ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಟರಿ ಸ್ಪ್ರೇಯರ್

Last Updated 23 ಜುಲೈ 2012, 19:30 IST
ಅಕ್ಷರ ಗಾತ್ರ

ವ್ಯವಸಾಯದಲ್ಲಿ ಸ್ಪ್ರೇಯರ್‌ಗಳ ಬಳಕೆ ಈಗ ಸರ್ವೇಸಾಮಾನ್ಯ. ತರಕಾರಿ, ತೋಟ, ಹೂ ತೋಟ, ಗದ್ದೆಗಳಲ್ಲಿ ಕೀಟ, ಸೋಂಕುಗಳ ಹತೋಟಿಗೆ ರಾಸಾಯನಿಕ ಅಥವಾ ನೈಸರ್ಗಿಕ ಔಷಧಗಳನ್ನು ಸಿಂಪಡಿಸಲು ಸ್ಪ್ರೇಯರ್ ಬೇಕೇಬೇಕು.

ಒಂದು ಕೈಯಲ್ಲಿ ಪಂಪ್ ಮಾಡುತ್ತ ಸಿಂಪರಣೆ ಕೈಗೊಳ್ಳುವುದು ಸ್ವಲ್ಪ ಕಷ್ಟದ ಕೆಲಸ. ಅದನ್ನು ಸುಲಭಗೊಳಿಸಲು ಅಗ್ರಿಮೇಟ್, ಈಗ ಬ್ಯಾಟರಿ ಚಾಲಿತ ಸ್ಪ್ರೇಯರ್ ಪರಿಚಯಿಸಿದೆ. ಇದರಲ್ಲಿ ನಾಲ್ಕು ಮಾದರಿಗಳಿವೆ. ಇದರಲ್ಲಿ ಒಮ್ಮೆ 15 ಲೀಟರ್ ದ್ರಾವಣ ತುಂಬಬಹುದು. ಒಮ್ಮೆ ಚಾರ್ಜ್ ಮಾಡಿದರೆ 1-2 ಎಕರೆ ಭೂಮಿಗೆ ಸಿಂಪರಣೆ ಮಾಡಬಹುದು.

ಇದರ ಬಳಕೆಯಿಂದ ಸಿಂಪರಣೆಯ ಕಾರ್ಯಕ್ಷಮತೆ ಹೆಚ್ಚುತ್ತದೆ, ಕಾರ್ಮಿಕ ಶಕ್ತಿ ಉಳಿತಾಯವಾಗುತ್ತದೆ. ಮುಖ್ಯವಾಗಿ ಇದು ಪೆಟ್ರೋಲ್ ಚಾಲಿತ ಯಂತ್ರವಲ್ಲ. ಕೈಯಿಂದ ಗಾಳಿ ಹಾಕುವ ಅಗತ್ಯ ಇಲ್ಲ. ಹೀಗಾಗಿ ಸಿಂಪರಣೆ ಮಾಡುವವರಿಗೆ ಆಯಾಸ ಆಗುವುದಿಲ್ಲ. ಮಹಿಳೆಯರು ಕೂಡಾ ಸುಲಭವಾಗಿ ಬಳಸಬಹುದಾಗಿದೆ.

ಇದರ ಬಳಕೆ, ದೊರೆಯುವ ಸಹಾಯಧನ, ಉಚಿತ ಪ್ರಾತ್ಯಕ್ಷಿಕೆಗೆ 1800 425 7475 ಶುಲ್ಕ ರಹಿತ ಸಂಖ್ಯೆಗೆ ಕರೆ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT