ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡಗಿ ಮೆಣಸಿನಕಾಯಿ ಆವಕ ಹೆಚ್ಚಳ

Last Updated 17 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬ್ಯಾಡಗಿ: ಇಲ್ಲಿನ ಮಾರು­ಕಟ್ಟೆಗೆ ಸೋಮವಾರ 18,208 ಚೀಲ ಒಣ ಮೆಣಸಿನಕಾಯಿ ಆವಕವಾ­ಗಿದೆ.  ಬ್ಯಾಡಗಿ ಕಡ್ಡಿ ಮೆಣಸಿನಕಾಯಿ ₨ 1,819–15,999, ಬ್ಯಾಡಗಿ ಡಬ್ಬಿ ಮೆಣಸಿನಕಾಯಿ ₨ 2,009–20,019, ಗುಂಟೂರ ತಳಿ ಮೆಣಸಿನಕಾಯಿ ₨ 1,509–8,009 ದರದಲ್ಲಿ ಮಾರಾಟ­ವಾಗಿದೆ. 

ಕಳೆದ ಗುರುವಾರಕ್ಕಿಂತ ಬ್ಯಾಡಗಿ ಡಬ್ಬಿ ಮೆಣಸಿನಕಾಯಿ ಗರಿಷ್ಠ ಧಾರಣೆ­ಯಲ್ಲಿ ₨ 2,980 ಮತ್ತು ಗುಂಟೂರ ತಳಿ ಮೆಣಸಿನಕಾಯಿಯಲ್ಲಿ ₨ 8,91 ಇಳಿಕೆ ಕಂಡು ಬಂದಿದೆ.

ಪ್ರಸಕ್ತ ವರ್ಷ ಮಾರುಕಟ್ಟೆಗೆ ಹೆಚ್ಚು ಮೆಣಸಿನಕಾಯಿ ಬರಬಹುದೆಂದು ನಿರೀಕ್ಷಿಸಲಾಗಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಮಾರು­ಕಟ್ಟೆಗೆ ಒಟ್ಟಾರೆ 62,940 ಚೀಲ ಮೆಣಸಿನಕಾಯಿ ಆವಕವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT