ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡ್ಮಿಂಟನ್: ಭಾರತ ತಂಡಕ್ಕೆ ಗೆಲುವು

Last Updated 14 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಅಜಯ್ ಜಯರಾಮ್ ಅವರ ಅತ್ಯುತ್ತಮ ಪ್ರದರ್ಶನದ ನೆರವಿನಿಂದ ಭಾರತ ತಂಡದವರು ಮಕಾವ್‌ನಲ್ಲಿ ನಡೆಯುತ್ತಿರುವ ಥಾಮಸ್ ಕಪ್ ಬ್ಯಾಡ್ಮಿಂಟನ್ ಟೂರ್ನಿಯ ಏಷ್ಯಾ ವಲಯದ ಪಂದ್ಯದಲ್ಲಿ ಮತ್ತೊಂದು ಗೆಲುವು ಸಾಧಿಸಿದ್ದಾರೆ.

ಮಂಗಳವಾರ ನಡೆದ ಪಂದ್ಯದಲ್ಲಿ ಭಾರತ ತಂಡ 5-0ರಲ್ಲಿ ಆತಿಥೇಯ ಮಕಾವ್ ತಂಡವನ್ನು ಸೋಲಿಸಿತು. ಮೊದಲ ಪಂದ್ಯದಲ್ಲಿ ಜಯರಾಮ್ 21-9, 21-11ರಲ್ಲಿ ಚಿ ಮನ್ ಲಾಮ್ ಅವರನ್ನು ಸೋಲಿಸಿದರು. ವಿಶ್ವ ರ‌್ಯಾಂಕಿಂಗ್‌ನಲ್ಲಿ 27ನೇ ಸ್ಥಾನದಲ್ಲಿರುವ ಜಯರಾಮ್‌ಗೆ ಎರಡೂ ಗೇಮ್‌ಗಳಲ್ಲಿ ಅಷ್ಟೇನು ಪೈಪೋಟಿ ಎದುರಾಗಲಿಲ್ಲ. ಇದಕ್ಕೆ ಅವರು ಕೇವಲ 24 ನಿಮಿಷ ತೆಗೆದುಕೊಂಡರು.

ಡಬಲ್ಸ್ ಪಂದ್ಯದಲ್ಲಿ ಸನಾವೆ ಥಾಮಸ್ ಹಾಗೂ ವಿ.ದಿಜು 21-6, 21-2ರಲ್ಲಿ ಇಯೊನ್ ವೆಂಗ್ ಲೊ ಹಾಗೂ ಲೊ ಕೆಂಗ್ ಲಾವೊ ಅವರನ್ನು ಪರಾಭವಗೊಳಿಸಿದರು. 17 ನಿಮಿಷಗಳಲ್ಲಿ ಈ ಪಂದ್ಯ ಮುಗಿದು ಹೋಯಿತು. ಈ ಮೂಲಕ ಭಾರತ 2-0 ಮುನ್ನಡೆ ಕಾಯ್ದುಕೊಳ್ಳಲು ಸಾಧ್ಯವಾಯಿತು.

ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ ಕಾಮನ್‌ವೆಲ್ತ್ ಕ್ರೀಡಾಕೂಟದ ಕಂಚಿನ ಪದಕ ವಿಜೇತ ಪಿ.ಕಷ್ಯಪ್ 21-10, 21-7ರಲ್ಲಿ ಚಿ ಚೊಂಗ್ ನಿಗ್ ಅವರನ್ನು ಮಣಿಸಿದರು. ಈ ಕಾರಣ ಭಾರತ 3-0ರಲ್ಲಿ ಮುನ್ನಡೆ ಸಾಧಿಸಿತು.

ಇನ್ನೊಂದು ಪಂದ್ಯದಲ್ಲಿ ಅಕ್ಷಯ್ ದೇವಲ್ಕರ್ ಹಾಗೂ ಪ್ರಣವ್ ಚೋಪ್ರಾ 21-11, 21-13ರಲ್ಲಿ ಕಿನ್ ಫೈ ಲಿಯೊಂಗ್ ಹಾಗೂ ಚಿ ಮನ್ ಲಮ್ ಎದುರು ಗೆದ್ದರು ಗೆದ್ದರು. ಇದು 4-0 ಮುನ್ನಡೆ ತಂದು ಕೊಟ್ಟಿತು. ಮೂರನೇ ಸಿಂಗಲ್ಸ್‌ನಲ್ಲಿ ಸಾಯಿ ಪ್ರಣೀತ್ 21-5, 21-8ರಲ್ಲಿ ಹಾಕ್ ಮನ್ ಲೊ ಅವರನ್ನು ಸೋಲಿಸಿದರು. ಈ ಮೂಲಕ ಭಾರತ 5-0ರಲ್ಲಿ ಗೆದ್ದು ಬೀಗಿತು.

ಆದರೆ ಈ ಪ್ರದರ್ಶನ ಉಬೆರ್ ಕಪ್‌ನಲ್ಲಿ ಮೂಡಿ ಬರಲಿಲ್ಲ. ಭಾರತ ತಂಡದ ಮಹಿಳೆಯರು 2-3ರಲ್ಲಿ ಮಲೇಷ್ಯಾ ಎದುರು ಸೋಲು ಕಂಡರು. ಮೊದಲ ಸಿಂಗಲ್ಸ್ ಪಂದ್ಯದಲ್ಲಿ ಸೈನಾ ನೆಹ್ವಾಲ್ 21-17,  21-16ರಲ್ಲಿ ಜಿಂಗ್ ಯಿ ತಿ ಅವರನ್ನು ಪರಾಭವಗೊಳಿಸಿದರು.

ಆದರೆ ಡಬಲ್ಸ್‌ನಲ್ಲಿ ಜ್ವಾಲಾ ಗುಟ್ಟಾ ಹಾಗೂ ಅಶ್ವಿನಿ ಪೊನ್ನಪ್ಪ ಸೋಲು ಕಂಡರು. ಬಳಿಕ ಪಿ.ವಿ.ಸಿಂಧು ಸಿಂಗಲ್ಸ್‌ನಲ್ಲಿ 16-21, 21-13, 21-9ರಲ್ಲಿ ಲಿಡಿಯಾ ಲಿ ಯಾ ಎದುರು ಗೆದ್ದರು. ಆದರೆ ನಂತರದ ಡಬಲ್ಸ್ ಹಾಗೂ ಸಿಂಗಲ್ಸ್ ಪಂದ್ಯಗಳಲ್ಲಿ ಭಾರತ ಸೋಲು ಕಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT