಬಿ.ಸಿಗೆ ರೂ 5,000 ಸಂಭಾವನೆ
ಅಲ್ಲದೇ, ದೂರದ ಹಳ್ಳಿಗಾಡಿನಲ್ಲಿ ರುವ ಗ್ರಾಹಕರಿಗೂ ಬ್ಯಾಂಕಿಂಗ್‌ ಸೇವೆ ಒದಗಿಸುವ ಸಲುವಾಗಿ ಹಾಗೂ ಬ್ಯಾಂಕ್‌ ಮತ್ತು ಗ್ರಾಹಕರ ನಡುವಿನ ಸಂಪರ್ಕದ ಕೊಂಡಿಯಂತೆ ಕೆಲಸ ಮಾಡುತ್ತಿರುವ ಬಿಜಿನೆಸ್‌ ಕರೆಸ್ಪಾಂಡೆ ನ್ಸ್‌ಗಳಿಗೆ (ಬಿ.ಸಿ) ಮಾಸಿಕ ಕನಿಷ್ಠ ರೂ 5,000 ಸಂಭಾವನೆಯನ್ನು ಕೇಂದ್ರ ಸರ್ಕಾರ ನಿಗದಿಪಡಿಸಿದೆ.

ಪ್ರಧಾನಿ ನೇತೃತ್ವದ ಸಭೆ
ಈ ಮಧ್ಯೆ, ಪ್ರಧಾನ ಮಂತ್ರಿ ಜನ ಧನ ಯೋಜನೆಯ (ಪಿಎಂಜೆಡಿವೈ) ಮೊದಲ ಹಂತ (7.50 ಕೋಟಿ ಖಾತೆ ತೆರೆ ಯುವ) ಗುರಿ ಮುಟ್ಟಲು ನಿಗದಿಪಡಿ ಸಿದ್ದ ಗಡುವನ್ನು 2015ರ ಆಗಸ್ಟ್‌ 15ರಿಂದ ಜನವರಿ 16ಕ್ಕೆ ಮರು ಹೊಂದಾಣಿಕೆ ಮಾಡಲಾಗಿದೆ. ಆ ಮೂಲಕ ತ್ವರಿತಗತಿಯಲ್ಲಿ ಕೆಲಸ ಮಾಡಿ ಗುರಿ ಸಾಧಿಸಬೇಕೆಂಬ ಸಂದೇಶ ವನ್ನೂ ರವಾನಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಜನ ಧನ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಲಾಯಿತು.
ಆ. 28ರಂದು ಆರಂಭಗೊಂಡ ಜನ ಧನ ಯೋಜನೆಯಡಿ ಈವರೆಗೆ 3.02 ಕೋಟಿ ಉಳಿತಾಯ ಖಾತೆಗಳನ್ನು ಹೊಸದಾಗಿ ತೆರೆಯಲಾಗಿದೆ.
ಗ್ರಾಮೀಣ ಪ್ರದೇಶಗಳಲ್ಲಿ 1.89 ಕೋಟಿ ಹಾಗೂ ನಗರ ಪ್ರದೇಶಗಳಲ್ಲಿ 1.13 ಕೋಟಿ  ಖಾತೆ ತೆರೆಯಲಾಗಿದೆ.  ಪ್ರತಿ ಖಾತೆಗೆ ರೂ 495ರಂತೆ ಒಟ್ಟು ರೂ 1,496.51 ಕೋಟಿ ಠೇವಣಿಯೂ ಸಂಗ್ರಹವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT