ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡ್ಮಿಂಟನ್: ಪ್ರೀ ಕ್ವಾರ್ಟರ್ ಫೈನಲ್‌ಗೆ ಆದಿತ್ಯ ಪ್ರಕಾಶ್

Last Updated 22 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಅನೂಪ್ ಶ್ರೀಧರ್ ಇಲ್ಲಿ ನಡೆಯುತ್ತಿರುವ 76ನೇ ರಾಷ್ಟ್ರೀಯ ಸೀನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸೋಲು ಅನುಭವಿಸಿ ಹೊರಬಿದ್ದರು.

ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ (ಕೆಬಿಎ) ಕೋರ್ಟ್‌ನಲ್ಲಿ ಭಾನುವಾರ ನಡೆದ ಮೂರನೇ ಸುತ್ತಿನ ಪಂದ್ಯದಲ್ಲಿ ಅಗ್ರಶ್ರೇಯಾಂಕದ ಆಟಗಾರ ಸೌರಭ್ ವರ್ಮಾ 21-15, 21-18 ರಲ್ಲಿ ಕರ್ನಾಟಕದ ಸ್ಪರ್ಧಿಯನ್ನು ಮಣಿಸಿ ಪ್ರೀ ಕ್ವಾರ್ಟರ್ ಫೈನಲ್‌ಗೆ ಮುನ್ನಡೆದರು.

ಜಿದ್ದಾಜಿದ್ದಿನ ಪೈಪೋಟಿ ಕಂಡುಬಂದ ಎರಡನೇ ಸೆಟ್‌ನಲ್ಲಿ ಇಬ್ಬರೂ 18-18 ರಲ್ಲಿ ಸಮಬಲ ಸಾಧಿಸಿದ್ದರು. ಈ ಹಂತದಲ್ಲಿ ಕೆಲವೊಂದು ತಪ್ಪುಗಳನ್ನು ಮಾಡಿದ್ದು ಅನೂಪ್‌ಗೆ ಮುಳುವಾಗಿ ಪರಿಣಮಿಸಿತು.

ಕಳೆದ ಬಾರಿಯ ಚಾಂಪಿಯನ್ ಅರವಿಂದ್ ಭಟ್ ಮತ್ತು ಕರ್ನಾಟಕದ ಆದಿತ್ಯ ಪ್ರಕಾಶ್ 16ರ ಘಟ್ಟ ಪ್ರವೇಶಿಸುವಲ್ಲಿ ಯಶಸ್ವಿಯಾದರು. ಆರನೇ ಶ್ರೇಯಾಂಕ ಪಡೆದಿರುವ ಅರವಿಂದ್ 21-16, 21-17 ರಲ್ಲಿ ಆಂಧ್ರ ಪ್ರದೇಶದ ಕೆ. ಅಜಯ್ ಕುಮಾರ್ ಅವರನ್ನು ಸೋಲಿಸಿದರು.

ಆದಿತ್ಯ 21-18, 21-14 ರಲ್ಲಿ ಮಹಾರಾಷ್ಟ್ರದ ಸಾಗರ್ ಚೋಪ್ಡಾ ವಿರುದ್ಧ ಜಯ ಪಡೆದರು. ಕರ್ನಾಟಕದ ಇನ್ನೊಬ್ಬ ಸ್ಪರ್ಧಿ ಅಭಿಷೇಕ್ ಎಲಿಗಾರ್ ಎರಡನೇ ಸುತ್ತಿನಲ್ಲಿ 9-21, 12-21 ರಲ್ಲಿ ರೈಲ್ವೆಯ ವಿನಯ್ ಕುಮಾರ್ ಕೈಯಲ್ಲಿ ಪರಾಭವಗೊಂಡರು.

ಎರಡನೇ ದಿನ ಮಹಿಳೆಯರ   ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಕೇರಳದ ದಯಾ ಎಲ್ಸಾ ಜೇಕಬ್ ಅಚ್ಚರಿಯ ಫಲಿತಾಂಶ ನೀಡಿದರು. ಅವರು 21-14, 21-10 ರಲ್ಲಿ ಆರನೇ ಶ್ರೇಯಾಂಕದ ಆಟಗಾರ್ತಿ ಪಿಎಸ್‌ಪಿಬಿಯ ಅರುಂಧತಿ ಪಂತ್ವಾನೆ ವಿರುದ್ಧ ಜಯ ಪಡೆದರು.

ಅಗ್ರಶ್ರೇಯಾಂಕದ ಆಟಗಾರ್ತಿ ಕೇರಳದ ಪಿ.ಸಿ. ತುಳಸಿ 21-19, 21-13 ರಲ್ಲಿ ಏರ್ ಇಂಡಿಯಾದ ಆರತಿ ಸಾರಾ ಸುನಿಲ್ ಅವರನ್ನು ಸೋಲಿಸಿ ದರು. ಕರ್ನಾಟಕದ ರುತ್ ಮಿಶಾ, ಜಾಕ್ವೆಲಿನ್ ರೋಸ್ ಕುನ್ನತ್, ಅರ್ಶೀನ್ ಸಯೀದಾ ಸಾದತ್ ಮತ್ತು ಸಿಂಧು ಭಾರದ್ವಾಜ್ ಸೋಲು ಅನುಭವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT