ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡ್ಮಿಂಟನ್ ಪಂದ್ಯಾವಳಿ: ಫಲಿತಾಂಶ

Last Updated 19 ಸೆಪ್ಟೆಂಬರ್ 2011, 7:15 IST
ಅಕ್ಷರ ಗಾತ್ರ

ಕನಕಪುರ: ಬೆಂಗಳೂರು ವಿಶ್ವವಿದ್ಯಾಲಯದ ಅಂತರ ಕಾಲೇಜು ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿಯು ರೂರಲ್ ಕಾಲೇಜಿನಲ್ಲಿ ಮೂರು ದಿನಗಳ ಕಾಲ  ನಡೆಯಿತು ಎಂದು ಕಾಲೇಜಿನ ದೈಹಿಕ ನಿರ್ದೇಶಕ ವಿಕ್ರಮ್ ತಿಳಿಸಿದ್ದಾರೆ. 

 ಪಂದ್ಯಾವಳಿಯಲ್ಲಿ ಪುರುಷ ವಿಭಾಗದಿಂದ 65 ಮತ್ತು ಮಹಿಳಾ ವಿಭಾಗದಿಂದ 25 ತಂಡಗಳು ಭಾಗವಹಿಸಿದ್ದವು. ಪುರುಷ ತಂಡಗಳನ್ನು ಉತ್ತರ ಮತ್ತು ದಕ್ಷಿಣ ವಲಯಗಳಾಗಿ  ವಿಂಗಡಿ ಪಂದ್ಯ ನಡಿಸಲಾಯಿತು.

ಉತ್ತರ ವಲಯದಲ್ಲಿ ಎಂ.ಎಸ್.ರಾಮಯ್ಯ ಕಾಲೇಜು ಪ್ರಥಮ ಸ್ಥಾನ, ಗಾರ್ಡನ್‌ಸಿಟಿ ಕಾಲೇಜು ದ್ವಿತೀಯ ಸ್ಥಾನ, ದಕ್ಷಿಣ ವಲಯದಲ್ಲಿ ಸುರಾನಾ ಕಾಲೇಜು ಪ್ರಥಮ ಸ್ಥಾನ, ನ್ಯಾಷನಲ್ ಕಾಲೇಜು ದ್ವಿತೀಯ ಸ್ಥಾನವನ್ನು ಪಡೆದವು.

ಅಂತಿಮವಾಗಿ ಪುರುಷರ ವಿಭಾಗದಲ್ಲಿ ಸುರಾನಾ ಕಾಲೇಜು ಪ್ರಥಮ ಸ್ಥಾನ, ಎಂ.ಎಸ್. ರಾಮಯ್ಯ ಕಾಲೇಜು ದ್ವಿತೀಯ ಸ್ಥಾನ ಗಳಿಸಿವೆ. ಮಹಿಳಾ ವಿಭಾಗದಲ್ಲಿ ಸೆಂಟ್ ಜೋಸೆಫ್ ಆರ್ಟ್ಸ್ ಸೈನ್ಸ್ ಕಾಲೇಜು ಪ್ರಥಮ ಸ್ಥಾನ, ಶೇಷಾದ್ರಿಪುರಂ ಕಾಲೇಜು ದ್ವೀತಿಯ ಸ್ಥಾನ ಗಳಿಸಿವೆ. 

 ಕಾಲೇಜಿನ ಪ್ರಾಂಶುಪಾಲ ಪ್ರೊ. ಕೆ.ಎಂ. ರಾಮಕೃಷ್ಣ ವಿಜೇತರಿಗೆ ಟ್ರೋಫಿ ನೀಡಿದರು. ದೈಹಿಕ ನಿರ್ದೇಶಕ ವಿಕ್ರಮ್,  ಸಂಸ್ಥೆಯ ಕಾರ್ಯದರ್ಶಿ ಸಿ.ರಮೇಶ್, ನಿರ್ದೇಶಕರಾದ ಎಂ.ಎಲ್.ಶಿವಕುಮಾರ್, ತಿಮ್ಮಯ್ಯ, ಪ್ರಾಧ್ಯಾಪಕ ಸತೀಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT