ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡ್ಮಿಂಟನ್: ಐಒಸಿಎಲ್, ಒಎನ್‌ಜಿಸಿಗೆ ಪ್ರಶಸ್ತಿ

Last Updated 27 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಬೆಂಗಳೂರು: ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (ಐಒಸಿಎಲ್) ಹಾಗೂ ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ (ಒಎನ್‌ಜಿಸಿ) ತಂಡದವರು 34ನೇ ಪಿಎಸ್‌ಪಿಬಿ ಅಂತರ ವಿಭಾಗದ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್ ಆಗಿದ್ದಾರೆ.

ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ  (ಕೆಒಎ) ಹಾಗೂ ಒಎನ್‌ಜಿಸಿ ಆಶ್ರಯದಲ್ಲಿ ನಡೆಯುತ್ತಿರುವ ಈ ಟೂರ್ನಿಯ ಪುರುಷರ ವಿಭಾಗದ ಫೈನಲ್‌ನಲ್ಲಿ ಐಒಸಿಎಲ್ 3-0          ರಲ್ಲಿ ಭಾರತ್ ಪೆಟ್ರೋಲಿಯಮ್ ಕಾರ್ಪೋರೇಷನ್ ಲಿಮಿಟೆಡ್ (ಬಿಪಿಸಿಎಲ್) ತಂಡವನ್ನು ಮಣಿಸಿತು.

ಕೆಒಎ ಕೋರ್ಟ್‌ನಲ್ಲಿ ಗುರುವಾರ ನಡೆದ ಪಂದ್ಯಗಳಲ್ಲಿ ಆರ್.ಎಂ.ವಿ.ಗುರುಸಾಯಿ ದತ್ 21-16, 21-8ರಲ್ಲಿ ಆದಿತ್ಯ ಪ್ರಕಾಶ್       ಎದುರೂ, ಅಜಯ್ ಜಯರಾಮ್ 21-13, 21-15ರಲ್ಲಿ ಅನೂಪ್ ಶ್ರೀಧರನ್ ವಿರುದ್ಧವೂ ಗೆದ್ದರು. ಅರುಣ್ ವಿಷ್ಣು-ತರುಣ್ ಕೋನಾ 21-16, 21-13ರಲ್ಲಿ ಅದಿತ್ಯ-ಅನೂಪ್ ಅವರನ್ನು ಪರಾಭವಗೊಳಿಸಿದರು.

ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಒಎನ್‌ಜಿಸಿ 3-0ರಲ್ಲಿ ಎಚ್‌ಪಿಸಿಎಲ್ ತಂಡವನ್ನು ಸೋಲಿಸಿತು.

ಮಹಿಳೆಯರ ವಿಭಾಗದ ಫೈನಲ್‌ನಲ್ಲಿ ಒನ್‌ಜಿಸಿ 2-0ರಲ್ಲಿ ಎಚ್‌ಪಿಸಿಎಲ್ ತಂಡವನ್ನು ಸೋಲಿಸಿತು. ಪಿ.ಸಿ.ತುಳಸಿ 21-15, 21-18ರಲ್ಲಿ ತಾನ್ವಿ ಲಾಡ್ ಎದುರು ಗೆದ್ದರು. ಅಶ್ವಿನಿ ಪೊನ್ನಪ್ಪ-ತುಳಸಿ 7-21, 22-20, 21-12ರಲ್ಲಿ ಅಪರ್ಣಾ ಬಾಲನ್-ಪ್ರಜಕ್ತಾ ಸಾವಂತ್ ಎದುರು ಜಯ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT