ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡ್ಮಿಂಟನ್: ಬೆಳಗಾವಿಗೆ ಪ್ರಶಸ್ತಿ

Last Updated 11 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ದಾವಣಗೆರೆ: ಬೆಳಗಾವಿ ವಿಭಾಗವು ಜಿಲ್ಲಾಡಳಿತ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ನಡೆದ 14 ಮತ್ತು 17 ವರ್ಷದೊಳಗಿನವರ  ಪ್ರಾಥಮಿಕ ಮತ್ತು ಪ್ರೌಢಶಾಲಾ ಮಟ್ಟದ ಬಾಲಕ ಬಾಲಕಿಯರ ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಎರಡೂ ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದುಕೊಂಡಿತು.

ಗುರುವಾರ  ಕೊನೆಗೊಂಡ ಈ ಟೂರ್ನಿಯು ರೌಂಡ್ ರಾಬಿನ್ ಮಾದರಿಯಲ್ಲಿ ಆಯೋಜನೆಯಾಗಿತ್ತು. ಬೆಳಗಾವಿಯ ಬಾಲಕರ ತಂಡ 2-1ರಲ್ಲಿ ಬೆಂಗಳೂರು ಮೇಲೂ, 2-0ರಲ್ಲಿ ಗುಲ್ಬರ್ಗ ವಿರುದ್ಧವೂ, 2-1ರಲ್ಲಿ ಮೈಸೂರು ಮೇಲೂ ಜಯ ಪಡೆದು ಅಗ್ರಸ್ಥಾನ ತನ್ನದಾಗಿಸಿಕೊಂಡಿತು.

ಬೆಂಗಳೂರು ತಂಡವು ಗುಲ್ಬರ್ಗ ಮತ್ತು ಮೈಸೂರು ವಿರುದ್ಧ ತಲಾ 2-0ರಲ್ಲಿ ಜಯ ಪಡೆದು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟಿತು. 2-0ರಲ್ಲಿ ಗುಲ್ಬರ್ಗ ವಿರುದ್ಧ ಜಯ ಸಾಧಿಸಿದ ಮೈಸೂರು ತಂಡವು ಮೂರನೇ ಸ್ಥಾನ ಪಡೆಯಿತು.

ಬಾಲಕಿಯರ ವಿಭಾಗ: ಬೆಳಗಾವಿಯ ಬಾಲಕಿಯರ ತಂಡವು ಬೆಂಗಳೂರು, ಗುಲ್ಬರ್ಗ, ಮೈಸೂರು ವಿಭಾಗದ ತಂಡಗಳ ವಿರುದ್ಧ ತಲಾ 2-0ರಲ್ಲಿ ವಿಜಯ ಸಾಧಿಸಿ ಚಾಂಪಿಯನ್ ಆಯಿತು. ರನ್ನರ್ ಅಪ್ ಸ್ಥಾನ ಪಡೆದ ಬೆಂಗಳೂರು ವಿಭಾಗವು ಗುಲ್ಬರ್ಗ, ಮೈಸೂರು ವಿರುದ್ಧ ತಲಾ 2-0 ಸೆಟ್‌ಗಳಿಂದ ಜಯ ಸಾಧಿಸಿತು. ಮೈಸೂರು ವಿಭಾಗವು ಗುಲ್ಬರ್ಗದ ಎದುರು 2-0 ಸೆಟ್‌ಗಳಿಂದ ಗೆಲುವು ಸಾಧಿಸಿ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟಿತು.

14ರ ವಯೋಮಿತಿ ವಿಭಾಗ: ಬಾಲಕರ ಪಂದ್ಯದಲ್ಲಿ ಗುಲ್ಬರ್ಗ ವಿಭಾಗವು ಪ್ರಶಸ್ತಿ ತನ್ನದಾಗಿಸಿಕೊಂಡಿತು. ಈ ವಿಭಾಗವು ಬೆಂಗಳೂರು ಹಾಗೂ ಬೆಳಗಾವಿ ವಿರುದ್ಧ ತಲಾ 2-0ರಲ್ಲಿ, ಮೈಸೂರು ವಿರುದ್ಧ 2-1 ಸೆಟ್‌ಗಳಲ್ಲಿ ಗೆಲುವು ಸಾಧಿಸಿತ್ತು.. ಮೈಸೂರು ವಿಭಾಗವು ಬೆಂಗಳೂರು ಹಾಗೂ ಬೆಳಗಾವಿ ವಿರುದ್ಧ 2-0ರಲ್ಲಿ ಜಯ ಸಾಧಿಸಿ ಎರಡನೆ ಸ್ಥಾನ ಪಡೆದರೆ, ಬೆಳಗಾವಿಯು ಬೆಂಗಳೂರು ವಿಭಾಗದ ವಿರುದ್ಧ 2-0ರಲ್ಲಿ ಜಯ ಸಾಧಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT